ನಟಿ ರಮ್ಯಾ ಪ್ರತಾಪ್ ಸಿಂಹರ ವಿರುದ್ಧ ಚುನಾವಣೆಗೆ ನಿಲ್ಲುತ್ತಾರಂತೆ; ರಮ್ಯಾ ಗೆಲ್ಲುತ್ತಾರೆಯೇ?

0
569

ಮಂಡ್ಯ ಜಿಲ್ಲೆಯ ಮಾಜಿ ಸಂಸದೆ ಹಾಗು ಸ್ಯಾಂಡಲ್-ವುಡ್ ಕ್ವೀನ್ ರಮ್ಯಾ ಈಗ ಹೊಸ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ತಮ್ಮ ಕರ್ತವ್ಯ ನಿಷ್ಠೆಯಿಂದ ರಾಷ್ಟೀಯ ನಾಯಕರ ಮನ ಗೆದ್ದಿರುವ ರಮ್ಯಾ ಮುಂಬರುವ ಕರ್ನಾಟಕ ರಾಜ್ಯ ಲೋಕಸಭಾ ಚುನಾವಣೆಗೆ ಒಂದು ವಿಶಿಷ್ಟ ರೀತಿಯಲ್ಲಿ ಸಿದ್ಧತೆ ನಡೆಸಿದ್ದಾರೆ. ಏನದು ನೀವೇ ನೋಡಿ.

ಈಗಾಗಲೇ ರಾಜ್ಯ ಹಿರಿಯ ಕಾಂಗ್ರೆಸ್ ನಾಯಕರು ಹಾಗು ತಮ್ಮ ಸ್ಟಾರ್-ಗಿರಿಯ ಸಹಾಯದಿಂದ ಮಂಡ್ಯದಿಂದ ಒಂದು ಬಾರಿ ಸಂಸದೆಯಾಗಿದ್ದ ನಟಿ ರಮ್ಯಾ, ಈ ಬಾರಿ ಒಂದು ಪ್ರಯೋಗಕ್ಕೆ ಮುಂದಾಗಿದ್ದಾರೆ, ಈ ಬಾರಿ ಕೇವಲ ಮಂಡ್ಯ ಜಿಲ್ಲೆಯಲ್ಲಿ ಮಾತ್ರವಲ್ಲದೆ ಬೇರೆ ಜಿಲ್ಲೆಯಿಂದಲು ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ.

ಈ ನಡುವೆ ಸಾಕಷ್ಟು ವಿವಾದಗಳಿಂದ ಸುದ್ದಿ ಆಗುತ್ತಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಅಖಾಡಕ್ಕೆ ಇಳಿಯಲು ಸಹ ರಮ್ಯಾ ಚಿಂತನೆ ನಡೆಸಿದ್ದಾರೆ. ಮಂಡ್ಯ ಅಥವಾ ಮೈಸೂರು ಕ್ಷೇತ್ರದಿಂದ 2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ದೃಢ ನಿರ್ಧಾರ ಕೈಗೊಂಡಿರುವ ರಮ್ಯಾ ಚುನಾವಣೆಗೆ ಈಗಿನಿಂದಲೇ ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಸಾಕ್ಷಿ. ರಮ್ಯಾ ಈಗಾಗಲೇ ಮಂಡ್ಯ ಹಾಗು ಮೈಸೂರು ಲೋಕಸಭಾ ಕ್ಷೇತ್ರದ ಸರ್ವೆ ಮಾಡಿಸಿದ್ದಾರೆ. ಮೈಸೂರು ಹಾಗೂ ಮಂಡ್ಯ ಎರಡು ಕ್ಷೇತ್ರಗಳಲ್ಲಿಯೂ ಜನರು ರಮ್ಯಾ ಪರವಾಗಿರುವುದು ಖಚಿತವಾಗಿದೆ.

ಇನ್ನು ರಮ್ಯಾ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವಿಷಯ ಕುತೂಹಲ ಮೂಡಿಸಿದೆ.