ಅತ್ತ ಮೋದಿ ನೋಟ್ ಬ್ಯಾನ್ ಮಾಡುತ್ತಿದ್ದರೆ, ಇತ್ತ ಬಿಜೆಪಿ ಶಾಸಕ ಏನು ಮಾಡಿದ ನೋಡಿ…!!

1
1590

ಬ್ಲಾಕ್ ಮನಿ ಹಾಗೂ ಖೋಟಾ ನೋಟುಗಳ ವಿರುದ್ಧ ಸಮರ ಸಾರಿದ ಪ್ರಧಾನಿ ಮೋದಿ, 500-1000ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳ ಚಲಾವಣೆ ಬಂದ್ ಅಂತ ಘೋಷಿಸಿಬಿಟ್ಟರು. ”ನೋಟ್ ಬ್ಯಾನ್’ನಿಂದ ಮಾತ್ರ ಭ್ರಷ್ಟಾಚಾರ ತಡೆಗಟ್ಟುವುದು ಸುಲಭ” ಎಂದು ಬಿಜೆಪಿ ಹೇಳಿಕೊಳ್ಳುತ್ತಿದ್ದಾರೆ ಇತ್ತ ಬಿಜೆಪಿ ವೆಸ್ಟ್ ಮುಂಬೈ Ghatkopar ಶಾಸಕ ರಾಮ್ ಕದಂ ತನ್ನ ಮುದ್ದಿನ ಮಗನಿಗೆ ಮರ್ಸಿಡೀಸ್ ಬೆಂಜ್ ಕಂಪೆನಿಯ ದುಬಾರಿ ಕಾರನ್ನು ಗಿಫ್ಟ್ ಮಾಡಿದ್ದಾರೆ, ಮಾಡಿರುವುದೂ ಅಲ್ಲದೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ upload ಮಾಡಿರುವ ಶಾಸಕನಿಗೆ ಟೀಕೆಯ ಸುರಿಮಳೆಯಾಗಿದೆ.

ಕೊಡಿಸಲಿ ಅವರ ದುಡ್ಡು ಅವರ ಇಷ್ಟ ಎನ್ನಬಹುದು ನೀವು, ಆದ್ರೆ ವಿಚಾರ ಅದು ಅಲ್ಲವೇ ಅಲ್ಲ, 15 ವರ್ಷದ ಮಗ ಮೈನರ್ ಎನ್ನುವುದನ್ನು ಮರೆತಿರುವ ಶಾಸಕ ತನ್ನ ಮಗ ಕಾರನ್ನು ಚಲಾಯಿಸುವಷ್ಟು ಪ್ರಬುದ್ದನೇ ಎಂಬುದನ್ನು ವಿಚಾರ ಮಾಡಿದಂತಿಲ್ಲ ಎನ್ನುವುದನ್ನು ಗಮನಿಸಬೇಕು. ಅದೂ ಅಲ್ಲದೆ ದೇಶದಲ್ಲಿ ನೋಟಿನ ಬದಲಾವಣೆ ಪರ್ವ ನೆಡೆಯುತ್ತಿರುವ ವೇಳೆಯಲ್ಲಿ ಕಾರನ್ನು ಕೊಳ್ಳಲು ನಿಮಗೆ ಇಷ್ಟೊಂದು ಹಣ ಎಲ್ಲಿಂದ ಬಂದಿದೆ ಎಂದು ಪ್ರೆಶ್ನೆಗಳ ಮೇಲೆ ಪ್ರೆಶ್ನೆ ಕೇಳುತ್ತಿದ್ದಾರೆ ಜನ.

“ಆತ ಇನ್ನು ಚಿಕ್ಕ ಹುಡುಗನಾಗಿದ್ದು, ಒಬ್ಬ ಜವಾಬ್ದಾರಿಯುತ ತಂದೆಯಾಗಿ ಈ ರೀತಿಯ ನಿರ್ದಾರ ನಿಮಗೆ ಸರಿ ಎನ್ನಿಸುತ್ತಿದೆಯೇ…?” ಎಂಬೆಲ್ಲಾ ಪ್ರೆಶ್ನೆಗಳ ಸುರಿಮಳೆಯಾಗಿದೆ. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಶಾಸಕ ಯಾರ ಕೈಗೂ ಸಿಗದೇ ಓಡಾಡುತ್ತಿದ್ದಾರೆ ಎನ್ನಲಾಗಿದೆ. 2009ರಲ್ಲಿ MNS ಪಾರ್ಟಿ ಇಂದ ಗೆದ್ದು ಶಾಸಕರಾದ ರಾಮ್ ಕದಂ ನಂತರ 2004ರಲ್ಲಿ ಬಿಜೆಪಿ ಟಿಕೆಟ್ ಪಡೆದು ಗೆದ್ದು ಬಂದಿದ್ದರು. ರಾಮ್ ಕದಂ ಗೆ ವಿವಾದಗಳು ಇದೆ ಮೊದಲೇನಲ್ಲ BMC ಅದಿಕಾರಿಯನೊಮ್ಮೆ ಹೊಡೆದು ಸುದ್ದಿಯಾಗಿದ್ದರು.