ಕೇವಲ ಕೇರಳ ಮಾತ್ರವಲ್ಲ, ನಮ್ಮ ಕೊಡಗು ಸಹ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ!! ಅವರಿಗೂ ನಮ್ಮೆಲ್ಲರ ಸಹಾಯ ಬೇಕಿದೆ!!

0
709

ಮಲೆನಾಡಿನಲ್ಲಿ ಮಳೆಯ ಅಬ್ಬರಕ್ಕೆ ಜನರ ಜೀವನವೇ ನೀರಿನಲ್ಲಿ ತೇಲುತ್ತಿದು ಸಾವಿನ ಸಂಖ್ಯೆಯಲ್ಲಿ ಬಾರಿ ಏರಿಕೆ ಕಂಡುಬರುತ್ತಿದೆ. ಬೆಟ್ಟಗುಡಗಳು ಕುಸಿದು 250 ಮಂದಿ ಸಿಲುಕಿಕೊಂಡಿದ್ದಾರೆ. ಭೂಮಿಯೇ ಬಾಯ್ತೆರೆದು ಮನೆಗಳು ಕೊಚ್ಚಿಕೊಂಡು ಹೋಗುತ್ತಿವೆ. ಪ್ರವಾಹದಲ್ಲಿ ಲಕ್ಷಾಂತರ ಮಂದಿ ಸಾವು ಬದುಕಿನ ಮದ್ಯೆ ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಸಂಭಂದಪಟಂತೆ ಬೇರೆ ರಾಜ್ಯಗಳಿಗೆ ಸಹಾಯ ಮಾಡುತ್ತಿರುವ ರಾಜ್ಯ ಸರಕಾರ ಕೂಡಲೇ ಎಚ್ಚರಗೊಂಡು ಸ್ವತಹ ತನ್ನ ರಾಜ್ಯದ ಕೊಡಗು ಸೇರಿದಂತೆ ಮಲೆನಾಡಿನ ಪ್ರದೇಶದಲ್ಲಿ ಮಳೆಯಿಂದ ಆಗುತ್ತಿರುವ ಅವಘಡಕ್ಕೆ ನೆಲೆ, ಪ್ರಾಣವನ್ನೇ ಕಳೆದುಕೊಂಡವರಿಗೆ ಪರಿಹಾರ ಕ್ರಮವನ್ನು ಕೈಗೊಳಬೇಕು.

Also read: ವರುಣನ ಆರ್ಭಟ ಕೊಡಗು ಮಕ್ಕಳಿಗೆ ಪೀಕಲಾಟ…

ಕಳೆದ ಮೂರೂ-ನಾಲ್ಕು ವರ್ಷಗಳಿಂದ ಮಳೆಯಿಲ್ಲದೆ ಬರಗಾಲದಿಂದ ತತ್ತರಿಸಿದ ಜನರಿಗೆ ಇಂದಿಗ ಮಳೆಯ ಮಹಾಪೌರದಿಂದ ಮಡಿಕೇರಿ ಕೊಡಗು, ಹಾಸನ ಚಿಕ್ಕಮಗಳೂರಿನ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಮುಂದುವರಿದಿದೆ. ಎರಡು ದಶಕಗಳ ನಂತರದ ಮಹಾಮಳೆಯಿಂದ ಮುಕ್ಕೊಡ್ಲಿನಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರವಾಹಕ್ಕೆ ಸಿಕ್ಕಿ ಹಾಕಿಕೊಂಡು ಸಹಾಯಕ್ಕೆ ಅಂಗಲಾಚುತ್ತಿದ್ದಾರೆ. ಹಾಗೆ ಕೊಡಗಿನ ಎಮ್ಮಟೆಹಳ್ಳ ಹಾಗೂ ಮಕ್ಕಂದೂರು ಪ್ರದೇಶದಲ್ಲಿ ಪ್ರವಾಹದ ಪರಿಸ್ಥಿತಿಯಲ್ಲಿರುವ ಜನರಿಗೆ ಇದ್ದು ಹೆಲಿಕಾಪ್ಟರ್ ಮೂಲಕ ಜನರ ರಕ್ಷಣಾ ಕಾರ್ಯವನ್ನು NDRF ​ ತಂಡ ಮಾಡುತ್ತಿದೆ. ಈಗಾಗಲೇ ಸ್ಥಳೀಯರ ನೆರವಿನಿಂದ ಸಂತ್ರಸ್ತರನ್ನು ಮಡಿಕೇರಿಗೆ ಸ್ಥಳಾಂತರಿಸಲಾಗಿದೆ. ನೀರು ಹರಿವು ಹೆಚ್ಚಾಗಿರುವ ಕಡೆಗಳಿಗೆ ತೆರಳಲು ಅಸಾಧ್ಯವಾಗಿರುವ ಸ್ಥಳಗಳಿಗೆ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಬೇಕಿದೆ.

ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಆ ಸ್ಥಳಗಳಿಗೆ ತಲುಪಲು ಕಷ್ಟಕರವಾಗುತ್ತಿದೆ. ಅಧಿಕವಾಗಿ ಕೊಡಗೂ ಹಾಗೂ ಸುತ್ತಮುತಲಿನ ಬೆಟ್ಟ ಗುಡಗಳು ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ ಇದರಿಂದ ವಿವಿಧ ಭಾಗಗಳಿಗೆ ತೆರಳುವ ಬಸ್ ಸಂಚಾರ ಅಸ್ತವ್ಯಸ್ತವಾಗಿದೆ. ಮೊಬೈಲ್ ನೆಟವರ್ಕ್ ಇಲ್ಲದೆ ಗರುವಾರದಿಂದ ಮನೆಯರನ್ನು ಸಂಪರ್ಕಿಸಲು ಸಾಧ್ಯವಾಗದೇ ಜನರ ಪರದಾಡುತ್ತಿದ್ದಾರೆ. ಇಂತಹ ಪ್ರಾಣಾಪಾಯದಲ್ಲಿ ಸಿಲುಕಿರುವರನ್ನು ಹೋರತರಲು ಎರಡು ರಕ್ಷಣಾ ಸೇನಾ ಪಡೆಯ ಸಹಾಯದಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಈಗಾಗಲೇ ಮಳೆಯಲ್ಲಿ ನಿರಾಶ್ರಿತರಾದವರು ಅಗತ್ಯ ವಸ್ತುಗಳಿಗೆ ಗೋಳಾಡುತ್ತಿದ್ದಾರೆ. ರಕ್ಷಣಾ ಕಾರ್ಯಕ್ಕೆ ಇಳಿದ ಸ್ವಯಂ ಸೇವಕರು ಸಂತ್ರಸ್ತರಿಗೆ ಆಹಾರ, ಇತರೆ ವಸ್ತುಗಳನು ಹಂಚುತ್ತಿದು, ಹಾಗಯೇ ಜಿಲ್ಲೆಯಲ್ಲಿ 25 ಗಂಜಿ ಕೇಂದ್ರ ಆರಂಭಗೊಂಡಿವೆ ಇನ್ನೂ ಹೆಚ್ಚಿನ ಗಂಜಿಕೇಂದ್ರಗಳನ್ನು ತೆರೆಯುವ ಅವಶ್ಯಕತೆ ಇದೆ.

ತುಂಗಾ, ಭದ್ರಾ, ಕಾವೇರಿ, ಕಪಿಲ ನದಿಗಳು ಉಕ್ಕಿ ಹರಿದು ಕೊಡಗು, ಚಿಕ್ಕಮಗಳೂರಿನ ಹಲವು ಪ್ರದೇಶಗಳು ದ್ವೀಪವಾಗಿ ಮಾರ್ಪಟ್ಟಿದ್ದು, ಕಬಿನಿ ಜಲಾಶಯದಿಂದ ಹೆಚ್ಚು ನೀರು ಹರಿಸುತ್ತಿರುವ ಹಿನ್ನಲೆ ಹಳೇ ಮೈಸೂರು ಭಾಗದ ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ದಾವಣಗೆರೆ, ಬಳ್ಳಾರಿಯ ಕಂಪ್ಲಿಯಲ್ಲಿಯೂ ನದಿಗಳು ಉಕ್ಕಿ ಹರಿಯುತ್ತಿದ್ದು, ಅಲ್ಲಿನ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ.
ಕಬಿನಿ ಡ್ಯಾಂನಿಂದ 80 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ ಹಿನ್ನೆಲೆ ಅಪಾಯಮಟ್ಟ ಮೀರಿ ಹರಿಯುತ್ತಿರುವ ಕಪಿಲಾನದಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೋಕಿನ ಮಂಚೂರು, ಆನೆಮಾಳ,ವಡಕನಮಾಳ ಗ್ರಾಮಗಳ ಮನೆಗಳಿಗೆ ನುಗ್ಗಿದ ನೀರುನಿಂದ ನೂರಾರು ಜನ ಮನೆ ಕಳೆದುಕೊಂಡು ಸಂತ್ರಸ್ಥರಾಗಿದ್ದಾರೆ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಗಂಜಿಕೇಂದ್ರ ಸ್ಥಾಪನೆ ಮಾಡಲಾಗಿದೆ ನಂಜನಗೂಡು ತಾಲೋಕು ಸುತ್ತೂರು ಸೇತುವೆ ಭಾಗಶಃ ಮುಳುಗಡೆಗೊಂಡು ಸೇತುವೇ ಮೇಲೆ ವಾಹನ ಸಂಚಾರ ನಿರ್ಬಂಧಗೊಂಡಿದೆ.