ರಕ್ಷಾ ಬಂಧನ ಅಂದರೆ ಏನು, ಈ ರಕ್ಷಾ ಬಂಧನ ಹೇಗೆ ಬೆಳಕಿಗೆ ಬಂತು ಅನ್ನೋ ಹಿನ್ನೆಲೆ ಇಲ್ಲಿದೆ ನೋಡಿ..!

0
1260

ರಕ್ಷಾ ಬಂಧನ ಅನ್ನುವುದು ಅಣ್ಣ ತಂಗಿಯ ಹಬ್ಬವಾಗಿದೆ ಈ ಅಣ್ಣ ತಂಗಿಯ ಮಹತ್ವ ಮತ್ತು ಈ ಹಬ್ಬದ ಹಿನ್ನೆಲೆ ಇಲ್ಲಿದೆ ನೋಡಿ.
ರಕ್ಷಾಬಂಧನ ಸಹೋದರ-ಸಹೋದರಿಯರ ವಿಶ್ವಾಸದ ಹಬ್ಬವಾಗಿದೆ. ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಭಾವನಾತ್ಮಕ ರಕ್ಷಾ ಬಂಧನ ಹಬ್ಬದ ದಿನದಂದು ಸಹೋದರಿಯರು ಅಣ್ಣನ ಯಶಸ್ಸು, ಆರೋಗ್ಯ, ಶ್ರೇಯೋಭಿವೃದ್ಧಿ ಹಾಗೂ ನೆಮ್ಮದಿ ಕರುಣಿಸೆಂದು ದೇವರಲ್ಲಿ ಕೇಳಿಕೊಳ್ಳುತ್ತಾರೆ.

source:Times of India

ತಂಗಿ ಅಣ್ಣನ ಬಾಯಿ ಸಿಹಿ ಮಾಡಿ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾಳೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವುದು ಈ ಹಬ್ಬದ ವಿಶೇಷವಾಗಿದೆ.

ಶ್ರೀಕೃಷ್ಣ ಮತ್ತು ಸತ್ಯಭಾಮಾ ಒಮ್ಮೆ ದ್ರೌಪದಿಯ ಮನೆಗೆ ತೆರಳುತ್ತಾರೆ. ಆಗ ಕೃಷ್ಣನ ಕೈಗೆ ಗಾಯವಾಗಿ ರಕ್ತ ಸುರಿಯುತ್ತದೆ. ಇದನ್ನು ನೋಡಿ ಸತ್ಯಭಾಮೆ ಅಯ್ಯೋ ರಕ್ತ ಎಂದು ಕೂಗಿ ಸುಮ್ಮನೆ ನಿಲ್ಲುತ್ತಾಳೆ. ಆದರೆ ದ್ರೌಪದಿ ತನ್ನ ಸೀರೆಯ ಸೆರಗು ಹರಿದು ಕೃಷ್ಣನ ಗಾಯಕ್ಕೆ ಕಟ್ಟಿ ರಕ್ತ ನಿಲ್ಲಿಸಲು ಪ್ರಯತ್ನಿಸುತ್ತಾಳೆ. ಈ ಘಟನೆ ನಡೆದದ್ದು ಶ್ರಾವಣ ಹುಣ್ಣಿಮೆಯ ದಿನ. ಆಗ ಕೃಷ್ಣನು ಈ ಸೀರೆಯ ಸೆರಗು ರಕ್ಷಾಬಂಧನದ ಸಂಕೇತವಾಗಿದ್ದು, ನಿನ್ನ ಕಷ್ಟ ಕಾಲದಲ್ಲಿ ನಿನ್ನನ್ನು ಕಾಪಾಡುವ ಹೊಣೆ ನನ್ನದು ಎಂದು ಶಪಥ ಮಾಡಿದ ಪರಿಣಾಮ ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಆಕೆಗೆ ರಕ್ಷಣೆ ಸಿಗುತ್ತದೆ. ಅಂದಿನಿಂದ ಭಾರತದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ.

source:AstroSage.com

ಸಂಬಂಧಗಳನ್ನು ಬೆಸೆಯುವ ರಕ್ಷಾಬಂಧನ ದಿನದಂದು ಸಹೋದರರು ಕೇವಲ ರಾಖಿಯನ್ನು ಕಟ್ಟಿಸಿಕೊಂಡು ಉಡುಗೊರೆ ಕೊಟ್ಟ ಮಾತ್ರಕ್ಕೆ ಅವರ ಕರ್ತವ್ಯ ಮುಗಿಯುವುದಿಲ್ಲ. ರಕ್ಷಾಬಂಧನ ಅರ್ಥ ಬಾಂಧವ್ಯ ಹಾಗೂ ರಕ್ಷೆ ಎಂದು. ರಾಖಿ ಕಟ್ಟಿಕೊಂಡ ಸಹೋದರು ಸದಾಕಾಲ ಸಹೋದರಿಯ ಬೆನ್ನ ಹಿಂದೆ ನಿಂತು ಆಕೆಯ ರಕ್ಷಣೆ ಮಾಡುವುದು ಆತನ ಕರ್ತವ್ಯವಾಗಿರುತ್ತದೆ. ರಕ್ಷಾ ಬಂಧನದ ಅರ್ಥವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ತಮ್ಮ ಕರ್ತವ್ಯವನ್ನು ಪಾಲಿಸಿದರೆ ರಕ್ಷಾ ಬಂಧನದ ಹಬ್ಬಕ್ಕೆ ಒಂದು ನಿಜವಾದ ಅರ್ಥ ಅಥವಾ ಒಂದು ಮಹತ್ವ ಸಿಗುತ್ತದೆ.