ಕರ್ನಾಟಕ ಏಕೀಕರಣದ ಶುಭಾಶಯಗಳು, ಇವತ್ತಿಗೆ ೬೦ ವರುಷ, ವಜ್ರ ಮಹೋತ್ಸವ!!!

0
516

ಕರ್ನಾಟಕ ಏಕೀಕರಣದ ಶುಭಾಶಯಗಳು, ಇವತ್ತಿಗೆ ೬೦ ವರುಷ, ವಜ್ರ ಮಹೋತ್ಸವ!!!

ಭಾರತ ಸ್ವಾತಂತ್ರ್ಯ ಪಡೆದರು ಕನ್ನಡಿಗರ ಕನವರಿಕೆಗಳು ನನಸಾಗಿರಲಿಲ್ಲ. ವಿವಿಧ ಆಳ್ವಿಕೆಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕರ ಪ್ರದೇಶಗಳು “ವಿಶಾಲ ಮೈಸೂರು” ಹೆಸರಿನಲ್ಲಿ ಒಂದುಗೂಡಿದ್ದು ನವೆಂಬರ್ ೧, ೧೯೫೬.

ಮೈಸೂರು ರಾಜ್ಯ ಉದಯಿಸಿದ ೧೭ ವರ್ಷಗಳ ಬಳಿಕ (ನವೆಂಬರ್ ೧, ೧೯೭೩) ಕರ್ನಾಟಕವೆಂದು ಪುನರ್ ನಾಮಕರಣಗೊಂಡಿತು.

ಕರ್ನಾಟಕ ಏಕೀಕರಣಕ್ಕೆ ಕೈ ಜೋಡಿಸಿಧ ಎಲ್ಲ ಮಹನೀಯರಿಗೂ, ವಿಶೇಷವಾಗಿ ಭಾಷಾವಾರು ಪ್ರಾಂತ್ಯದ ಬಗ್ಗೆ ಧ್ವನಿಯೆತ್ತಿದ ಕರ್ನಾಟಕ ವಿದ್ಯಾವರ್ಧಕ ಸಂಘ (ಸ್ಥಾಪನೆ: ೧೮೯೦), ಧಾರವಾಡ ಮತ್ತು ಕರ್ನಾಟಕ ಸಾಹಿತ್ಯ ಪರಿಷತ್ತನ್ನು (ಸ್ಥಾಪನೆ:೧೯೧೫) ನೆನೆಯುತ್ತ ಎಲ್ಲರಿಗೂ ೬೦ನೇ ಕರ್ನಾಟಕ ಏಕೀಕರಣದ ಶುಭಾಶಯಗಳು.

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು.

ಜೈ ಕರ್ನಾಟಕ