50 ಲಕ್ಷ ಮೌಲ್ಯದ ಜೀವವಿಮಾ ಹಣಕ್ಕಾಗಿ ತನ್ನ ಹತ್ಯೆಗೆ ತಾನೇ ಸ್ಕೆಚ್ ಹಾಕಿ ತಾನೇ ಸುಪಾರಿ ಕೊಟ್ಟ ವ್ಯಕ್ತಿ; ಕೊಲೆ ನಂತರ ತಿಳಿಯಿತು ಅಸಲಿಯತ್ತು.!

0
202

ಹಣಕ್ಕಾಗಿ ಜನರು ಏನೆಲ್ಲಾ ಕೃತ್ಯಗಳನ್ನು ಮಾಡುತ್ತಿದ್ದಾರೆ ಎನ್ನವುದು ಗೊತ್ತಿರುವ ವಿಚಾರ. ಆದರೆ ಇಲ್ಲೊಬ್ಬ ವ್ಯಕ್ತಿ ಹಣಕ್ಕಾಗಿ ಮಾಡಿರುವ ವಿಷಯ ಕೇಳಿದರೆ ವಿಚಿತ್ರವೆನಿಸುತ್ತೆ. ಅಂತಹ ಪ್ರಕರಣವಾದರು ಏನೆಂದರೆ ವ್ಯಕ್ತಿಯೊಬ್ಬತನ್ನನ್ನು ಕೊಲೆ ಮಾಡಲು ತಾನೇ ಸುಪಾರಿ ಹಂತಕರನ್ನು ನೇಮಿಸಿಕೊಂಡು ಕೊಲೆಯಾಗಿದ್ದಾನೆ. ಇದಕ್ಕೆಲ್ಲ ಕಾರಣ 50 ಲಕ್ಷ ಮೌಲ್ಯದ ಜೀವವಿಮಾ ಹಣವನ್ನು ಪಡೆಯಲು ಈ ವ್ಯಕ್ತಿ ಸುಪಾರಿ ಕೊಟ್ಟಿದ್ದ ಎನ್ನುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.

Also read: ಬುದ್ಧಿವಾದ ಹೇಳಿದ ತಂದೆಯನ್ನೇ ತುಂಡು-ತುಂಡಾಗಿ ಕತ್ತರಿಸಿ ಕೊಲೆಗೈದ ಮಗ, ಕಾರಣ ತಿಳಿದರೆ ದಂಗಾಗುತ್ತಿರ..!

ತನ್ನ ಹತ್ಯೆಗೆ ತಾನೇ ಸ್ಕೆಚ್?

ಹೌದು ರಾಜಸ್ಥಾನದ ಬಿಲ್ವಾರದಲ್ಲಿ ವ್ಯಕ್ತಿಯೊಬ್ಬ ಕುಟುಂಬಕ್ಕೆ ಹಣ ಸಿಗಲಿ ಎಂದು ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟ ವಿಚಿತ್ರ ಪ್ರಕರಣ ನಡೆದಿದ್ದು. ಸಾಲವಾಗಿ ಕೊಟ್ಟ ಹಣ ವಸೂಲಾಗದೇ ಕಂಗೆಟ್ಟಲೇವಾದೇವಿದಾರ ತನ್ನ ಹೆಸರಲ್ಲಿರುವ 50 ಲಕ್ಷ ರೂ.ಗಳ ವಿಮೆಯನ್ನು ತನ್ನ ಕುಟುಂಬ ಪಡೆಯುವುದಕ್ಕೆ ಸಹಾಯವಾಗಲೆಂದು ಭಿಲ್ವಾರಾ ಜಿಲ್ಲೆಯ ಮ್ಯಾಂಗ್ರೋಪ್ ಗ್ರಾಮದ ನಿವಾಸಿ ಬಲ್ವೀರ್ ತನ್ನನ್ನು ಕೊಲ್ಲಲು ತಾನೇ ಸುಪಾರಿ ಹಂತಕರನ್ನು ನೇಮಕ ಮಾಡಿಕೊಂಡಿದ್ದ. ಅದರಂತೆ ಕಳೆದ ವಾರ ಆತನ ಹತ್ಯೆ ನಡೆದಿದ್ದು ಗ್ರಾಮದಲ್ಲಿ ಅವರ ಶವ ಕೈಕಾಲುಗಳನ್ನು ತಂತಿಯಿಂದ ಕಟ್ಟಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜತೆಗೆ ಆತನ ಕತ್ತು ಹಿಸುಕಿ ಕೊಂದ ಕುರುಹುಗಳೂ ಕಂಡುಬಂದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಬಲ್ವೀರ್ ತನಗೆ ತಾನೇ ಸುಪಾರಿ ಹಂತಕರನ್ನು ನೇಮಕ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದು ಆತನನ್ನು ಕೊಲ್ಲಲು ಉತ್ತರ ಪ್ರದೇಶದ ವ್ಯಕ್ತಿ ಸುನೀಲ್ ಯಾದವ್ ಮತ್ತು ಅವರ ಸಹಚರ ರಾಜ್ ವೀರ್ ನೇಮಕವಾಗಿತ್ತು. ಅದಕ್ಕಾಗಿ ಬಲ್ವೀರ್ ಅವರಿಗೆ 80,000 ರೂ. ಸುಪಾರಿ ನೀಡಿದ್ದನೆಂದು ಪೋಲೀಸರು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ ಬಲ್ವೀರ್ ತಾನೆಲ್ಲಿ ಕೊಲೆಯಾಗಬೇಕೆಂದು ಯೋಜಿಸಿದ್ದನೋ ಅಲ್ಲಿಗೆ ಹಂತಕ ಸುನೀಲ್ ನನ್ನು ತಾನೇ ಸ್ವತಹ ಕರೆದುಕೊಂಡು ಹೋಗಿ ಜಾಗ ತೋರಿಸಿದ್ದ ಎಂಬ ಆಘಾತಕಾರಿ ಸುದ್ದಿ ಬಹಿರಂಗವಾಗಿದೆ. ಅದರಂತೆ ಬಲ್ವೀರ್ ಗ್ರಾಮಸ್ಥರಿಂದ ಸುಮಾರು 20 ಲಕ್ಷ ರೂ.ಗಳನ್ನು ಸಾಲ ಪಡೆದಿದ್ದ.

Also read: ಓಎಲ್‌ಎಕ್ಸ್‌ನಲ್ಲಿ ಮೊಬೈಲ್ ಮಾರಲು ಸ್ವಿಗ್ಗಿ ಗೋ ಆ್ಯಪ್ ಸಹಾಯ ಪಡೆದು 95 ಸಾವಿರ ಕಳೆದುಕೊಂಡ ಮಹಿಳೆ..!

ಅದಕ್ಕಾಗಿ ಭಾರಿ ಬಡ್ಡಿ ತೆರಬೇಕಾಗಿದೆ. ಆದರೆ ಹೇಗಾದರೂ ಸಾಲ ಮರುಪಾವತಿಸಲು ಸಾಧ್ಯವಾಗದೆ ಹೋದಾಗ ಬಲ್ವೀರ್ ಗೆ 50 ಲಕ್ಷ ರೂ.ಗಳ ವೈಯಕ್ತಿಕ ಅಪಘಾತ ವಿಮೆಯನ್ನು ತೆಗೆದುಕೊಳ್ಳುವ ಆಲೋಚನೆ ಬಂದಿದೆ. ಅದರಂತೆ ಇದಕ್ಕೆ ಪರಿಹಾರದ ರೂಪದಲ್ಲಿ ಆತ ಕಳೆದ ತಿಂಗಳು 50 ಲಕ್ಷ ರು.ನ ಅಪಘಾತ ವಿಮೆ ಮಾಡಿಸಿದ್ದ. ಇದರ ಮೊದಲ ಕಂತಾಗಿ 8 ಲಕ್ಷ ರು. ಹಣವನ್ನೂ ನೀಡಿದ್ದ. ಬಳಿಕ ಅಪಘಾತ ಮಾಡಿಕೊಂಡು ಸಾವನ್ನಪ್ಪುವುದು. ಹೀಗಾದಲ್ಲಿ ಕುಟುಂಬ ಸದಸ್ಯರಿಗೆ 50 ಲಕ್ಷ ರು. ಹಣ ಸಿಕ್ಕು ಅವರು ನೆಮ್ಮದಿಯಾಗಿ ಬದುಕಬಲ್ಲರು ಎಂದು ಯೋಜನೆ ರೂಪಿಸಿ ತಮ್ಮ ಕುಟುಂಬ ಆ ವಿಮಾ ಮೊತ್ತವನ್ನು ಪಡೆಯಲು 8,43,200 ರೂ. ಪ್ರೀಮಿಯಂ ಸಹ ಪಾವತಿಸಿದ್ದಾರೆ. ಮುಂದೆ ತನ್ನ ಕುಟುಂಬ ಸಾಲಗಾರರ ಕೋಪಕ್ಕೆ ತುತ್ತಾಗಬಾರದೆಂದು ಕಾರಣಕ್ಕೆ ಜತೆಗೆ ಸಾಲ ತೀರಿದ ನಂತರ ಉಳಿವ ವಿಮಾ ಮೊತ್ತದ ಹಣದಲ್ಲಿ ಕುಟುಂಬವು ಸಂತೋಷದಾಯಕ ಜೀವನ ನಡೆಸಬಹುದೆಂಬ ಕಾರಣಕ್ಕೆ ಬಲಬೀರ್‌, ಇಬ್ಬರು ಹಂತಕರಿಗೆ ತನ್ನನ್ನು ಕೊಲ್ಲಲು 80000 ರು. ಸುಪಾರಿ ಕೊಟ್ಟಿದ್ದ. ಮುಂಗಡವಾಗಿ ಅವರಿಗೆ 10000 ರು. ನೀಡಿದ್ದ. ಇತ್ತೀಚೆಗೊಂದು ದಿನ ನಿಗದಿಯಾದಂತೆ ಹಂತಕರು ಬಲಬೀರ್‌ನನ್ನು ಹತ್ಯೆಗೈದಿದ್ದರು. ಏಕಾಏಕಿ ನಡೆದ ಕೊಲೆ ಬೆನ್ನುಹತ್ತಿದ್ದ ಪೊಲೀಸರು ಬಲಬೀರ್‌ನ ಮೊಬೈಲ್‌ ಕರೆ ಮತ್ತು ಸಿಸಿಟೀವಿ ದೃಶ್ಯಗಳನ್ನು ಆಧರಿಸಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಬಲಬೀರ್‌ ಹತ್ಯೆಗೆ ಆತನೇ ಸುಪಾರಿ ಕೊಟ್ಟಿದ್ದ ವಿಷಯವನ್ನು ಹಂತಕರು ಬಾಯಿಬಿಟ್ಟಿದ್ದಾರೆ.