ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಹೋದ ರಮ್ಯಾಗೆ ಮಂಗಳಾರತಿ; ರಮ್ಯಾಗೆ ಮತಹಾಕಲು ಫ್ರೀ ಟಿಕೆಟ್ ಕೊಟ್ಟು ಕರೆದ ಯುವಕ..

0
777

ಬರಿ ಟ್ವೀಟ್-ನಲ್ಲಿ ಸುದ್ದಿ ಮಾಡುತ್ತಿರುವ ನಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಏನೋ ಮಾಡಲು ಹೋಗಿ ಏನೋ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಬರಿ ಮೋದಿಯವರಿಗೆ ಟಾರ್ಗೆಟ್ ಮಾಡಿ ಟ್ವೀಟ್-ನಲ್ಲಿ ಹೇಳಿಕೆ ನೀಡಿ ಪಜೀತಿಗೆ ಸಿಲುಕುತ್ತಿದ ರಮ್ಯಾ ಈಗ ಮತ್ತೊಂದು ವ್ಯಂಗ್ಯಕ್ಕೆ ಗುರಿಯಾಗಿದ್ದಾರೆ. ಅದರಲ್ಲಿ ಮಂಡ್ಯದ ಜನರಿಗೆ ರಮ್ಯಾ ಅವರ ಮೇಲೆ ಅದೇನೋ ದ್ವೇಷನೋ ಪ್ರಿತಿನೋ ಗೊತ್ತಿಲ್ಲ ರಮ್ಯಾ ಯಾವುದೇ ವಿಷಯ ಹೇಳಿದರು ಅದಕ್ಕೆ ಸರಿಯಾಗಿಯೇ ಉತ್ತರ ನೀಡಿ ಮುಖಕ್ಕೆ ಹೊಡೆದಂತೆ ಮಾತನಾಡುತ್ತಾರೆ.
ಹೌದು ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ, ‘ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರು ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇರಿಸಿಕೊಳ್ಳಿ, ಟೈಂ ಹೋಗ್ತಿದೆ. ಭವಿಷ್ಯ ನಿಮ್ಮದಾಗಿದೆ’ ಅಂತಾ ಟ್ವೀಟ್ ಮಾಡಿದ್ರು. ಇದಕ್ಕೆ ರಿಪ್ಲೈ ಮಾಡಿದ ಟ್ವೀಟ್-ಗರು ಅವಕಾಶ ಸಿಕ್ಕಾಗ ತಾವು ಮತದಾನ ಮಾಡದೇ, ಇದೀಗ ಟ್ವಿಟರ್ ನಲ್ಲಿ ಮತದಾನದ ಜಾಗೃತಿ ಮೂಡಿಸಲು ಹೊರಟಿರುವ ನೀವು ಬೇರೆಯವರಿಗೆ ವೋಟು ಮಾಡಿ ಅಂತಾ ಹೇಳೋ ಹಕ್ಕು ನಿಮಗಿಲ್ಲ. ಮೊದಲು ನೀವು ಹೋಗಿ ವೋಟ್ ಮಾಡಿ ಎಂದು ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದು ಇಷ್ಟಕ್ಕೆ ನಿಲ್ಲದೆ. ಇನ್ನೂ ಕೆಲವರು ಕಮೆಂಟ್ ಮಾಡಿ ಹಿಂದೆ ನಡೆದ ಚುನಾವಣೆಯಲ್ಲಿ ಮತದಾನ ಮಾಡದೆ ತಪ್ಪಿಸಿಕೊಂಡ ರಮ್ಯಾರಿಂದ ಮತದಾನದ ಪಾಠ ಅಂತಾ ವ್ಯಂಗ್ಯವಾಡಿದ್ದಾರೆ. ಮತ್ತೊಂದಿಷ್ಟು ಜನ ದೆಹಲಿ ಬಿಟ್ಟು ಬಂದು ಮೊದಲು ವೋಟ್‍ ಮಾಡ್ರಿ, ಆಮೇಲೆ ಬೇರೆಯವರಿಗೆ ಉಪದೇಶ ಮಾಡಿ ಎಂದು ಟ್ವೀಟ್ ನಲ್ಲಿ ಸಹಜವಾಗಿ ಉತ್ತರಿಸಿದ್ದಾರೆ. ಇದೆಲ್ಲ ಮುಗಿದ ಮೇಲೋ ರಮ್ಯಾ ಮಾತಿನ ಚಕಮಕಿ ಮುಂದುವರೆದು. ವ್ಯಕ್ತಿಯೊಬ್ಬರು ನಾನೇ ನಿಮಗೆ ದೆಹಲಿ ಟು ಮಂಡ್ಯ ನಾನೇ ನಿಮಗೆ ಫ್ಲೈಟ್ ಟಿಕೆಟ್ ಹಾಗೂ ಬಸ್ ಟಿಕೆಟ್ ಕಳುಹಿಸುತ್ತೀನಿ. ಆದರೆ ವೋಟು ಹಾಕುವುದನ್ನು ಮಿಸ್ ಮಾಡಬೇಡಿ ಎಂದು ಪತ್ರ ಬರೆದಿದ್ದಾರೆ.

ರಮ್ಯಾಗೆ ಟಿಕೆಟ್?

ಬೆಂಗಳೂರಿನ ನಿವಾಸಿ ರಾಘವೇಂದ್ರ ಅವರು ರಮ್ಯಾವರಿಗೆ ಪತ್ರ ಬರೆದು ಈಸಲನಾದರೂ ವೋಟು ಮಾಡಮ್ಮ ತಾಯೇ. ಆಮೇಲೆ ಜನರಿಗೆ ಉಪದೇಶ ಮಾಡಿ. ಏಕೆಂದರೆ ಮಂಡ್ಯ ಕ್ಷೇತ್ರದ ಮತದಾರರಾಗಿರುವ ನೀವು ಈ ಹಿಂದೆ ವಿಧಾನಸಭಾ ಹಾಗೂ ಲೋಕಸಭಾ ಉಪಚುನಾವಣೆಗೆ ಮತದಾನ ಮಾಡಿಲ್ಲ. ತಾವು ಒಂದು ಪಕ್ಷದ ಉನ್ನತ ಹುದ್ದೆಯನ್ನು ನಿರ್ವಹಿಸುತ್ತಿದ್ದೀರಿ. ಆದರೆ ನೀವೇ ಮತದಾನವನ್ನು ಮರೆತಿರುವುದು ಶೋಚನೀಯವಾಗಿದೆ. ಆದರೂ ನೀವು ಸಾಮಾಜಿಕ ಜಾಲತಾಣಗಲ್ಲಿ ಹೊಸದಾಗಿ ಮತದಾನ ಮಾಡುವರರಿಗೆ ಬೇಗನೇ ನೊಂದಣಿ ಮಾಡಿ ಎಂದು ಸಂದೇಶವನ್ನು ಕಳುಹಿಸಿದ್ದೀರಿ. ಇದು ಹಾಸ್ಯಸ್ಪದವಾಗಿದ್ದು.

ಈಗಾಗಲೇ ಜನರು ನಿಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನಾದರು ನೀವು ಮತ ಚಲಾಯಿಸಿ ರಾಜಕೀಯ ನೈತಿಕತೆಯನ್ನು ಉಳಿಸಿಕೊಳ್ಳಿ. ಅದಕ್ಕಾಗಿ ನಾನು ನಿಮಗೆ ಪ್ರಯಾಣ ದರವನ್ನು ಉಚಿತವಾಗಿ ನೀಡಲು ನಾನು ಸಿದ್ಧ ಎಂದು ಬರೆದಿದ್ದಾರೆ. ಈ ಹಿಂದೆವೂ ಅಂಬರಿಷ್ ಅವರು ನಿಧಾನವಾದ ಸಮಯದಲ್ಲಿ ಬರದ ಕಾರಣಕ್ಕೆ ರಮ್ಯಾಗೆ ಮಂಡ್ಯದಿಂದ ಬಹಿಷ್ಕಾರ ಹಾಕಬೇಕು ಎಂದು ವಿರೋಧಗಳು ಹೇಳಿ ಬಂದಿದವು. ಹಾಗೆಯೇ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿದ್ದು ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಂಡ್ಯಕ್ಕೆ ಬಂದಿರಲಿಲ್ಲ. ಇದಾದ ಬಳಿಕ ಮಂಡ್ಯ ಲೋಕಸಭಾ ಉಪಚುನಾವಣೆಯ ಸಮಯದಲ್ಲೂ ರಮ್ಯಾ ಆಗಮಿಸಿರಲಿಲ್ಲ ಎಂದು ಮಂಡ್ಯದ ಜನರು ರಮ್ಯಾ ವಿರುದ್ದ ತಿರುಗಿ ನಿಂತಿದ್ದಾರೆ.

Also read: ಪ್ರಧಾನಿ ಮೋದಿಯವರಿಗೆ ಮತ್ತೆ ರಮ್ಯಾ ಟ್ವೀಟ್; ಪಾಕಿಗೆ ಹೋಗಿ ಬಿರಿಯಾನಿ ತಿಂದು ಬಂದ ನಿಮ್ಮನ್ನು ನಂಬುವುದು ಹೇಗೆ..