೧೯೯೬ರ ಚುನಾವಣೆಯಲ್ಲಿ ಜಯಲಲಿತಾ ಸೋಲಿಗೆ ನಾನೇ ಕಾರಣ: ರಜನಿಕಾಂತ್

0
789

೧೯೯೬ರ ಲೋಕಸಭಾ ಚುನಾವಣೆಯಲ್ಲಿ ಜಯಲಲಿತಾ ನೇತೃತ್ಚದ ಎಐಎಡಿಎಂ ಪಕ್ಷದ ಸೋಲಿಗೆ ನಾನೇ ಕಾರಣ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಬಹಿರಂಗಪಡಿಸಿದ್ದಾರೆ.

ದಕ್ಷಿಣ ಭಾರತದ ಕಲಾವಿದರ ಸಂಘ ಆಯೋಜಿಸಿದ್ದ ಜಯಲಲಿತಾ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಸ್ವತಃ ರಜನಿಕಾಂತ್ ಪ್ರಸ್ತಾಪಿಸಿದ್ದಾರೆ

ಚುನವಣಾ ಪ್ರಚಾರದ ವೇಳೆ ನಾನು ನೀಡಿದ್ದ ಹೇಳಿಕೆ ಯೊಂದು ತೀವ್ರವಾಗಿ ಪರಿಣಾಮ ಬೀರಿತು. ಅದು ಎಷ್ಟೆಂದರೆ ೧೯೯೬ರ ಆ ಲೋಕಸಭಾ ಚುನಾವಣೆಯಲ್ಲಿ ಜಯಲಲಿತಾ ಪಕ್ಷಕ್ಕೆ ಸೋಲಾಯಿತು. ಇದು ಅವರನ್ನು ತುಂಬಾ ಕಾಡಿತು ಎಂದರು.
ಚುನಾವಣಾ ಪ್ರಚಾರದ ವೇಳೆ ತಾವು, ಈ ಚುನಾವಣೆಯಲ್ಲಿ ಜಯಲಲಿತಾ ಅವರನ್ನು ಅಧಿಕಾರಕ್ಕೆ ತಂದರೆ ದೇವರು ಕೂಡ ತಮಿಳುನಾಡನ್ನು ರಕ್ಷಿಸಲಾರ ಎಂದಿದ್ದೆ. ಅದು ಪರಿಣಾಮ ಬೀರಿತು. ಹಾಗಾಗಿ ಅವರ ಸೋಲಿನಲ್ಲಿ ನಾನೂ ಒಬ್ಬ ಕಾರಣಕರ್ತನಾದೆ ಎಂದು ರಜನಿ ವಿವರಿಸಿದರು.

ಈ ಘಟನೆ ನಂತರ ನಮ್ಮ ಸಂಬಂಧ ಹಾಳಾಗಿದೆ ಎಂದು ಭಾವಿಸಿದ್ದೆ. ಆದರೆ ನನ್ನ ಆಹ್ವಾನ ಮನ್ನಿಸಿ ಮಗಳ ಮದುವೆಗೆ ಆಗಮಿಸಿದ್ದರು. ತುಂಬಾ ಭಾರವಾದ ಹೃದಯದಿಂದ ಆಹ್ವಾನಪತ್ರಿಕೆ ನೀಡಲು ಸಮಯ ಕೋರಿದ್ದೆ. ಆದರೆ ಸಮಯ ನೀಡಿದ್ದೂ ಅಲ್ಲದೇ ಸಮಯ ಮಾಡಿಕೊಂಡು ಮದುವೆಗೆ ಬಂದಾಗ ಆಶ್ಚರ್ಯವಾಗಿತ್ತು ಎಂದು ರಜನಿ ನೆನಪಿಸಿಕೊಂಡರು.

ಈ ಬಗ್ಗೆ ಪ್ರಶ್ನಿಸಿದಾಗ ಬೇರೆ ಯಾರದ್ದೇ ಮದುವೆ ಆಗಿದ್ದರೂ ಹೋಗಿರುತ್ತಿದೆ. ಅದೇ ರೀತಿ ಬಂದೆ ಎಂದರು. ಜಯಲಲಿತಾ ನಿಜಕ್ಕೂ ಚಿನ್ನದಂತಹ ಗುಣದವರು. ಈಗ ಅವರು ಕೊಹಿನೂರು ವಜ್ರದಂತೆ ವಿಶ್ರಾಂತಿಗೆ ತೆರಳಿದ್ದಾರೆ ಎಂದು ಹೇಳಿದರು.