ಅಪ್ಪನ ದುಡ್ಡಿನಲ್ಲಿ ಪಾರ್ಟಿ ಮಾಡುವವರಿಗೆ ನಾಯಕತ್ವದ ಬಗ್ಗೆ ಏನು ಗೊತ್ತು ಎಂದು ರಮ್ಯಾಗೆ ಕಟುವಾಗಿ ಪ್ರತಿ ಟ್ವೀಟ್ ಮಾಡಿದ ನವರಸ ನಾಯಕ…!!

1
468

ನಿನ್ನೆ ಉದ್ಯಾನ ನಗರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಗರಕ್ಕೆ ಆಗಮಿಸಿದ್ದರು. ಮೋದಿಯವರ ಭಾಷಣ ಕೇಳಲು ರಾಜ್ಯದ ಮೂಲೆ ಮೂಲೆಗಳಿಂದಲೂ ಜನ ಸಾಗರವೇ ಹರಿದು ಬಂದಿತ್ತು. ಆದರೆ, ಕನ್ನಡ ನಟಿ ಹಾಗು ಮಂಡ್ಯ ಮಾಜಿ ಸಂಸದೆ ರಮ್ಯಾ ಮೋದಿಯವರ ಭಾಷಣವನ್ನು ಮೂರು ಅಕ್ಷರಗಳಲ್ಲಿ ಟೀಕಿಸಿದ್ದಾರೆ.

ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ವಿಶೇಷವಾಗಿ ರೈತರಿಗೆ ಕಲ್ಪಿಸಿರುವ ಸೌಲಭ್ಯಗಳು ಮತ್ತು ತಮ್ಮ ಸರ್ಕಾರದಿಂದ ರೈತರಿಗೆ ಆಗಿರುವ ಲಾಭಗಳ ಬಗ್ಗೆ ವಿವರಿಸಿದರು. ಅವರ ಭಾಷಣವನ್ನೇ ಗುರಿಯಾಗಿಟ್ಟುಕೊಂಡು ರಮ್ಯಾ ಭಾಷಣದಲ್ಲಿ ರೈತರು ತಮ್ಮ ಟಾಪ್ ಆದ್ಯತೆ ಎಂದು ಮೋದಿ ಹೇಳಿದ್ದರು. ಟಾಪ್ ಎಂದರೆ ಟೊಮೆಟೋ, ಈರುಳ್ಳಿ, ಪೊಟಾಟೋ ಎಂದು ಟೀಕಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ರಮ್ಯಾ ತಮ್ಮ ಸಾಮಾಜಿಕ ಜಾಲತಾಣ ಖಾತೆ ಟ್ವಿಟ್ಟರ್ ನಲ್ಲಿ TOP ಎಂದರೆ ಟೊಮೆಟೋ, ಈರುಳ್ಳಿ, ಪೊಟಾಟೋ ಆದರೆ ಮೋದಿ ಮಾಡುತ್ತಿರುವುದು POT, ಎಂದರೆ ಮಾದಕ ದ್ರವ್ಯ. ಮರಿಜುನಾ ಎಂಬ ಮಾದಕ ದ್ರವ್ಯದ ಮರಕ್ಕೆ POT ಎನ್ನುವ ಹೆಸರು ಇದೆ.

ಕರ್ನಾಟಕದಲ್ಲಿ 3,500 ರೈತರು ಸಾವನ್ನಪ್ಪಿದ್ದರೂ ಗುಜರಾತ್, ಆಂಧ್ರ, ರಾಜಸ್ಥಾನ, ತಮಿಳುನಾಡಿಗೆ ಹೆಚ್ಚು ಪರಿಹಾರ ಕೊಟ್ಟಿರೋ ಮೋದಿ ಸರ್ಕಾರ ಕರ್ನಾಟಕಕ್ಕೆ ಅತ್ಯಂತ ಕಡಿಮೆ ಬರ ಪರಿಹಾರ ಕೊಟ್ಟಿದೆ. ಸಿದ್ದರಾಮಯ್ಯ 1,165 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ, ಮೋದಿ ಸರ್ಕಾರ ರೈತರಿಗೋಸ್ಕರ ಏನು ಮಾಡಿಲ್ಲ ಎಂದು ರಮ್ಯಾ ಹೇಳಿದ್ದಾರೆ.

ರಮ್ಯಾ ಅವರ ಈ ಟ್ವೀಟ್ ಗೆ ಪ್ರತಿ ಟ್ವೀಟ್ ಮಾಡಿದ ನವರಸ ನಾಯಕ ಹಾಗು ಬಿಜೆಪಿಯ ಮಾಜಿ ಶಾಸಕ ಜಗ್ಗೇಶ್, ಮೋದಿ ಅವರ ಬಗ್ಗೆ ಮಾತನಾಡಲು ಇವರು ಯಾರು ಸರಿಯಾಗಿ ಕನ್ನಡ ಮಾತನಾಡೋಕೆ ಬರಲ್ಲ, ಮಾದಕ ದ್ರವ್ಯದ ಬಗ್ಗೆ ಮಾತನಾಡುವ ಇವರು ರಾಹುಲ್ ಗಾಂಧಿ ವಿದೇಶದಲ್ಲಿ ಸಿಕ್ಕಿಬಿದ್ದಿದರ ಬಗ್ಗೆ ಯಾಕೆ ಹೇಳೊಲ್ಲ ಎಂದಿದ್ದಾರೆ.

ಮೋದಿಯವರ ನಾಯಕತ್ವದ ಬಗ್ಗೆ ವಿಶ್ವದ ಅಗ್ರಗಣ್ಯ ನಾಯಕರೇ ಹೊಗಳಿದ್ದಾರೆ. ಅಪ್ಪನ ದುಡ್ಡಲ್ಲಿ ಪಾರ್ಟಿ ಮಾಡಿ, ಸಿನಿಮಾದಲ್ಲಿ ನಟಿಸಿ, ಸಿನೆಮಾದ ದುಡ್ಡಿನಿಂದಲೇ 5 ಸ್ಟಾರ್ ಹೋಟೆಲ್ ನಲ್ಲಿ ಉಳಿದುಕೊಂಡು, ದೊಡ್ಡ-ದೊಡ್ಡ ಕಾಂಗ್ರೆಸಿಗರ ಸಹಾಯದಿಂದ ಸುಲಭವಾಗಿ ಸಂಸದೆಗೆ ಸರ್ಕಾರ ಮತ್ತು ನಾಯಕತ್ವದ ಬಗ್ಗೆ ಏನು ಗೊತ್ತು ಎಂದು ಕಟುವಾಗಿ ಉತ್ತರಿಸಿದ್ದಾರೆ.