ರಾಜಸ್ಥಾನದಲ್ಲಿ ವಿಶ್ವದಲ್ಲಿಯೇ ಅತಿಹೆಚ್ಚು ಎನ್ನುವಷ್ಟು ಚಿನ್ನ ದೊರೆತಿದೆ, ಅದನ್ನು ಏನು ಮಾಡುತ್ತಾರೆ ಗೊತ್ತಾ?

0
521

Kannada News | Karnataka News

ಭಾರತ ಯಾವಾಗಲೂ ತನ್ನ ವಿಶೇಷತೆಯಿಂದ, ವಿಸ್ಮಯಗಳಿಂದ, ವಿಶ್ವದ ಗಮನ ಸೆಳೆಯುತ್ತಿರುತ್ತದೆ. ಅದು ವಿವಿಧ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಗಾಗಲಿ ಅಥವಾ ಇಲ್ಲಿಯ ಪ್ರಕೃತಿಯ ಅದ್ಭುತಗಳಿಗಾಗಲಿ. ಈಗ ಅಂತಹುದೇ ಒಂದು ಅದ್ಭುತ ಎನ್ನುವಂತಹ ಸಂಗತಿ ನಡೆದೇ, ಅದು ಯಾವುದೇ ಅಂತ ತಿಳಿಯಲು ಮುಂದೆ ಓದಿ.

ಕೆಲ ವರ್ಷಗಳ ಹಿಂದೆ ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ನೆಲ ಮಹಡಿಯಲ್ಲಿ ವಿಶ್ವವೇ ಬೆರಗು ಕಣ್ಣಿನಿಂದ ನೋಡುವಷ್ಟು ಚಿನ್ನ ಮತ್ತು ಅಮೂಲ್ಯ ಖನಿಜ ಸಂಪತ್ತು ದೊರೆತ್ತಿದ್ದು ನಿಮ್ಮೆಲ್ಲರಿಗೆ ಗೊತ್ತಿರುವ ವಿಷಯವೇ. ಈಗ ರಾಜಸ್ಥಾನದಲ್ಲಿ ವಿಶ್ವದಲ್ಲಿಯೇ ಅತಿಹೆಚ್ಚು ಎನ್ನುವಷ್ಟು ಚಿನ್ನ ದೊರೆತಿದೆ.

ಹೌದು, ರಾಜಸ್ಥಾನದ ಜೈಪುರದಲ್ಲಿ 2 ಸ್ಥಳಗಳಲ್ಲಿ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಬನ್ಸ್‌‌‌ವಾರ ಹಾಗೂ ಉದಯ್‌‌ಪುರ ಸ್ಥಳಗಳಲ್ಲಿ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಈ ಸ್ಥಳಗಳಲ್ಲಿ ಭೂಮಿಯಿಂದ 300 ಅಡಿ ಆಳದಲ್ಲಿ 11.48 ಕೋಟಿ ಟನ್ ಚಿನ್ನ ಇದ್ದು, ಇದರ ಜೊತೆ ತಾಮ್ರದ ನಿಕ್ಷೇಪ ಹಾಗು ಸತು ಮತ್ತು ಸೀಸ ನಿಕ್ಷೇಪಗಳ ಕುರುಹುಗಳನ್ನು ಪತ್ತೆ ಹಚ್ಚಿದ್ದಾರೆ.

ರಾಜಪುರ ಹಾಗೂ ದರಿಬಾದಲ್ಲಿನ ಗಣಿಗಳಲ್ಲಿ 350 ಮಿಲಿಯನ್ ಟನ್ ಸತು ಹಾಗೂ ಸೀಸದ ನಿಕ್ಷೇಪಗಳಿವೆ. ಈ ನಿಕ್ಷೇಪಗಳನ್ನು ಹೊರತೆಗೆಯುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುತ್ತಿದೆ. ಸರ್ಕಾರದ ಆದೇಶದ ನಂತರ ಈ ಗಣಿಗಳ ಮೇಲೆ ಹೆಚ್ಚಿನ ಸಂಶೋಧನೆ ನಡೆಸಿ ಗಣಿಗಾರಿಕೆ ಶುರು ಮಾಡಲಿದ್ದೇವೆ ಎಂದು ವಿಜ್ಞಾನಿಗಳು ತಿಳಿಸಿದರು.

ಇನ್ನು ಇವೆರಡು ಸ್ಥಳಗಳ ಜೊತೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ನೀಮ್ ಕಾ ತಾಣ ಸ್ಥಳದಲ್ಲೂ ಇವೆರಡೂ ರೀತಿಯ ನಿಕ್ಷೇಪವಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ದೊರೆತ ನಂತರ ವಿಷಯ ಇಳಿಸಲಾಗುವುದು ಎಂದು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಮಹಾ ನಿರ್ದೇಶಕರು ಹೇಳಿದ್ದಾರೆ.

Also Read: ಅಲ್ಪಸಂಖ್ಯಾತರಿಗೆ ಬಜೆಟ್ನಲ್ಲಿ ಭರ್ಜರಿ ಕೊಡುಗೆ, ತಾವು ಬರೀ ಹಿಂದುಗಳಿಗೆ ಮಾತ್ರ ಸೀಮಿತವಲ್ಲ ಎಂದು ನಿರೂಪಿಸಿದ ಯೋಗಿ ಆಧಿತ್ಯನಾಥ್…!!