ಸಾಮಾನ್ಯ ಹುಡುಗ ರಕ್ಷಿತ್ ಶೆಟ್ಟಿ “ಸ್ಟಾರ್” ಆಗಿದ್ದು ಹೇಗೆ ಗೊತ್ತ…!

0
923

ರಕ್ಷಿತ್ ಶೆಟ್ಟಿ ಒಬ್ಬ ಸಾಮಾನ್ಯ ಹುಡುಗ ಆದರೆ ಇವತ್ತು ಒಬ್ಬ “ಸ್ಟಾರ್” ಇವರು ಬೆಳುದು ಬಂದಿದು ಸಹ ಅಷ್ಟೇ ಕಷ್ಟವಾಗಿತ್ತು ಯಾಕೆ ಅಂದ್ರೆ ಇವರಿಗೆ ಕನ್ನಡ ಚಿತ್ರ ರಂಗದಲ್ಲಿ ಯಾವುದೇ ಗಾಡ್ ಫಾದರ್ ಇರಲಿಲ್ಲ ಕಣ್ರೀ ಆದ್ರೂ ಇವರು “ಸ್ಟಾರ್” ಆಗಿದ್ದು ಹೇಗೆ ಅಂತೀರಾ ಇಲ್ಲಿ ನೋಡಿ ಮೂಲತಃ ಇವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್ ಪದವಿ ಪಡೆದಾನಂತರ,

ಎರಡು ವರ್ಷಗಳ ಕಾಲ ಸಾಫ್ಟ್‍ವೇರ್ ಉದ್ಯೋಗಿಯಾಗಿ ಕೆಲಸಮಾಡಿದ್ದಾರೆ. ಅರೆ ಸಾಫ್ಟ್‍ವೇರ್ ಉದ್ಯೋಗಿ ಹೇಗೆ ಕನ್ನಡ ಚಿತ್ರ ರಂಗಕ್ಕೆ ಬಂದ್ರು ಅಂತೀರಾ ಅಲ್ಲೇ ಕಣ್ರೀ ಇರೋದು ಅದೇನು ಅಂದ್ರೆ ಇವರು ಕನ್ನಡ ಚಿತ್ರ ರಂಗಕ್ಕೆ ಬರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಒಮ್ಮೆಲೇ ಹೀರೊ ಆದ್ರೂ ಅನ್ಕೋಬೇಡಿ ಇವರು ಮೊದಲು ಕಾಲಿಟ್ಟಿದ್ದು.

ನಾಟಕ ರಂಗಕ್ಕೆ ಕಣ್ರೀ ಅಲ್ಲಿಂದ ಶುರುವಾಯಿತು ಇವರ ಕನ್ನಡ ಚಿತ್ರ ರಂಗದ ಪಯಣ.ಆಮೇಲೆ ಇವರು ಹೇಗೆ ಬೆಳೆದ್ರೂ ಅಂತ ನಿಮಗೆ ಗೊತ್ತು ಏಕೆ ಅಂದ್ರೆ ಆವರಣ ಬೆಳಿಸಿದ್ದು ನೀವೆ ತಾನೆ.

ರಕ್ಷಿತ್ ಶೆಟ್ಟಿ ಚೊಚ್ಚಲ ಚಿತ್ರ ೨೦೧೦ರಲ್ಲಿ ಬಿಡುಗಡೆಯಾದ ನಮ್ ಏರಿಯಾಲ್ ಒನ್‍ದಿನ. ೨೦೧೩ರ ಪ್ರಣಯ ಮತ್ತು ಹಾಸ್ಯ ಕಥೆಯುಳ್ಳ ಸಿಂಪಲ್ಲಾಗ್ ಒಂದ್ ಲವ್‍ ಸ್ಟೋರಿ ಪ್ರೇಕ್ಷಕರ ಪ್ರಶಂಸೆಗೊಳಪಟ್ಟಿತು. ನಂತರ ೨೦೧೪ರಲ್ಲಿ ಅವರು ನಿರ್ದೇಶಿಸಿ ನಟಿಸಿದ ಕ್ರೈಂ-ಡ್ರಾಮಾ ಚಿತ್ರ ಉಳಿದವರು ಕಂಡಂತೆ ಚಿತ್ರ ವ್ಯಾಪಕ ವಿಮರ್ಶಾತ್ಮಕ ಪ್ರಶಂಸೆ ಪಡೆಯಿತು.

ಈ ಚಿತ್ರವು ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕನಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕನಾಗಿ ಫಿಲಂಫೇರ್ ಪ್ರಶಸ್ತಿಗಳನ್ನು ತಂದುಕೊಟ್ಟಿತು. ನಂತರ ಅವರು ವಾಸ್ತು ಪ್ರಕಾರ (೨೦೧೫) ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು (೨೦೧೬) ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಯಶಸ್ಸಿನ ಓಟವನ್ನು ಮುಂದುವರಿಸಿದರು.

ಶೆಟ್ಟಿಯವರಿಗೆ ತಮ್ಮ ಮುಂದಿನ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸು ಗಳಿಸಿಕೊಟ್ಟದ್ದು, ತಾವೇ ಬರೆದು ನಿರ್ಮಿಸಿದ ೨೦೧೬ರ ಹಾಸ್ಯಪ್ರಧಾನ ಚಿತ್ರ ಕಿರಿಕ್ ಪಾರ್ಟಿ.
ಈ ಚಿತ್ರ ಸಿಕ್ಕಾಪಟ್ಟೆ ಯಶಸ್ಸು ತಂದು ಕೊಟ್ಟ ಚಿತ್ರವಾಗಿದೆ.

ಈರೀತಿಯಾಗಿ ರಕ್ಷಿತ್ ಶೆಟ್ಟಿ ಹಲುವು ಏಳುಬೀಳುಗಳ ಮದ್ಯೆ ಬೆಳೆದು ಬಂದ ಸಾಮಾನ್ಯ ಹುಡುಗ ರಕ್ಷಿತ್ ಶೆಟ್ಟಿ ಇವತ್ತು “ಸ್ಟಾರ್” ಆಗಿದ್ದರೆ. ಹಾಗೆ ಸಾಧಕರ ಸಿಟ್ ನಲ್ಲಿ ಸಹ ಇವತ್ತು ನಿಮ್ಮ ಮುಂದೆ ಬರಲಿದ್ದಾರೆ ಅದೇ ವೀಕೆಂಡ್ ವಿತ್ ರಮೇಶ್ ನಲ್ಲಿ.
ಈರೀತಿಯಾಗಿ ಒಬ್ಬ ಸಾಮಾನ್ಯ ಹುಡುಗ ರಕ್ಷಿತ್ ಶೆಟ್ಟಿ ಇವತು “ಸಿಂಪಲ್ ಸ್ಟಾರ್” ರಕ್ಷಿತ್ ಶೆಟ್ಟಿ ಆಗಿದ್ದರೆ.