“ಕಣ್ಣಾ ಮುಚ್ಛೇ” ಹಾಡು ರಾಮಾಯಣದ ಕಥೆ ಹೇಳುತ್ತಿದೆ ಅಂತೆ ನಿಮಗೆ ಗೊತ್ತಿತ್ತಾ??

0
3509

ಕಣ್ಣಾ ಮುಚ್ಚಾಲೆ ಹಾಡಿಗೆ ಅರ್ಥ.

“ಕಣ್ಣಾ ಮುಚ್ಚೇ….

ಕಾಡೇ ಗೂಡೇ….

ಉದ್ದಿನ ಮೂಟೆ….

ಉರುಳೇ ಹೋಯ್ತು….

ನಮ್ಮಯ ಹಕ್ಕಿ …

ನಿಮ್ಮಯ ಹಕ್ಕಿ ….

ಬಿಟ್ಟೇ ಬಿಟ್ಟೆ … ”

ಇದೊಂದು ಮಕ್ಕಳ ಆಟ. ನಮ್ಮ ಹಿಂದಿನವರು ಮಕ್ಕಳಾಟಗಳಲ್ಲೂ ಸಹ ಎಷ್ಟು ಚೆನ್ನಾಗಿ ರಾಮಾಯಣದ, ಮಹಾಭಾರತದ ಕತೆಗಳನ್ನು ಜೋಡಿಸಿ ಹೆಣೆಯುತ್ತಿದ್ದರು ಎನ್ನುವುದಕ್ಕೆ ಇದೊಂದು ನಿದರ್ಶನ.

“ಕಣ್ಣಾ ಮುಚ್ಚೆ ” –

ಅಂದರೆ ಅಯೋಧ್ಯೆಯ ಮಹಾರಾಜ “ದಶರಥ” ಕಣ್ಣು ಮುಚ್ಚಲು….

“ಕಾಡೇ ಗೂಡೆ “-

ಶ್ರೀರಾಮಚಂದ್ರನಿಗೆ ಕಾಡೇ ಮನೆಯಾಯಿತು…

“ಉದ್ದಿನಮೂಟೆ” –

ಅಹಂಕಾರದಿಂದ ಉದ್ದಿನ ಬೇಳೆಯಂತೆ (ಮೂಟೆಯಂತೆ) ಉಬ್ಬಿಹೋಗಿದ್ದ ರಾವಣನನ್ನು …

“ಉರುಳೇ ಹೋಯ್ತು” –

ಯುದ್ಧದಲ್ಲಿ ರಾಮ ಹೊಡೆದು ನೆಲಕ್ಕುರುಳಿಸಿದ…. ಅದೆ ಸೊಕ್ಕಿನ ಮೂಟೆ, ಅದೇ ಉದ್ದಿನ ಮೂಟೆ ಉರುಳೇ ಹೋಯ್ತು….

“ನಮ್ಮಯ ಹಕ್ಕಿ, ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ “….

ಸಾತ್ವಿಕನಾದ ವಿಭೀಷಣ (ರಾವಣನ ತಮ್ಮ ) ಸೀತೆಯನ್ನು ಗೌರವಾಧರಗಳಿಂದ ತಂದು ಶ್ರೀರಾಮನಿಗೊಪ್ಪಿಸಿದ…

ರಾವಣ ತಿಳಿದಂತೆ ಇದು ನಮ್ಮ ಹಕ್ಕಿ ಅಲ್ಲ , ನಿಮ್ಮಯ ಹಕ್ಕಿ

ಬಿಟ್ಟು ಕಳಿಸಿಕೊಡುತ್ತಿದ್ದೇವೆ, ಸ್ವೀಕರಿಸಿ, ಎಂದು ರಾಮ ಲಕ್ಷ್ಮಣರನ್ನು ಪ್ರಾರ್ಥಿಸಿದ…

ಈ ಅರ್ಥದಲ್ಲಿ ಇಡೀ ರಾಮಾಯಣದ ಕಥೆಯನ್ನು ಈ ಮಕ್ಕಳಾಟದಲ್ಲಿ ಪೋಣಿಸಿದವರು ನಮ್ಮ ಹಿಂದಿನ ತಲೆಮಾರಿನವರು….*

ಹೀಗಿದೆ ನೋಡಿ ಅರ್ಥ ಈ “ಕಣ್ಣಾಮುಚ್ಚಾಲೆ” ಆಟಕ್ಕೆ…. ‘ಏಗ್ದಾಗೆಲ್ಲಾ ಐತೆ’ ಕೃತಿಯಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಗಳು ಇದನ್ನ ವಿವರಿಸಿದ್ದಾರೆ.