ಒಂದು ಕಡೆ ಹೆಣ್ಣು ಮಗು ಹುಟ್ಟಿದ್ರೆ ಶಾಪ ಅಂದುಕೊಳ್ಳುತ್ತಾರೆ, ಆದರೆ ಈ ಹಳ್ಳಿಯಲ್ಲಿ ಹೆಣ್ಣು ಮಗು ಹುಟ್ಟಿದಮೇಲೆ ಸಂಭ್ರಮಿಸೋದನ್ನು ನೋಡಿದ್ರೆ ಹೆಮ್ಮೆ ಪಡ್ತೀರಾ!!

0
1558

ಹೆಣ್ಣು ಮಗು ಮನೆಯ ಕಣ್ಣು ಅಂತಾರೆ ಹಿರಿಯರು.. ಆದರೆ ಹೆಣ್ಣಿನ ಭ್ರೂಣ ಹತ್ಯೆ ಆಲ್ಲೊಂದಿಲ್ಲೊಂದು ವರದಿಯಾಗುತ್ತಲೇ ಇರುತ್ತವೆ..


ಇತ್ತಿಚೆಗಿನ ದಿನಗಳಲ್ಲಿ ಕಾಣದಿದ್ದರೂ.. ಹೆತ್ತ ಮಕ್ಕಳನ್ನು ಅಲ್ಲಿ ಇಲ್ಲಿ ಬಿಸಾಡುವುದು ಇನ್ನೂ ನಿಂತಿಲ್ಲಾ ಎನ್ನಬಹುದು.. ಸರ್ಕಾರದಿಂದ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಅನೇಕ ಅಭಿಯಾನ ಬಂದರೂ ಕೂಡ ಸಂಪೂರ್ಣವಾಗಿ ಈ ಪಿಡುಗು ದೂರವಾಗಿಲ್ಲ…


ಆದರೆ ಕೆಲವರು ಹೆಣ್ಣು ಮಕ್ಕಳು ಹುಟ್ಟಿದರೆ ಹಬ್ಬದಂತೆ ಆಚರಿಸುವವರೂ ಇದ್ದಾರೆ.. ಅದೇ ರೀತಿಯಾದ ಕಥೆ ಇಲ್ಲೊಂದಿದೆ ನೋಡಿ.. ದೇಶಕ್ಕೆ ಮಾದರಿಯಾದ ಹಳ್ಳಿಯ ಕಥೆ..

ರಾಜಸ್ಥಾನದಲ್ಲಿ ಪುಟ್ಟ ಹಳ್ಳಿಯೊಂದು ಇದೆ.. ಇಲ್ಲಿ ಹೆಣ್ಣು ಮಗು ಹುಟ್ಟಿದ್ರೆ ಮಾಡುವ ಕೆಲಸ ನಿಜಕ್ಕೂ ಇವರನ್ನು ನೋಡಿ ಕಲಿಯುವಂತದ್ದು..

ಪ್ರಧಾನಿ ನರೇಂದ್ರ ಮೋದಿಯವರು ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಮೂಲಕ ಹೆಣ್ಣು ಮಗುವಿನ ಪ್ರಾಮುಖ್ಯತೆಯನ್ನು ಸಮಾಜಕ್ಕೆ ತಿಳಿಸಲು ಪ್ರಯತ್ನಿಸುತ್ತಿದ್ದಾರೆ.. ಆದರೆ ರಾಜಸ್ಥಾನದ ಈ ಹಳ್ಳಿಯಲ್ಲಿ 11 ವರ್ಷಗಳ ಹಿಂದಿನಿಂದಲೂ ಹೆಣ್ಣು ಮಗು ಜನಿಸಿದರೆ ಆ ಮಗುವಿನ ಹೆಸರಲ್ಲಿ 111 ಸಸಿಗಳನ್ನು ನೆಡುವ ವಿಶಿಷ್ಟ ಸಂಪ್ರದಾಯವನ್ನು ಪಿಪ್ಲಾಂಟ್ರಿ ಹಳ್ಳಿಯ ಜನರು ಆಚರಿಸುತ್ತಾ ಬಂದಿದ್ದಾರೆ..


ಹೆಣ್ಣು ಮಗು ಜನಿಸಿದಾಕ್ಷಣ ಸಸಿಗಳನ್ನು ನೆಡುವ ಮೂಲಕ ಅಲ್ಲಿಯ ಜನರು ಎರೆಡು ಪ್ರಮುಖ ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕಲು ಪ್ರಯತ್ನಿಸುತ್ತಿದ್ದಾರೆ..

ಒಂದು ಹೆಣ್ಣು ಮಕ್ಕಳ ಸಬಲೀಕರಣವಾದರೆ.. ಇನ್ನೊಂದು ಅರಣ್ಯ ನಾಶವನ್ನು ತಪ್ಪಿಸುವುದಾಗಿದೆ.‌.


ರಾಜಸ್ಥಾನದ ಈ ಹಳ್ಳಿಯ ಜನರು ಮಾಡುತ್ತಿರುವ ಕಾರ್ಯ ನಿಜಕ್ಕೂ ಪ್ರಶಂಸನೀಯವಾದದ್ದಾಗಿದೆ..

ಸತತ 11 ವರ್ಷಗಳಿಂದಲೂ ಈ ಆಚರಣೆಯನ್ನು ಆಚರಿಸಿಕೊಂಡು ಬರುವುದರ ಮೂಲಕ ಅರಣ್ಯ ರಕ್ಷಣೆಯ ಕಾರ್ಯವನ್ನು ಮಾಡುತ್ತಿದ್ದಾರೆ.. ಇದೇ ರೀತಿಯಾಗಿ ದೇಶ ಪೂರ್ತಿ ಸಸಿಗಳನ್ನು ನೆಟ್ಟರೆ ನಮ್ಮ ದೇಶದಲ್ಲಿ ಅರಣ್ಯ ನಾಶವಾಗುತ್ತಿರುವುದು ತಪ್ಪುತ್ತದೆ.. ಜೊತೆಗೆ ಹೆಣ್ಣು ಮಕ್ಕಳ ರಕ್ಷಣೆಯು ಕೂಡ ಆಗುತ್ತದೆ..