ದೇಶದ 14ನೇ ರಾಷ್ಟ್ರಪತಿಯಾಗಿ ದಲಿತ ನಾಯಕ ರಾಮನಾಥ್‌ ಕೋವಿಂದ್‌ ಆಯ್ಕೆ. ಇವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

0
786

ಇಂದು ನಡೆದ ಮತದಾನ ಎಣಿಕೆಯಲ್ಲಿ ಕೋವಿಂದ್ ಅವರು ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು 3,34 730 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕೋವಿಂದ್ ಅವರು 7,02,044 ಮತಗಳ ಮೌಲ್ಯ ಪಡೆದರೆ ಮೀರಾ ಕುಮಾರ್ ಅವರು 3,67, 314 ಮತಗಳನ್ನು ಪಡೆದಿದ್ದಾರೆ. ರಾಮ್’ನಾಥ್ ಅವರ ಗೆಲುವು ನಿರೀಕ್ಷೆಯಾಗಿತ್ತು. ಲೋಕಸಭೆಯಲ್ಲಿ ಹೆಚ್ಚು ಬಹುಮತ ಹಾಗೂ ಹಲವು ರಾಜ್ಯಗಳಲ್ಲಿ ಬಿಜೆಪಿ ಬಹುಪತ ಪಡೆದಿರುವ ಕಾರಣ ಜಯ ಕೋವಿಂದ್ ಅವರಿಗೆ ನಿಚ್ಚಳವಾಗಿತ್ತು. ಜುಲೈ 24ಕ್ಕೆ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅವಧಿ ಮುಕ್ತಾಯಗೊಳ್ಳಲಿದ್ದು, ಜು.25 ರಂದು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

india president
source:The Indian Express

ದೇಶದ ಪ್ರಥಮ ಪ್ರಜೆಯಾಗಿ ಆಯ್ಕೆಯಾಗಿರುವ ರಮಾನಾಥ್ ಕೊವಿಂದ್ ರವರು ಒಬ್ಬ ದಲಿತ ನಾಯಕನಾಗಿ ಬೆಳೆದು ಬಂದಿದ್ದಾರೆ.
ಇವರು ಸಾಮಾನ್ಯ ರೈತನ ಮಗನಾಗಿದ್ದರು ಅನ್ನೋದು ವಿಶೇಷ. ರಾಮನಾಥ್‌ ಕೋವಿಂದ್‌ ಇತಿಹಾಸ ಹೇಳುವುದಾದರೆ.
ಇವರು ಒಬ್ಬ ರೈತನ ಮಗನಾಗಿ ಒಬ್ಬ ದಲಿತ ಕುಟುಂಬದಲ್ಲಿ ಜನಿಸಿದ್ದಾರೆ. ತುಂಬ ತಳ ಮಟ್ಟದಿಂದ ಮೇಲೆ ಬಂದಿರುವ ವ್ಯಕ್ತಿ ಇವರು.

indian president-1
source:yourstory.com

ರಾಮನಾಥ್‌ ಕೋವಿಂದ್‌ ರವರು 1 ಅಕ್ಟೋಬರ್ 1945 ರಲ್ಲಿ ಉತ್ತರ ಪ್ರದೇಶದ ಕಾನ್ಪುರ ನಲ್ಲಿ ದಲಿತ ರೈತ ಸಮುದಾಯದಲ್ಲಿ ಜನಿಸಿದ ರಾಮನಾಥ್ ಕೋವಿಂದ. ತಮ್ಮ ಬಿ ಎ ಎಲ್ ಎಲ್ ಬಿ ಶಿಕ್ಷಣದ ನಂತರ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾದರು ಕೂಡ ಕೇಡರ್ ಸರಿಯಾಗಿ ಸಿಗದ ಕಾರಣ ಆಡಳಿತ ಸೇವೆಗೆ ಸೇರದೆ ದೆಹಲಿ ಹೈ ಕೋರ್ಟ್ ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದರು .

indian president-2
source:indiatimes.com

ನಂತರ 1977 ರಿಂದ 79 ರ ವರೆಗೆ ಕೇಂದ್ರ ಸರ್ಕಾರದ ವಕೀಲರಾಗಿದ್ದ ರಾಮನಾಥ್ ಕೋವಿಂದ 1990 ರಿಂದ ಸುಪ್ರೀಂ ಕೋರ್ಟ್ ವಕೀಲ ಕೂಡ ಆಗಿದ್ದರು . 1998 ರಲ್ಲಿ ಅಖಿಲ ಭಾರತ ಕೋಲಿ ಸಮುದಾಯದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ರಾಮನಾಥ್ ಕೋವಿಂದ ಬಿಜೆಪಿ ದಲಿತ ಮೋರ್ಚಾ ಅಧ್ಯಕ್ಷರಾಗಿ ಕೂಡ ಕೆಲಸ ಮಾಡಿದ್ದಾರೆ .

indian president-3
source:indiatvnews.com

2012 ರಿಂದ 14 ರ ವರೆಗೆ ಬಿಜೆಪಿ ರಾಷ್ಟೀಯ ವಕ್ತಾರರಾಗಿ ಕೆಲಸ ಮಾಡಿರುವ ರಾಮನಾಥ್ ಕೋವಿಂದ 2014 ರಿಂದ ಬಿಹಾರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈಗ ಕೆ ಆರ್ ನಾರಾಯಣನ್ ನಂತರ ರಾಮನಾಥ್ ಕೋವಿಂದ ದೇಶದ ಎರಡನೇ ದಲಿತ ಸಮುದಾಯಕ್ಕೆ ಸೇರಿದ ರಾಷ್ಟ್ರಪತಿ ಯಾಗಿ ಆಯ್ಕೆಯಾಗಿದ್ದಾರೆ.