ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್; ಬೇರೆ ದೇಶಕ್ಕೆ ಯುದ್ಧ ವಿಮಾನ ರಪ್ತು ಮಾಡುವ ಸಾಮರ್ಥ್ಯ ಹೊಂದಿದ ಭಾರತ.!

0
163

ಭಾರತೀಯ ಸೇನೆ ಹೊಸ ಹೊಸ ಯುದ್ದ ಸಾಮಗ್ರಿಗಳನ್ನು ಹೊಂದಿ ಬಲಿಷ್ಠವಾಗುತ್ತಿದೆ. ಅದರಲ್ಲಿ ವಿಶೇಷ ವೆಂದರೆ ದೇಶದಲ್ಲೇ ನಿರ್ಮಿತ ಯುದ್ದ ವಿಮಾನಗಳು ತಯಾರಿಸುತ್ತಿದ್ದು, ಹೆಮ್ಮೆಯ ವಿಚಾರವಾಗಿದೆ. ದೇಶಿಯ ತಯಾರಿಕಾ ವಿಮಾನ ಎಷ್ಟೊಂದು ಬಲಿಷ್ಟವೆಂದು ತೋರಿಸಲು ಸ್ವತಹ ರಕ್ಷಣಾ ಸಚಿವರೇ ಯುದ್ದ ವಿಮಾನದಲ್ಲಿ ಹಾರಾಟ ನಡೆಸಿ ಇತಿಹಾಸ ನಿರ್ಮಿಸಿದ್ದಾರೆ. ಇದರಿಂದ ವಿರೋಧಿ ದೇಶಗಳಿಗೆ ಮತ್ತಷ್ಟು ನಡುಕ ಹುಟ್ಟುವುದರಲ್ಲಿ ಅನುಮಾನವಿಲ್ಲ.

ಹೌದು ದೇಶೀಯ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್‍ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ ಮೊದಲ ಬಾರಿಗೆ ಹಾರಾಟ ನಡಸಿದ್ದಾರೆ. ಎಚ್‍ಎಎಲ್ ವಿಮಾನ
ನಿಲ್ದಾಣಕ್ಕೆ ಬಂದ ರಾಜನಾಥ್ ಸಿಂಗ್ ಅವರು ಯುದ್ಧ ವಿಮಾನದ ಪೈಲಟ್ ಧಿರಿಸಿನಲ್ಲಿ ತೇಜಸ್‍ನ ಕೋ-ಪೈಲಟ್ ಸ್ಥಾನದಲ್ಲಿ ಕುಳಿತರು. ಹಾರಾಟಕ್ಕೂ ಮುನ್ನ ಸಂತಸದಿಂದ ಜನರತ್ತ ಕೈ ಬೀಸಿದರು. ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿರುವ ಶಸ್ತ್ರ ಸಜ್ಜಿತ ತೇಜಸ್ ವಾಯುಪಡೆ ಕಾರ್ಯಾಚರಣೆಗಳಲ್ಲಿ ಸೇರ್ಪಡೆಯಾಗಲು ಸಜ್ಜಾಗಿದೆ. ಇತ್ತೀಚಿಗಷ್ಟೆ ಈ ವಿಮಾನವು ‘ಅರೆಸ್ಟ್ ಲ್ಯಾಂಡಿಂಗ್’ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.

ಬೆಳಿಗ್ಗೆ 8:30ರಿಂದ 9 ಗಂಟೆ ವೆರೆಗೆ ತೇಜಸ್ ಯುದ್ಧ ವಿಮಾನದ ಬಗ್ಗೆ ರಕ್ಷಣಾ ಸಚಿವರಿಗೆ ಪೈಲೆಟ್ ಗಳಿಂದ ತೇಜಸ್ ಕುರಿತು ಮಾಹಿತಿ ನೀಡುವರು. ಬೆಳಗ್ಗೆ 9 ರಿಂದ 9:30 ರ ತನಕ ಅರ್ಧ ಗಂಟೆಗಳ ಕಾಲ ಆಕಾಶದಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಕೂತು ಹಾರಾಟ ನಡೆಸುವರು. ತೇಜಸ್ ನಾಲ್ಕುವರೆ ತಲೆಮಾರಿನ ಲಘು ಸಮರ ವಿಮಾನವಾಗಿದ್ದು, ಇದನ್ನು ಸರ್ಕಾರಿ ಏರೋಸ್ಪೇಸ್ ಬೆಹೆಮೊಥ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿದೆ. ಕಳೆದ ಶುಕ್ರವಾರ ಗೋವಾದಲ್ಲಿ ಇದರ ನಿರ್ಣಾಯಕ ಪರೀಕ್ಷೆ ನಡೆಸಲಾಗಿತ್ತು ಇದು ವಿಮಾನವಾಹಕ ನೌಕೆಯಿಂದ ತೇಜಸ್ ತನ್ನ ಕಾರ್ಯಾಚರಣೆ ನಡೆಸಲು ಕೇವಲ ಇನ್ನು ಒಂದು ಹೆಜ್ಜೆಯಷ್ಟೇ ಮಾತ್ರ ಬಾಕಿಯಿದೆ.

ಅದರಂತೆ ಯುದ್ಧ ವಿಮಾನ ತೇಜಸ್ ನಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಪಾತ್ರರಾದರು. ಎರಡು ಆಸನಗಳ ಸಾಮರ್ಥ್ಯ ಹೊಂದಿರುವ ತೇಜಸ್ ನಲ್ಲಿ ರಾಜನಾಥ್ ಸಿಂಗ್ ಅವರಿಗೆ ಏರ್ ವೈಸ್ ಮಾರ್ಷಲ್, ಪ್ರೊಜೆಕ್ಟ್ ಡೈರೆಕ್ಟರ್ ಎನ್.ತಿವಾರಿ ಸಾಥ್ ನೀಡಿದರು. 2018 ಜೂನ್ ನಲ್ಲಿ 18 ತೇಜಸ್ ಯುದ್ಧವಿಮಾನಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡಿವೆ. 2013ರಲ್ಲಿ ತೇಜಸ್ ಯುದ್ಧ ವಿಮಾನಗಳಿಗೆ ಪರೀಕ್ಷಾರ್ಥವಾಗಿ ಹಾರಾಟ ನಡೆಸಲು ಅನುಮತಿ ನೀಡಲಾಗಿತ್ತು. ಭಾರತೀಯ ವಾಯುಸೇನೆ ಸದ್ಯ ಎರಡು ಸ್ಕಾಡ್ರನ್ ಗಳ 18 ಯುದ್ಧ ವಿಮಾನಗಳನ್ನು ಹೊಂದಿದ್ದು, ಹೆಚ್ಚು ಸ್ಕಾಡ್ರನ್ ವುಳ್ಳ ಮಾರ್ಕ್-1 ವರ್ಷನ್ ನ 83 ಯುದ್ಧ ವಿಮಾನಗಳನ್ನ ಹೊಂದುವ ಮೂಲಕ ಐಎಎಫ್ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲಿದೆ. 83 ತೇಜಸ್ ಯುದ್ಧ ವಿಮಾನಗಳ ತಯಾರಿಕೆಗೆ 50 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.

ಈ ಕುರಿತು ಮಾತನಾಡಿದ ರಕ್ಷಣಾ ಮಂತ್ರಿಗಳು ಇಂತಹ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಈಗ ಭಾರತಕ್ಕೂ ಇದೆ ಎಂದು ತೋರಿಸಿಕೊಟ್ಟಿದ್ದಾರೆ. ಈಗ ನಾವು ತೇಜಸ್ ಯುದ್ಧ ವಿಮಾನವನ್ನು ಬೇರೆ ದೇಶಗಳಿಗೆ ರಫ್ತು ಮಾಡಬಹುದು ಹಾರಾಟ ಅನುಭವ ಕುರಿತು ಮಾತನಾಡಿದ ರಾಜನಾಥ್ ಸಿಂಗ್, ಯುದ್ಧ ವಿಮಾನದಲ್ಲಿನ ಹಾರಾಟ ತುಂಬಾ ಆರಾಮಾದಾಯಕವಾಗಿತ್ತು. ನನ್ನ ಜೀವನದಲ್ಲೇ ಕೆಲ ಅತ್ಯಮೂಲ್ಯ ಕ್ಷಣಗಳಲ್ಲಿ ಇದೂ ಒಂದಾಗಿದೆ ಎಂದು ಹೇಳಿದರು.

Also read: ಭಾರತಕ್ಕೆ ಹೆದರಿ ಸೈನಿಕರ ಶವವನ್ನು ಹೊತ್ತೊಯ್ಯಲು ಎರಡು ದಿನ ಪರದಾಡಿದ ಪಾಕ್; ಬಿಳಿ ಬಾವುಟ ತೋರಿಸಿ ಶರಣಾದ ವಿಡಿಯೋ ವೈರಲ್.!