ರಾಮಾನುಜಾಚಾರ್ಯರು ಪ್ರತಿಪಾದಿಸಿದ “ವಿಶಿಷ್ಟಾದ್ವೈತ” ಸಿದ್ಧಾಂತ

0
2485

ರಾಮಾನುಜಾಚಾರ್ಯರ

ರಾಮಾನುಜಾಚಾರ್ಯರು ಚೆನೈ ಹತ್ತಿರದ ಶ್ರೀ ಪೆರಂಬುದೂರ್ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಕೇಶವ ಸೋಮಯಾಜಿ, ತಾಯಿ ಕಾಂತಿಮತಿ. ದಕ್ಷಿಣ ಭಾರತದಲ್ಲಿ ಪ್ರಸಿದ್ಧ ವಿದ್ಯಾ ಕೇಂದ್ರವಾಗಿದ್ದು ಕಂಚಿಯಲ್ಲಿ ಯಾದವ ಪ್ರಕಾಶರ ಬಳಿ ವೇದ ಉಪನಿಷತ್ತುಗಳ ಅಧ್ಯಯನ ಮಾಡಿದರು. ನಂತರ ಶ್ರೀರಂಗಕ್ಕೆ ತೆರೆಳಿ ಅಲ್ಲಿಯ ಮಠದ ಪೀಠಾಧೀಶರದರು. ಶೈವ ಧರ್ಮಾವಲಂಬಿಯಾದ ಚೋಳ ದೊರೆಯು ರಾಮಾನುಜಾಚಾರ್ಯರಿಗೆ ಕಿರುಕುಳ ಕೊಡುತ್ತಿದ್ದ. ಆಗ ಕರ್ನಾಟಕದ ಹೊಯ್ಸಳರ ದೊರೆ ವಿಷ್ಣುವರ್ಧನನು ಇವರನ್ನು ಸ್ವಾಗತಿಸಿದನು. ಮೇಲುಕೋಟೆಗೆ ಹೋಗಿ ಚೆಲುವನಾರಾಯಣ ದೇವಾಲವನ್ನು ಕಟ್ಟಿಸಿದರು.

ರಾಮಾನುಜಾಚಾರ್ಯರು ಜನಸಾನ್ಯರಿಗೆ ಮುಕ್ತಿಮಾರ್ಗವನ್ನು ತೋರಿಸಲು ಅತೀವ ಆಸಕ್ತಿ ವಹಿಸಿದರು. ರಾಮಾನುಜಾಚಾರ್ಯರು ಶಾಸ್ತ್ರಧ್ಯಯನ ಮಾಡಿ, ಅನೇಕ ಗ್ರಂಥಗಳನ್ನು ರಚಿಸಿದರು. ವೇದಾಂತ ಸಂಗ್ರಹ, ವೇದಾಂತ ಸಾರ, ವೇದಾಂತ ದೀಪಿಕ, ಶ್ರೀ ಭಾಷ್ಯ ಹಾಗೂ ತಮ್ಮ ಮಹತ್ವಪೂರ್ಣ ಗ್ರಂಥವಾದ “ಗೀತಾಭಾಷ್ಯ”ದಲ್ಲಿ ಭಕ್ತಿ ತತ್ವಕ್ಕೆ ಪ್ರಾಧಾನ್ಯತೆ ನೀಡಿದ್ದಾರೆ.

ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತವನ್ನು “ವಿಶಿಷ್ಟಾದ್ವೈತ” ಎಂದೂ ಹಾಗೂ ಆ ಮತ “ಶ್ರೀ ವೈಷ್ಣವ ಮತ” ಎಂದು ಕರೆಯುತ್ತಾರೆ. ಹಾಗಾಗಿ ಅವರ ಶಿಷ್ಯರು “ಶ್ರೀವೈಷ್ಣವ”ರಾದರು.

ರಾಮಾನುಜಾಚಾರ್ಯರು ಜೀವ ಮತ್ತು ಪ್ರಕೃತಿ ಬ್ರಹ್ಮನ ಅಧೀನ ಆತ್ಮ ಮತ್ತು ಪರಮಾತ್ಮ ಏಕಕಾಲದಲ್ಲಿ ಒಂದಾಗಲು ಸಾಧ್ಯವಿಲ್ಲವೆಂದು ತಿಳಿಸಿದರು. ಮುಕ್ತಿಗೆ ಭಕ್ತಿ ಮತ್ತು ಶರಣಾಗತಿ (ಪ್ರಪತ್ತಿ) ಬಹಳ ಮುಖ್ಯವೆಂದು ತಿಳಿಸಿದರು. ಜಾತಿವಾದವನ್ನು ಖಂಡಿಸಿದ ರಾಮಾನುಜಾಚಾರ್ಯರು ಭಕ್ತಿ ತತ್ವವನ್ನು ಎಲ್ಲಾ ಜಾತಿಯ ಜನರಿಗೂ ಉಪದೇಶಿಸಿದರು. ಯಾವ ಆಸೆಗಳು ಇಲ್ಲದೆ ಭಗವಂತನಿಗೆ ಶರಣಾಗಬೇಕೆಂದು ತಿಳಿಸಿದರು. ರಾಮಾನುಜರು ಭಕ್ತಿ ಮಾರ್ಗದಿಂದ ಮೋಕ್ಷ ಪಡೆಯಬಹುದೆಂದು ಪ್ರತಿಪಾದಿಸಿದರು.

ಉತ್ತರದ ಸಂತ ರಮಾನಂದ, ರಾಯಿದಾಸ ಇವರುಗಳ ರಾಮಾನುಜರು ಸಿದ್ಧಾಂತದಿಂದ ಪ್ರಭಾವಿತರಾದರು. ಇದರಿಂದ ಉತ್ತರ ಭಾರತದಲ್ಲಿ ಭಕ್ತಿ ಪಂಥದ ಅನುಯಾಯಿಗಳಾದರು.

ದಕ್ಷಿಣ ಭಾರತದಲ್ಲಿನ ಕೆಲವು ಪ್ರಮುಖ ಶ್ರೀ ವೈಷ್ಣವ ಮಠಗಳು

1)ಯತಿರಾಜ ಮಠ – ಮೇಲುಕೋಟೆ ಮತ್ತು ಶ್ರೀಪರಂಬದೂರು

2)ಪರಕಾಲ (ಬ್ರಹ್ಮತಂತ್ರ) ಮಠ – ಮೈಸೂರು

3)ಅಹೋಬಲ ಮಠ – ಅಹೋಬಲ, (ಗುಂಟೂರು, ಆಂಧ್ರ ಪ್ರದೇಶ)

4)ಆಂಡವನ್ ಮಠ – ಶ್ರೀರಂಗಂ

5)ವಾಮೈಮಲೈ ಮಠ – ಸುಚೀಂದ್ರಂ