ಪ್ರಧಾನಿ ನರೇಂದ್ರ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಮಾಜಿ ಸಂಸದೆ ರಮ್ಯಾ..

0
414

ಚುನಾವಣೆ ಹತ್ತಿರವಾಗುತ್ತಿದಂತೆ ಆಯೋಗಕ್ಕೆ ಸಾವಿರಾರು ದೂರುಗಳು ಕೇಳಿ ಬರುತ್ತಿವೆ. ಅದರಂತೆ ಕರ್ನಾಟಕದಿಂದ ಹೆಚ್ಚು ದೂರುಗಳು ಹೋಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈಗ ಅದೇ ರೀತಿಯಲ್ಲಿ ನರೇಂದ್ರ ಮೋದಿ ಅವರ ವಿರುದ್ದ ಒಂದು ದೂರು ದಾಖಲಾಗಿದೆ. ಹೌದು ಮೋದಿಯವರನ್ನೇ ಟಾರ್ಗೆಟ್ ಮಾಡಿದ ನಟಿ, ಮಾಜಿ ಸಂಸದೆ ರಮ್ಯಾ ಮೋದಿ ವಿರುದ್ದ ಮಾತನಾಡಿ ಒಂದಿಲ್ಲದೊಂದು ಸುದ್ದಿಯಲ್ಲಿರುತ್ತಾರೆ. ಇಷ್ಟು ದಿನ ಬರಿ ಟ್ವೀಟ್ ಮೂಲಕ ಪ್ರಧಾನಿಗೆ ವ್ಯಂಗ್ಯವಾಗಿ ಬರೆದು ಮೋದಿ ಅಭಿಮಾನಿಗಳಿದ ಮಂಗಳಾರತಿ ಮಾಡಿಸಿಕೊಳ್ಳುತ್ತಿದ್ದ ರಮ್ಯಾ, ಮತ್ತೆ ಅಂತಹದೇ ಕೆಲಸಕ್ಕೆ ಕೈ ಹಾಕಿದ್ದಾರೆ ಬಿಜೆಪಿ ಅಭಿಮಾನಿಗಳು ಹೇಳುತ್ತಿದ್ದಾರೆ.


Also read: ಹಬ್ಬ, ಚುನಾವಣೆ, ರಜೆಯ ನೆಪದಲ್ಲಿ ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡಿದ್ರೆ ಲೈಸನ್ಸ್‌ ರದ್ದು! ಸಾರಿಗೆ ಇಲಾಖೆಯಿಂದ ಖಾಸಗಿ ಬಸ್ ಸಂಸ್ಥೆಗಳಿಗೆ ಖಡಕ್ ಎಚ್ಚರಿಕೆ..
ಹೌದು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ಮಾಜಿ ಕಾಂಗ್ರೆಸ್ ಸಂಸದೆ ರಮ್ಯಾ ಅವರು ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ದೂರಿನಲ್ಲಿರುವಂತೆ ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ಮತದಾರರಿಗೆ ಆಮಿಷವೊಡ್ಡುತ್ತಿದೆ ಎಂದು ಆರೋಪಿಸಿ ರಮ್ಯಾ ಅವರು ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ತಾನು ಸಲ್ಲಿಸಿದ ದೂರಿನ ಪ್ರತಿಯನ್ನು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಅದರಲ್ಲಿ ಬಿಜೆಪಿ ‘ಮೈ ಫಸ್ಟ್​ ವೋಟ್​​ ಫಾರ್​ ಮೋದಿ’ ಎಂಬ ಫೇಸ್​ಬುಕ್​ ಖಾತೆಯ ಮೂಲಕ ಮತದಾರರನ್ನು ಓಲೈಸುತ್ತಿದೆ. ಎಂದು ದೂರಿನಲ್ಲಿ ಹೇಳಲಾಗಿದೆ.


Also read: ಭವಿಷ್ಯ ನುಡಿದ ಜ್ಯೋತಿಷಿ ರೇವಣ್ಣ ನನ್ನದು ಸ್ವಾತಿ ನಕ್ಷತ್ರ ನನಗೆ ದೈವಾನುಗ್ರಹವಿದೆ; ಐಟಿ ಶಾಕ್‌ ನೀಡಲು ಹೋದ್ರೆ ಮಾಡಿಸಿದವ್ರಿಗೇ ಶಾಕ್‌ ತಿರುಗಿ ತಟ್ಟುತ್ತದೆ..

ಅಷ್ಟೇ ಅಲ್ಲದೆ ಬ್ಯಾಡ್ಜ್​, ಬ್ಯಾಗ್ಸ್​ ಟೀ ಶರ್ಟ್​, ಫೋನ್​ ಕವರ್ಸ್​ ಹಾಗೂ ಟೋಪಿಗಳನ್ನು ಉಚಿತ ಉಡುಗೊರೆಗಾಗಿ ಮೋದಿಗೆ ವೋಟ್​ ಮಾಡಿ ಎಂದು ಆಮಿಷವೊಡ್ಡಿದ್ದಾರೆ. ಅಲ್ಲದೆ,merchandise. narendramodi.in ಎಂಬ ವೆಬ್​ಸೈಟ್​ಗಳಲ್ಲಿ ಈ ವಸ್ತುಗಳನ್ನು ಮಾರಾಟಕ್ಕೂ ಇಟ್ಟಿದ್ದಾರೆ ಎಂದು ರಮ್ಯಾ ದೂರಿನಲ್ಲಿ ಉಲ್ಲೇಖಿಸಿದ ರಮ್ಯಾ ಬಿಜೆಪಿ ಪ್ರಚಾರಕ್ಕಾಗಿ ಬಳಸಿಕೊಂಡಿರುವ ಫೇಸ್​ಬುಕ್​ ಪೇಜ್​ಗಳನ್ನು ಹಾಗೂ ವೆಬ್​ಸೈಟ್​ಗಳ ವಿರುದ್ಧ ತಕ್ಷಣದಿಂದಲೇ ಕ್ರಮಕೈಗೊಳ್ಳಿ ಎಂದು ರಮ್ಯಾ ಅವರು ಬೇಡಿಕೆ ಇಟ್ಟಿದ್ದಾರೆ. ಪೇಜ್​ಗಳು ಹಾಗೂ ಸೈಟ್​ಗಳನ್ನು ನಿರ್ವಹಣೆ ಮಾಡಲು, ರಾಜಕೀಯ ಜಾಹಿರಾತಿಗಾಗಿ ಹಾಗೂ ಪೇಜ್​ ಹಾಗೂ ಸೈಟಗಳನ್ನು ನಿರ್ವಹಿಸಿದವರಿಗೆ ನೀಡಿದ ಸಂಬಳ ಈ ಎಲ್ಲ ಖರ್ಚುಗಳನ್ನು ಪ್ರಧಾನಿ ಮೋದಿ ಅವರ ವೈಯಕ್ತಿಕ ಚುನಾವಣಾ ವೆಚ್ಚಕ್ಕೆ ಸೇರಿಸುವಂತೆ ಆಗ್ರಹಿಸಿದ್ದಾರೆ.


Also read: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಸೈನ್ಯಕ್ಕೆ ಹೆದರಿ 4 ಉಗ್ರರ ತರಬೇತಿ ಕೇಂದ್ರಗಳನ್ನು ಮುಚ್ಚಿಸಿದ ಪಾಕ್; ಪ್ರೂಫ್ ಕೆಳುತ್ತಿರೋರಿಗೆ ಇದಕ್ಕಿಂತ ಬೇರೆ ಪ್ರೂಫ್ ಬೇಕೇ??
ರಮ್ಯಾ ದೂರನ್ನು ತಮ್ಮ ಟ್ವೀಟ್ ನಲ್ಲಿ ಶೇರ್ ಮಾಡುತ್ತಿದಂತೆ ರಮ್ಯಾಗೆ ಬಾರಿ ಟೀಕೆಗಳು ಬರುತ್ತಿವೆ. ಬರಿ ಮೋದಿಯನ್ನು ಟಾರ್ಗೆಟ್ ಮಾಡುವ ನಿನಗೆ ಅವರ ವಿರುದ್ದ ಮಾತನಾಡುವ ಯೋಗ್ಯತೆ ಇದಿಯಾ? ಮೊದಲು ನೀನು ಬಂದು ಮತದಾನ ಮಾಡು ಎಂದು ಮರು ಟ್ವೀಟ್-ಗಳು ಕೇಳಿ ಬರುತ್ತಿವೆ. ಈ ಹಿಂದೆ ಕೂಡ ರಫೆಲ್‌ ಒಪ್ಪಂದ ವಿವಾದಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಅವರನ್ನು ಟೀಕಿಸಿ ಟ್ವೀಟ್‌ ಮಾಡಿದ್ದ ರಮ್ಯಾ, ಮೋದಿಯವರ ಮೇಣದ ಪ್ರತಿಮೆ ಮೇಲೆ ಚೋರ್‌ ಎಂದು ಬರೆಯುತ್ತಿರುವ ಎಡಿಟ್‌ ಮಾಡಿದ್ದ ಫೋಟೋ ಹಾಕಿ #ChorPMChupHai ಎಂದು ಹ್ಯಾಷ್‌ ಟ್ಯಾಗ್‌ ಹಾಕಿದ್ದರು. ಈ ಪೋಸ್ಟ್‌ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸೈಯದ್‌ ರಿಜ್ವಾನ್‌ ಎಂಬುವವರು ಉತ್ತರ ಪ್ರದೇಶದ ಗೋಮತಿನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಿಜ್ವಾನ್‌ ದೂರಿನನ್ವಯ ಎಫ್‌ಐಆರ್‌ ದಾಖಲಾಗಿತ್ತು.