ಪತ್ರಕರ್ತ ರವಿ ಬೆಳಗೆರೆ ಬರೆದಿರುವ ವಿವಾದಾತ್ಮಕ ಪುಸ್ತಕ ‘ರಾಜ್ ಲೀಲಾ ವಿನೋದ್’ ಅಧಿಕೃತವಾಗಿ ನಿನ್ನೆ (ಡಿಸೆಂಬರ್ 25) ಬಿಡುಗಡೆ ಆಗದೇ ಇದ್ದರೂ, ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮುಖಪುಟದಲ್ಲಿ ಡಾ.ರಾಜ್ ಕುಮಾರ್. ಲೀಲಾವತಿ ಮತ್ತು ಬಾಲಕ ವಿನೋದ್ ರಾಜ್ ಫೋಟೋ ಹೊಂದಿರುವ ಪುಸ್ತದಲ್ಲಿ ಇರುವ ಸ್ಫೋಟಕ ಮಾಹಿತಿಯಾದರೂ ಏನು?
ಮುಖಪುಟದಲ್ಲಿ ರಾಜ್ ಕುಮಾರ್, ಲೀಲಾವತಿ ಹಾಗೂ ಬಾಲಕ ವಿನೋದ ರಾಜ್ ಅವರಿರುವ ಫೋಟೋವನ್ನು ಬಳಸಿದ್ದು, “ಫೋಟೋಗಳು ಒಳಗಿವೆ ವಿತ್ ಪ್ರೂಫ್” ಎಂಬ ಒಕ್ಕಣೆ ಹಾಗೂ ರಾಜ್ ಲೀಲಾ ವಿನೋದ ಶೀರ್ಷಿಕೆಯ ಮೇಲೆ ಮನದಾಚೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ? ಎಂಬ ಸಾಲುಗಳಿವೆ.
‘ಸಂತ ತುಕಾರಾಂ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕೊಲ್ಹಾಪುರದ ಮಹಾಲಕ್ಷ್ಮೀ ದೇವಾಸ್ಥಾದಲ್ಲಿ ನಡೆಸ ಘಟನೆಯೊಂದನ್ನ ರವಿ ಬೆಳಗೆರೆ ಬಳಿ ಹಿರಿಯ ನಟಿ ಲೀಲಾವತಿ ಹೇಳುತ್ತಿರುವುದು ಹೀಗೆ…
ಅಫೇರ್ ವಿಷಯ ಅವರ ಮನೆಯಲ್ಲಿ ಗೊತ್ತಾಯಿತು:
‘ಸಂತ ತುಕಾರಾಂ’ ಸಿನಿಮಾದ ಶೂಟಿಂಗ್ ಟೈಮ್ ನಲ್ಲಿ ನಮ್ಮ ಅಫೇರ್ ವಿಷಯ ಅವರ ಮನೆಯಲ್ಲಿ ಗೊತ್ತಾಯಿತು. ಅದರಿಂದ ಇರುಸು ಮುರುಸುಗಳಾದವು. ಅವರಿಗಿನ್ನೂ ಮಕ್ಕಳಾಗಿರಲಿಲ್ಲ. ಅದೊಂದು ದೊಡ್ಡ ಇನ್ಸಿಡೆಂಟ್ ರವಿಯವರೇ.
ರೈಲಿನಲ್ಲಿ ಇಬ್ಬರ ಪ್ರಯಾಣ:
ಅದು ‘ಸಂತ ತುಕಾರಾಂ’ ಶೂಟಿಂಗ್ ಸಮಯ. ಅದಕ್ಕೆ ಹೋಗಿದ್ದು ನಾವಿಬ್ರೇ. ರೈಲಿನಲ್ಲಿ ಪ್ರಯಾಣ. ನಾನು ತಿಂಡಿ-ಗಿಂಡಿ ಏನೂ ತಗೊಂಡು ಹೋಗಿರ್ಲಿಲ್ಲ. ಅವರ ಮನೇಲಿ ಬೇಕಾಧಂಗೆ ತಿಂಡಿ ಪ್ಯಾಕ್ ಮಾಡಿ ಕಳಿಸಿದ್ರು. ರೈಲಿನಲ್ಲಿ ತಿಂಡಿ ತಿಂದ್ವಿ.
ಕಥೆ ಶುರುವಾಗಿದ್ದು ಇಲ್ಲಿಂದ:
‘ನೋಡಿದ್ಯಾ, ಎಷ್ಟು ರುಚಿಯಾಗಿ ಮಾಡಿ ಕಳಿಸಿದ್ದಾರೆ’ ಅಂದ್ರು. ಅದು ನಿಜಕ್ಕೂ ರುಚಿಯಾಗಿತ್ತು. ಚೆನ್ನಾಗಿ ತಿಂದ್ವಿ. ಆ ಹೊತ್ತಿಗೆ ನಾವು ಕೊಲ್ಹಾಪುರ ಸೇರಿಕೊಂಡ್ವಿ. ಅಲ್ಲಿ ಶುರುವಾಯ್ತು ನಮ್ಮ ಕಥೆ.
ಒಂದೇ ರೂಂ ನಲ್ಲಿ ವಾಸ :
ಒಂದೇ ರೂಂ ನಲ್ಲಿ ವಾಸ:ನನಗೂ –ಅವರಿಗೂ ಸ್ನೇಹವಿದೆ ಅಂತ ಅವರಿಗೆ ಗೊತ್ತು. ಹಾಗಾಗಿ ಇಬ್ರಿಗೂ ಸೇರಿಸಿ ಒಂದೇ ರೋಂ ಕೊಟ್ರು. ಮಾಹಾರಾಜ ಪ್ಯಾಲೇಸ್ ಅದು.
ಲಕ್ಷ್ಮಿ ಕಾಸು :
ನೋಡಿದ್ಯೇನೆ. ಮಹಾರಾಜರು ಬಾಳಿ ಬದುಕಿದ ಜಾಗ. ಅದು ನಮಗೆ ಸಿಕ್ಕಿದೆ ಅಂದ್ರು. ಆಮೇಲೆ ಅವರೇನೇ ಹೊರಗಡೆ ಹೋಗಿ ಒಂದು ಲಕ್ಷ್ಮಿ ಕಾಸು ತಗೊಂಡು. ಅದನ್ನ ಎಲ್ಲಿ ತಗೊಮಡ್ರು ಅಂತ ಗೊತ್ತಿಲ್ಲ.
ಮದುವೆಯ ಸಂಕೇತ ಅಲ್ವಾ?
ಅದು ಲಕ್ಷ್ಮಿಯದು ಒಂದು ಬಿಲ್ಲೆ. ಲಕ್ಷಿ ಚಿತ್ರ ಇದೆ. ಅದನ್ನ ಒಂದು ದಾರಕ್ಕೆ ಪೋಣಿಸಿ, ಕೊಲ್ಹಾಪುರದ ಲಕ್ಷ್ಮೀ ದೇವರ ಮುಂದೆ ನನ್ನ ಕೊರಳಿಗೆ ಕಟ್ಟಿದರು. ಅದು ಮದುವೆಯ ಸಂಕೇತವೇ ಅಲ್ವಾ?
ಮುದ್ದು ಮಾಡೋರು:
ಅವರಿಗೆ ಮೀನು ಅಂದ್ರೆ ತುಂಬ ಇಷ್ಟ: ತರಿಸೋರು. ನಾನು ಮೀನು ಹೆಚ್ಚೋದನ್ನೇ ನೋಡ್ತಾ ನಿಲ್ಲೋರು. “ಜಿಟ್ಟು ಎಗರಿಸಿಕೊಂಡು ಚಿನ್ನಾಗಿ ಹೆಚ್ಚೀಯ ಕಣೆ.” ಅಂತ ಅಲ್ಲೇ ಮುದ್ದು ಮಾಡೋದು. ಅದು ನಮ್ಮ ಪಾಲಿಗೆ ಒಂಥರಾ ಮಧುಚಂದ್ರ ಅನ್ನೋ ಹಾಗಿತ್ತು. Enjoy ಮಾಡಿದ್ವಿ
ಕಲ್ಮಶ ಬೆರಕೆ ಆಯ್ತು:
ಅವರ ಪ್ರೀತಿಯಲ್ಲಿ ಕಲ್ಮಶ ಇರಲಿಲ್ಲ. ಕೆಲವು ಸಲ ಕಲ್ಪನೇಲಿ ಕವಿಗಳ ಥರಾ ಮಾತಾಡ್ತಿದ್ರು. ಯಾರೂ ಕೂಡ ಹುಟ್ಟೋವಾಗ್ಲೇ ಕಲ್ಮಶ ಇಟ್ಕೊಂಡು ಹುಟ್ಟೊದಿಲ್ಲ. ಬೆಳೀತಾ ಅದು ಸೇರ್ಕೊಳ್ಳುತ್ತೆ. ಹಾಗೆ ಬೆರೆಕೆ ಅಯ್ತು ಅವರಲ್ಲಿ ಕಲ್ಮಶ.
‘ಸಂತ ತುಕಾರಾಂ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕೊಲ್ಹಾಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಘಟನೆಯೊಂದನ್ನ ಪತ್ರಕರ್ತ ರವಿ ಬೆಳಗೆರೆ ಬಳಿ ಹಿರಿಯ ನಟಿ ಲೀಲಾವತಿ ನೆನಪಿಸಿಕೊಂಡಿರುವುದು ಹೀಗೆ…..
ಏನೇನೂ ನೆಗಟಿವ್ ಅಂಶಗಳಿರುವ ಪುಸ್ತಕವಲ್ಲ:
ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೂ ನೆಗಟಿವ್ ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ-ಅವು ಮಾತ್ರ ಇಲ್ಲಿವೆ. ಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. belagereravi@gmail.com ಗೆ ನೀವು ಅಭಿಪ್ರಾಯ ಕಳಿಸಿ. ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು. ಎಂದು ಬೆನ್ನುಡಿಯಲ್ಲಿ ಬರೆದಿದ್ದಾರೆ ಲೇಖಕ ರವಿ ಬೆಳಗೆರೆ.