ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಚಳಿಗಾಲದ ಮಳೆ, ಇದು ಓಖಿ ಎಫ್ಫೆಕ್ಟ್….

0
579

ಬೆಂಗಳೂರಿನಲ್ಲಿ ಕೆಲದಿನಗಳಿಂದ ತುಂತುರು ಮಳೆಯಾಗುತ್ತಿದೆ ಇದರಿಂದ ನಗರದೆಲ್ಲೆಡೆ ತಂಪಾದ ಗಾಳಿ ಬೀಸುತ್ತಿದೆ. ಮಳೆಯಿಂದ ತುಂಬ ಚಳಿ ಕೂಡ ಶುರುವಾಗಿದೆ ಇದನ್ನು ಗಮನಿಸಿದ ಉದ್ಯಾನ-ನಗರಿ ಜನ ಅಯ್ಯೋ ಚಳಿಗಾಲ ಬಂತು ಅದಕ್ಕೆ ತುಂಬ ಚಳಿ ಶುರುವಾಗಿದೆ ಎಂದು ಹೇಳುತ್ತಿದ್ದಾರೆ, ಆದರೆ ಅಸಲಿಗೆ ಇದು ಚಲಿಗಾಲದಿಂದ ಬಂದಿರುವ ಚಳಿಯಲ್ಲ, ಇದು “ಒಖಿ” ಎಫೆಕ್ಟ್.

ಏನಿದು “ಒಖಿ” ಅಂತೀರ, “ಒಖಿ” ಎಂಬುದು ಚಂಡಮಾರುತದ ಹೆಸರು. ಇದರಿಂದಲೆ ನಗರದ ಕೆಲವು ಭಾಗಗಳಲ್ಲಿ ಜೋರು ಗಾಳಿ ಸಹಿತ ತುಂತುರು ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಇದೇ ರೀತಿ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯವರು ತಿಳಿಸಿದ್ದಾರೆ.

ಒಖಿ ಚಂಡಮಾರುತದ ಪ್ರಭಾವ ತಗ್ಗಿದ ಎರಡು ಮೂರು ದಿನಗಳ ನಂತರ ಬಂಗಾಳಕೊಲ್ಲಿಯಲ್ಲಿಯೇ ಮತ್ತೊಂದು ಚಂಡಮಾರುತ ಸೃಷ್ಟಿಯಾಗಲಿದೆ. ಮೋಡಗಳು ಸರಿಯುವವರೆಗು ರಾಜ್ಯಕ್ಕೆ ಚಳಿ ಪ್ರವೇಶವಾಗುವುದಿಲ್ಲ, ಈ ಎರಡು ಚಂಡಮಾರುತಗಳ ಪ್ರಭಾವದಿಂದ ಮೋಡ ಕವಿದ ವಾತಾವರಣ ಇದೆ. ಹಾಗಾಗಿ ಇನ್ನೂ 15 ದಿನಗಳವರೆಗೆ ಚಳಿಗಾಲ ಪ್ರಾರಂಭವಾಗುವುದಿಲ್ಲ, ಈಗಾಗಲೇ ವಾಯುಭಾರ ಕುಸಿತದ ಸೂಚನೆಗಳು ಸಿಕ್ಕಿವೆ. ಇದರಿಂದ ರಾಜ್ಯದ ಪೂರ್ವಭಾಗದ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದ್ದಿದಾರೆ.

ರಾಜ್ಯದಲ್ಲಿ ಮುಂದಿನ ಎರಡು ದಿನಗಳಲ್ಲಿ ಕೊಡಗು, ಬೆಂಗಳೂರು, ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು ಮಾಹಿತಿ ನೀಡಿದರು.