ಹೆರಿಗೆ ಸಮಯದಲ್ಲಿ ಎರಡು ತುಂಡಾದ ಮಗುವಿನ ತಲೆಯನ್ನು ಗರ್ಭದಲ್ಲೇ ಬಿಟ್ಟ ಬೇಜವಾಬ್ದಾರಿ ವ್ಯದ್ಯರು..

0
451

ಆಸ್ಪತ್ರೆಯಲ್ಲಿ ನಡೆಯುವ ಕೆಲವೊಂದು ಘಟನೆಗಳು ವಿಚಿತ್ರ ಅನಿಸಿದರು ಅಂತಹವುಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು. ಏಕೆಂದರೆ ಕೆಲವೊಂದು ಬೇಜವಾಬ್ದಾರಿ ವ್ಯದ್ಯರು ಮತ್ತು ನರ್ಸ್ ಗಳು ಮಾಡುವ ಕೆಲಸದಿಂದ ರೋಗಿಯ ಪ್ರಾಣವೇ ಹೋಗುತ್ತೆ ಇಂತಹ ಘಟನೆಗಳು ಆಗ್ಗಾಗೊಮ್ಮೆ ನಡೆಯುತ್ತಾನೆ ಇರುತ್ತೇವೆ. ಅದರಲ್ಲಿ ಮಹಿಳೆಯರ ಹೆರಿಗೆಯ ಸಮಯದಲ್ಲಿ ಹೆಚ್ಚಾಗಿ ಕಂಡು ಬರುತ್ತೇವೆ. ಇಲ್ಲಿಯ ವರೆಗೆ ಕೇಳಿರುವ ಘಟನೆಗಳು ಅಂದ್ರೆ ನಾರ್ಮಲ್ ಆಗುವ ಹೆರಿಗೆಯನ್ನು ಸಿಸೇರಿಯನ್ ಡೆಲಿವರಿ ಮಾಡಿ ಹಣ ವಸೂಲಿ ಮಾಡಿದ ಘಟನೆ ಇಲ್ಲ ಮಗುವನ್ನು ಬದಲಾಯಿಸಿದ ಘಟನೆ ಕೇಳಿರಬಹುದು ಆದರೆ, ಮಗು ತುಂಡಾಗುವಂತೆ ಮಾಡಿದ ಘಟನೆ ಕೇಳಿರಲು ಸಾದ್ಯ ವಿಲ್ಲ.

ಹೌದು ಕೇಳಲು ವಿಚಿತ್ರವೆನಿಸಿದರು ಅಸಲಿಗೆ ಸತ್ಯವಾಗಿದೆ. ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವಾಗ ನರ್ಸ್​ ನಿರ್ಲಕ್ಷ್ಯ ತೋರಿದ್ದರಿಂದ ಆ ಹಸುಗೂಸಿನ ದೇಹ ಅರ್ಧ ಭಾಗವಾದ ದುರಂತ ನಡೆದಿದೆ. ಹೆರಿಗೆ ಮಾಡಿಸುವಾಗ ಪುರುಷ ನರ್ಸ್​ ಮಗುವನ್ನು ಜೋರಾಗಿ ಎಳೆದಿದ್ದಾರೆ. ಇದರಿಂದ ಮಗುವಿನ ತಲೆ ತಾಯಿಯ ಗರ್ಭದಲ್ಲೇ ಉಳಿದುಕೊಂಡಿದ್ದು, ಕೆಳಭಾಗ ಮಾತ್ರ ಹೊರಗೆ ಬಂದಿದೆ. ಮಗುವಿನ ದೇಹ ತುಂಡಾಗಿರುವ ಘಟನೆಯನ್ನು ಮುಚ್ಚಿಹಾಕಲು ಆ ಪುರುಷ ನರ್ಸ್​ ಮತ್ತು ಅಲ್ಲಿನ ಸಿಬ್ಬಂದಿ ಪ್ರಯತ್ನಿಸಿದ್ದಾರೆ.

ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ಮಗುವಿನ ತಲೆ ತಾಯಿಯ ದೇಹದೊಳಗಿರುವುದನ್ನು ಮುಚ್ಚಿಟ್ಟು ಕುಟುಂಬದವರಿಗೆ ಮಗುವಿನ ಮುಖವನ್ನೂ ತೋರಿಸದೇ ಸಹೋದ್ಯೋಗಿಗಳ ನೆರವಿನೊಂದಿಗೆ ಶವಾಗಾರಕ್ಕೆ ರವಾನಿಸಿದ್ದಾನೆ. ಘಟನೆ ನಡೆದ ನಂತರ ತಾಯಿಯ ಆರೋಗ್ಯವೂ ಗಂಭೀರವಾಗಿದ್ದು ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಕುಟುಂಬದವರಿಗೆ ಸೂಚಿಸಿದ್ದಾನೆ. ಈ ವೇಳೆ ಮಗು ಸತ್ತುಹೋದ ವಿಷಯವನ್ನು ಮಹಿಳೆಯ ಕುಟುಂಬಸ್ಥರಿಗೆ ತಿಳಿಸದೆ ಬಳಿಕ, ಆ ಮಹಿಳೆಯನ್ನು ಜೋಧ್​ಪುರದ ಉಮೈದ್​ ಹಾಸ್ಪಿಟಲ್​ಗೆ ಕರೆದುಕೊಂಡು ಹೋಗುತ್ತಿದ್ದಂತೆ ಅಲ್ಲಿನ ಗೈನಕಾಲಜಿಸ್ಟ್​ ಬಳಿ ತಾವು ಈಗಾಗಲೇ ಹೆರಿಗೆ ಮಾಡಿಸಿದ್ದು, ಪ್ಲಸೆಂಟಾವನ್ನು ಮಾತ್ರ ಹೊರತೆಗೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ.
ಬಳಿಕ, ಅಲ್ಲಿನ ವೈದ್ಯರ ತಂಡ ಗರ್ಭಕೋಶದ ತಪಾಸಣೆ ನಡೆಸಿದಾಗ ಮಗುವಿನ ಹೊಟ್ಟೆ ಅಲ್ಲೇ ಉಳಿದಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ತಕ್ಷಣ, ಆ ಮಹಿಳೆಯ ಸಂಬಂಧಿಕರಿಗೆ ವಿಷಯ ತಿಳಿಸಿದ ವೈದ್ಯರು ಮಹಿಳೆಗೆ ತುರ್ತು ಚಿಕಿತ್ಸೆ ನೀಡಿದ್ದಾರೆ. ಆ ಮಹಿಳೆಯ ಗಂಡ ರಾಮಗಢದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಆ ಮಹಿಳೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಈ ಸಂಬಂಧ ಮಹಿಳೆಯ ಪತಿ ರಾಮಗಢದ ಆಸ್ಪತ್ರೆಯ ವಿರುದ್ಧ ದೂರು ಸಲ್ಲಿಸಿದ್ದರೂ ಪೋಲೀಸರು ಇದುವರೆಗೆ ಯಾರೊಬ್ಬರನ್ನೂ ಬಂಧಿಸಲಿಲ್ಲ.

Also read: ಪವಾಡಗಳ ಬಗ್ಗೆ ನಂಬಿಕೆ ಹುಟ್ಟಿಸುವಂಥ ಘಟನೆ; ನಾಲ್ಕನೇ ಮಹಡಿಯಿಂದ ಬಿದ್ದರು ಬದುಕುಳಿದ ಮಗು ಆಶ್ಚರ್ಯ ಮೂಡಿಸಿದೆ..