ನಾನು ಬೆಳಗಾಂನವ ಎಂದು ಪರಿಚಯಿಸಿಕೊಂಡಿದ್ದ ರಜನಿಕಾಂತ್

0
1550

ಕಬಾಲಿ ಚಿತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ ನಟಿ ರಾಧಿಕಾ ಆಪ್ಟೆ.

ತಮಿಳು ಚಿತ್ರದಲ್ಲಿ ನಟಿಸುವಾಗ, ರಜನಿಕಾಂತ್ ಅವರ ತಾಳ್ಮೆ, ಕರ್ತವ್ಯಪರತೆ ಹಾಗೂ ಇತರರೊಡನೆ ಬೆರೆಯುವ ರೀತಿಯಿಂದ ಅತ್ಯಂತ ಪ್ರಭಾವಕ್ಲೆ ಒಳಾಗದವರಲ್ಲಿ ನಟಿ ರಾಧಿಕಾ ಅಪ್ಟೆ ಕೂಡ ಒಬ್ಬರು.

ರಾಧಿಕಾ ಮತ್ತು ರಜನಿಕಾಂತ್ ಅವರಿಬ್ಬರಲ್ಲಿ ಒಂದು ಸಾಮ್ಯತೆ ಅಂದರೆ ಇಬ್ಬರ ಮಾತೃಭಾಷೆ ಮರಾಠಿ.
ರಜನಿಕಾಂತ್ ಅವರನ್ನು ಮೊದಲ ಬಾರಿ ಭೇಟಿ ಮಾಡಿದ ಸಂದರ್ಭ ಕುರಿತು ಮೊದಲ ಬಾರಿ ಮಾತನಾಡಿದ ರಾಧಿಕಾ ಆಪ್ಟೆ, ರಜನಿ ಸಾರ್ ಅವರನ್ನು ಭೇಟಿ ಮಾಡಿದಾಗ ನಾನು ಮೊದಲು ಕೇಳಿದ ಪ್ರಶ್ನೆ ‘ನಿಮಗೆ ಮರಾಠಿ’ ಬರುತ್ತಾ? ಅಂತ.

ಅದಕ್ಕೆ ಅವರು ನಾನು ಬೆಳಗಾಂನವ (ಕರ್ನಾಟಕದ ಬೆಳಗಾವಿ) ಮರಾಠಿನೂ ಬರುತ್ತೆ ಅಂದರು.

ಆಮೇಲಿನ ನಮ್ಮ ಸಂಭಾಷಣೆಯೆಲ್ಲಾ ಇಂಗ್ಲೀಷ್ ನಲ್ಲೇ ನಡೆಯಿತು. ಆದರೆ ಅವರು ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಒತ್ತಡಕ್ಕೆ ಒಳಗಾದಗಲೆಲ್ಲಾ ನೆರವಿಗೆ ಬರುತ್ತಿದ್ದರು. ನಾನು ಕಂಡಂತೆ ಅವರು ಸಾರ್ವಕಾಲಿಕ ಶ್ರೇಷ್ಟ ನಟ ಎಂದು ರಾಧಿಕಾ ಅಭಿಪ್ರಾಯಪಟ್ಟರು.