ಸೇತುವೆ ಹೊಡೆದು ನದಿಗೆ ಬಿದ್ದ ಬಸ್, 26 ಪ್ರಯಾಣಿಕರ ಧಾರುಣ ಸಾವು…!!

0
664

ಇಂದು ರಾಜಸ್ಥಾನದ ಒಂದು ಧಾರುಣ ಘಟನೆ ನಡೆದಿದೆ, ರಾಜಸ್ಥಾನದಿಂದ ಉತ್ತರಪ್ರದೇಶಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ, ಈ ಘಟನೆಯ ಕುರಿತು ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಮುಂಜಾನೆ ರಾಜಸ್ಥಾನದ, ಸವಾಯಿ ಮಂಧೋಪುರ ಜಿಲ್ಲೆಯ, ದುಬಿ ಎಂಬುವಲ್ಲಿ ಸೇತುವೆ ಮೇಲೆ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆ ಮುರಿದು ನದಿಗೆ ಬಿದ್ದಿದೆ, ಈ ಅಪಘಾತದಲ್ಲಿ 26 ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ, ಇನ್ನು ಗಂಭೀರವಾಗಿ ಗಾಯಗೊಂಡ ಹಲವರನ್ನು ಆಸ್ಪತ್ರೆ-ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಹುತೇಕರು ಉತ್ತರಪ್ರದೇಶಕ್ಕೆ ತೆರೆಳುತ್ತಿದ್ದವರು, 26 ಮಂದಿಯ ಶವಗಳನ್ನು ಇದುವರೆಗೆ ನದಿಯಿಂದ ಹೊರತೆಗೆಯಲಾಗಿದೆ, ಇನ್ನು ರಕ್ಷಣಾ ಪಡೆಯ ನೆರವಿನಿಂದ ಬಸ್ಸನ್ನು ಮೇಲೆತ್ತುವ ಕಾರ್ಯ ನಡೆಯುತ್ತಿದೆ ಎಂದು ಅಲ್ಲಿನ ಪಿಎಸ್ಐ ತಿಳಿಸಿದರು.