ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ ಎಚ್ಚರ; ಹಾಲಿ ಇರುವ 200 ರು. ದಂಡದ ಬದಲಾಗಿ 2000 ರು. ದಂಡ ಕಟ್ಟಬೇಕಾಗುತ್ತೆ..

0
326

ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ಎನ್ನುವುದು ತಿಳಿದ ಜನರು ಹೆಚ್ಚು ನಸೆಯತ್ತ ಸಾಗುತ್ತಿದ್ದಾರೆ. ಅದರಲ್ಲಿ ಸಿಗರೇಟ್ ಬಿಡಿ ಸೇದುವರಿಗಿಂತ ಅದರ ಹೊಗೆಯನ್ನು ತೆಗೆದುಕೊಳ್ಳುವುದು ಹೆಚ್ಚು ಅಪಾಯವೆಂದು ಹಲವು ಸಂಶೋಧನೆಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಧೂಮಪಾನ ಮಾಡುವವರಿಗೆ ರೂ. 200 ವರೆಗೆ ದಂಡ ವಿಧಿಸಿತ್ತು ಅಷ್ಟಾದರೂ ಬಿಡದ ಜನರು ಮತ್ತಷ್ಟು ಧೂಮಪಾನ ಮಾಡುತ್ತಿದ್ದಾರೆ ಅದನ್ನು ಹತ್ತಿಕಲು ಬಾರಿ ದಂಡವನ್ನು ವಿಧಿಸಲು ತಂಬಾಕು ನಿಯಂತ್ರಣಾಧಿಕಾರಿಗಳು 2000 ರೂ ದಂಡ ವಿಧಿಸಲು ಸಜ್ಜಾಗಿದ್ದಾರೆ.

Also read: ಧೂಮಪಾನ ಮಾಡುವ ಮುನ್ನ ಈ ಮಾಹಿತಿ ನೋಡಿ; ಸಿಗರೇಟ್ ಸಹವಾಸ ನಿಮ್ಮ ಲೈಂಗಿಕ ಜೀವನಕ್ಕೆ ಕುತ್ತು ತರಬಹುದು..

ಹೌದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಾನೂನು ಬಹಳ ವರ್ಷಗಳಿಂದಲೇ ಇದೆ. ಆದರೆ ಅದನ್ನು ಪಾಲಿಸುವವರು ವಿರಳ. ಬೆಂಗಳೂರು ನಗರದ ಅಲ್ಲಲ್ಲಿ ಪೊಲೀಸರು ಇಂತಹ ಸಿಗರೇಟು ಪ್ರಿಯರಿಗೆ ಭರ್ಜರಿಯಾಗಿ ಕತ್ತರಿ ಹಾಕಲು ಮುಂದಾಗಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಂಡರೆ ದಂಡ ವಿಧಿಸುತ್ತಾರೆ. 2018 ರಲ್ಲಿ ನಗರದ ವಿ.ವಿ.ಪುರಂನಲ್ಲಿ ಅತ್ಯಧಿಕ ದಂಡ ಮೊತ್ತವನ್ನು ಸಂಗ್ರಹಿಸಿರುವ ಪೊಲೀಸರು.

Also read: ಸಿಗರೆಟ್ ಪ್ರಿಯರೆ ನೀವೂ ಚಹಾ ಜೊತೆಗೆ ಧೂಮಪಾನ ಮಾಡುತ್ತೀರಾ? ಹಾಗಾದ್ರೆ ದೊಡ್ಡ ಗಂಡಾತರ ಎದುರಿಸಬೇಕಾಗುತ್ತೆ ಹೇಗೆ ಅಂತ ಈ ಮಾಹಿತಿ ನೋಡಿ..

ತಂಬಾಕು ಉತ್ಪನ್ನ ಕಾಯ್ದೆ 2003ರಡಿಯಲ್ಲಿ ದಕ್ಷಿಣ ಬೆಂಗಳೂರಿನ ವಿ.ವಿ.ಪುರಂನಲ್ಲಿ ಸುಮಾರು 20 ಲಕ್ಷ ರೂಪಾಯಿ ದಂಡ ಮೊತ್ತ ಸಂಗ್ರಹಿಸಿದ್ದಾರೆ. ಮೈಕೋ ಲೇ ಔಟ್ ನಲ್ಲಿ 13,90,000, ಚಿಕ್ಕಪೇಟೆಯಲ್ಲಿ 13,44,000 ಸಂಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಇದುವರೆಗೆ ಒಟ್ಟು 66,39,580 ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಆದರು ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಧೂಮಪಾನ ಹವ್ಯಾಸವನ್ನು ನಿಯಂತ್ರಿಸಲು ಹಾಲಿ ಇರುವ 200 ರು. ದಂಡ ಪ್ರಮಾಣವನ್ನು ಎರಡು ಸಾವಿರ ರು.ಗಳಿಗೆ ಹೆಚ್ಚಿಸಬೇಕೆಂಬ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಜಾರಿಯಾಗುವ ಸಾಧ್ಯತೆಗಳಿವೆ ಎಂದು ಬೆಂಗಳೂರು ನಗರ ಜಿಲ್ಲಾ ಕ್ಷಯರೋಗ ಮತ್ತು ತಂಬಾಕು ನಿಯಂತ್ರಣಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದ್ದಾರೆ.

Also read: ಪ್ರತಿ ದಿನ ಸಿಹಿ ತಿನ್ನೋದು, ಸಿಗರೇಟ್ ಸೇದೋದು ಮತ್ತು ಧೂಮಪಾನ ಮಾಡೋದಕ್ಕಿಂತ ಅಪಾಯ!!

ಬೆಂಗಳೂರು ನಗರ ಜಿಲ್ಲಾಡಳಿತ ಹಾಗೂ ತಂಬಾಕು ನಿಯಂತ್ರಣ ಕೋಶ ನಗರದ ವಾರ್ತಾ ಇಲಾಖೆಯ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರದಲ್ಲಿ ಆಯೋಜಿಸಿದ್ದ ‘ತಂಬಾಕು ಸೇವನೆಯ ದುಷ್ಪರಿಣಾಮಗಳು ಹಾಗೂ ಸಿಗರೆಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ- 2003 ’ ಕುರಿತು ಮಾಧ್ಯಮದವರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸರಕಾರಿ ಕಚೇರಿಗಳು, ಆಸ್ಪತ್ರೆಗಳು, ರೆಸ್ಟೋರೆಂಟ್‌ಗಳು, ರೈಲ್ವೆ, ಬಸ್ ನಿಲ್ದಾಣಗಳು, ಬೇಕರಿ, ಟೀ ಸ್ಟಾಲ್, ಕೋರ್ಟ್ ಆವರಣ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಇತರೆ ತಂಬಾಕು ಉತ್ನನ್ನಗಳನ್ನು ಜಗಿದು ಉಗಿಯುವುದು ಮತ್ತು 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರುವುದು, ಕೊಳ್ಳುವುದನ್ನು ‘ಸಿಗರೆಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ- 2003 ಸೆಕ್ಷನ್ 21 ’ರ ಪ್ರಕಾರ ನಿಧಿಸಲಾಗಿದೆ. ಇದನ್ನು ಉಲ್ಲಂಘಿಸಿದವರಿಗೆ ಪ್ರಸ್ತುತ 200 ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೂ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ ಈ ದಂಡ ಪ್ರಮಾಣವನ್ನು 2000 ಗಳಿಗೆ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಜಾರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.