ಕಾಂಗ್ರೆಸ್ ಮಾಡಿದ್ದು ಆಯ್ತು ಇವಾಗ ರಾಜಸ್ಥಾನದ ಬಿ.ಜೆ.ಪಿ. ಸರ್ಕಾರ ಭ್ರಷ್ಟ್ರರನ್ನು ಕಾಪಾಡಲು ಹೊರಟಿದೆ!

0
496

ರಾಜಸ್ಥಾನ ಸರ್ಕಾರ ದಿನಕ್ಕೊಂದು ಹೊಸ ಕಾನೂನು ತರುತ್ತಿದೆ. ಇದರಿಂದ ಜನರು ಪರದಾಡುವಂತೆ ಆಗಿದೆ. ಈ ಸಾಲಿಗೆ ಈಗ ಮತ್ತೊಂದು ಕಾಯ್ದೆ ಸೇರಿಕೊಂಡಿದೆ. ಆದ್ರೆ ಈ ಕಾಯ್ದೆಯ ಎಫೆಕ್ಟ್​​ ನೇರವಾಗಿ ಮಾಧ್ಯಮದ ಮೇಲೆ ನಿಯಂತ್ರಣ ಹೇರಲು ಚಿಂತನೆ ನಡೆದಿದೆ. ಆದ್ರೆ ತಾನು ಮಾಡಿದ ಎಡವಟ್ಟಿನಿಂದ ರಾಜ್ಯವ್ಯಾಪಿ ಆಕ್ರೋಶ ಕಂಡು ಬಂದ ಹಿನ್ನೆಲೆಯಲ್ಲಿ ರಾಜಸ್ತಾನ ಸರ್ಕಾರ ಮಸೂದೆ ಸರ್ಕಾರ ಪರಿಶೀಲನಾ ಸಮಿತಿಗೆ ಒಪ್ಪಿಸಿದೆ.

ಏನಿದು ಪ್ರಕರಣ:
ರಾಜಸ್ಥಾನ ಸರ್ಕಾರ ಇತ್ತೀಚಿಗೆ ಒಂದು ಸುಗ್ರೀವಾಜ್ಞೆಯನ್ನು ಹೊರ ತರುತ್ತದೆ. ಇದರ ಅನ್ವಯ ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರು, ಮ್ಯಾಜಿಸ್ಟ್ರೇಟ್‌ಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ತನಿಖೆಯಿಂದ ರಕ್ಷಿಸಲು ಪ್ಲಾನ್ ಇದಾಗಿರುತ್ತದೆ. ಅಲ್ಲದೆ ಈ ಬಗ್ಗೆ ರಾಜಸ್ಥಾನ ಸರ್ಕಾರ ಒಂದು ಸುಗ್ರೀವಾಜ್ಞೆ ಹೊರಡಿಸುತ್ತದೆ. ಈ ಆದೇಶವನ್ನು ಪ್ರಶ್ನಿಸಿ ವಕೀಲರೊಬ್ಬರು ಹೈಕೋರ್ಟ್​​​ನಲ್ಲಿ ಹಿತಾಸಕ್ತಿ ಅರ್ಜಿ ಸಲ್ಲಿಸಿರುತ್ತಾರೆ.

ಇನ್ನು ಸರ್ಕಾರದ ಸುಗ್ರೀವಾಜ್ಞೆಯಂತೆ ಮೇಲ್ಕಾಣಿಸಿದವರ ವಿರುದ್ಧ ಆರೋಪಗಳು ಕೇಳಿ ಬಂದಲ್ಲಿ, ಸರ್ಕಾರದ ಅನುಮತಿ ಇಲ್ಲದೆ ತನಿಖೆ ನಡೆಸುವಂತಿಲ್ಲ ಎಂದ್ದಾಗಿತ್ತು. ಇನ್ನು ಸರ್ಕಾರ ಈ ಬಗ್ಗೆ ಗ್ರೀನ್​ ಸಿಗ್ನಲ್​ ಕೊಡುವವರೆಗೂ ಮಾಧ್ಯಮಗಳು ವರದಿ ಮಾಡದಂತೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಇನ್ನು ಈ ನಿಯಮನ್ನು ಉಲ್ಲಂಘಿಸಿದಲ್ಲಿ ಎರಡು ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

ಇನ್ನು ರಾಜಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾದ ಆಜ್ಞೆ ಹೊರಡಿಸಿಲ್ಲ. ಇದಕ್ಕೂ ಮೊದಲು ಇಂತಹ ಪ್ರಸಂಗಗಳು ಬೆಳಕಿಗೆ ಬಂದಿವೆ. ಇನ್ನು ಮಹಾರಾಷ್ಟ್ರದಲ್ಲೂ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು.

ಇನ್ನು ರಾಜಸ್ಥಾನ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಒಂದು ಹೆಜ್ಜೆ ಹಿಂದೆ ಇಟ್ಟಿದೆ.