AICC-IT ಸೆಲ್ ನಲ್ಲಿ ರಮ್ಯಾ ಮಾಡಿದ ಕೆಲಸಕ್ಕೆ ರಾಹುಲ್ ಗಾಂಧಿ ಫುಲ್ ಖುಷ್, ವಿರೋಧಿಗಳಿಗೆ ಪಾಠಕಲಿಸಿದ ಸ್ಯಾಂಡಲ್-ವುಡ್ ಕ್ವೀನ್..!!

0
1128

ಮಂಡ್ಯ ಜಿಲ್ಲೆ ಮಾಜಿ ಸಂಸದೆ ಹಾಗು ಸ್ಯಾಂಡಲ್-ವುಡ್ ಕ್ವೀನ್ ರಮ್ಯಾ ಈಗ ದೆಹಲಿಯಲ್ಲಿಯು ತುಂಬಾನೆ ಫೇಮಸ್ ಆಗಿದ್ದಾರೆ. ಇವರ ಕರ್ತವ್ಯ ನಿಷ್ಠೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತುಂಬ ಹೊಗಳಿದ್ದಾರೆ. ಅಷ್ಟಕ್ಕೂ ರಮ್ಯಾ ಮಾಡಿದ ಕೆಲಸವಾದರು ಏನು ಅಂತೀರ, ನೀವೇ ನೋಡಿ.

ಪಕ್ಷ ರಮ್ಯಾ ಅವರಿಗೆ ಐಟಿ ಸೆಲ್ ಮುಖ್ಯಸ್ಥೆಯ ಸ್ಥಾನವನ್ನು ನೀಡಿತ್ತು. ಎಐಸಿಸಿ ಐಟಿ ಸೆಲ್ ನ ಮುಖ್ಯಸ್ಥೆಯಾದ ನಂತರ ರಾಜಕೀಯ ವಿರೋಧಿಗಳಿಗೆ ಟ್ವಿಟ್ಟರ್, ಫೇಸ್-ಬುಕ್ ನಲ್ಲೇ ಉತ್ತರ ನೀಡುತ್ತಿದ್ದಾಳೆ. ಅಲ್ಲದೆ ಐಟಿ ಸೆಲ್ ಹೆಸರಿನಲ್ಲಿ ರಾಹುಲ್ ಗಾಂಧಿ ಕಚೇರಿಯಲ್ಲಿ ದುರುಪಯೋಗವಾಗುತ್ತಿದ್ದ ಕೋಟಿ ಕೋಟಿ ಹಣದ ಹಗರಣವನ್ನು ಪತ್ತೆಹಚ್ಚಿ ತಡೆದಿದ್ದಾಳೆ.

ರಮ್ಯಾ ಐಟಿ ಸೆಲ್ ನ ಜವಾಬ್ದಾರಿ ಹೊತ್ತಾಗಿನಿಂದ ತುಂಬ ದುಬಾರಿ ಖರ್ಚಿನಲ್ಲಿ ನಡೆಸುತ್ತಿದ್ದ ಐಟಿ ಸೆಲ್ ಈಗ ಸುಲಭವಾಗಿ ಯಾವುದೇ ಹಗರಣ, ಅವ್ಯವಹಾರವಿಲ್ಲದೆ ಕಡಿಮೆ ಖರ್ಚಿನಲ್ಲಿ ನಡೆಯತೊಡಗಿದೆಯಂತೆ, ಇವರ ಈ ಕಾರ್ಯ ವೈಖರಿಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ತುಂಬ ಖುಷಿಯಾಗಿದ್ದರಂತೆ.

ರಮ್ಯ ಇಷ್ಟು ಸ್ವಲ್ಪ ಸಮಯದಲ್ಲಿ ಈ ಮಟ್ಟಿಗೆ ಬೆಳೆಯುವುದನ್ನು ಕಂಡು ಆಗದ ಪಕ್ಷದ ವಿರೋಧಿಗಳು ಕಳೆದ 4 ತಿಂಗಳಿನಲ್ಲಿ 3 ಬಾರಿ ರಮ್ಯಾ ವಿರುದ್ಧ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ. ಆದರೆ ಎಐಸಿಸಿ ಐಟಿ ಸೆಲ್‍ ಗೆ ಅವರು ನೀಡುತ್ತಿರುವ ರಮ್ಯಾ ಬಗ್ಗೆ ರಾಹುಲ್ ಗಾಂಧಿ ಸಮರ್ಥಿಸಿಕೊಂಡು ಬರುತ್ತಿದ್ದಾರಂತೆ.

ಈ ಮೂಲಕ ತಮ್ಮ ರಾಜಕೀಯ ವಿರೋಧಿಗಳು, ಪಕ್ಷದಲ್ಲಿರುವ ರಮ್ಯಾ ವಿರೋಧಿ ಹಿರಿಯ ಕಾಂಗೆಸ್ಸಿಗರಿಗೆ, ಎಐಸಿಸಿ ಐಟಿ ಸೆಲ್ ನ ಸಿಬ್ಬಂದಿಗಳು ಹಾಗೂ ಕಚೇರಿಯ ನಾಯಕರಿಗೆ ಒಟ್ಟಿಗೆ ಬಿಸಿ ಮುಟ್ಟಿಸಿದ್ದಾರೆ. ಇನ್ನು ಇವರ ಖಡಕ್ ನಿರ್ಧಾರ ಸಹಿಸಲಾಗದೆ ಸಿಬ್ಬಂದಿ ವಿಲಿ-ವಿಲಿ ಒದ್ದಾಡುತ್ತಿದ್ದಾರಂತೆ, ಇನ್ನು ಪಕ್ಷದ ಅಧ್ಯಕ್ಷರೇ ಇವರ ಜೊತೆ ನಿಂತಿರುವಾಗ ಯಾರು ತಾನೆ ಏನು ಮಾಡಲು ಸಾಧ್ಯ ಅಲ್ಲವೇ.