ಕಾಂಗ್ರೇಸ್ ನಲ್ಲಿ ಸಿಡಿದೆದ್ದ ರಮ್ಯಾ ತಾಯಿ ರಂಜಿತಾ. ಅಂಬರೀಶ್ ವಿರುದ್ಧ ಸ್ಪರ್ಧಿಸ್ತಾರಂತೆ.. ಯಾವ ಪಕ್ಷ ಗೊತ್ತಾ?? ಇಲ್ಲಿದೆ ನೋಡಿ

0
816

ಮಾಜಿ ಸಂಸದೆ ರಮ್ಯಾ ಅವರ ತಾಯಿ ರಂಜಿತಾ ಕಾಂಗ್ರೆಸ್ ವಿರುದ್ಧವೇ ಸಿಡಿದೆದ್ದಿದ್ದಾರೆ.. ಕಾಂಗ್ರೆಸ್ನಿಂದ ತನಗೆ ಅನ್ಯಾಯವಾಗಿದೆ.. ಹೀಗಾಗಿ ನಂಬಿರುವ ಮಂಡ್ಯ ಕ್ಷೇತ್ರದ ಜನರ ಋಣ ತೀರಿಸುವುದಕ್ಕಾಗಿ 2018 ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ರಮ್ಯಾ ರವರ ತಾಯಿ ರಂಜಿತಾ ರವರು ಹೇಳಿಕೊಂಡಿದ್ದಾರೆ..

ಪಕ್ಷದಿಂದ ಆಗಿರುವ ನೋವನ್ನು ತೋಡಿಕೊಂಡಿರುವ ರಂಜಿತಾ ರವರು ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇವೆ ಆದರೆ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದಿದ್ದಾರೆ..

ನನ್ನ ಮಗಳು ರಮ್ಯಾ ಎದುರಿಸಿದ ಮೊದಲ ಚುನಾವಣೆಯಲ್ಲೇ ಜಿಲ್ಲೆಯ ಜನರು ಅಭೂತಪೂರ್ವ ಬೆಂಬಲ ನೀಡಿ ಗೆಲ್ಲಿಸಿದ್ದರು..

ಕಡಿಮೆ ಅವಧಿಯಲ್ಲಿಯೇ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ ಜನರ ವಿಶ್ವಾಸ ಗಳಿಸಿದ್ದಳು.. ಈ ಜನರ ಋಣ ನಮ್ಮ ಮೇಲಿದೆ.. ಅದನ್ನು ತೀರಿಸಲು ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ದೊರಕುತ್ತಿಲ್ಲ.. ಜೊತೆಗೆ ರಮ್ಯಾರವರಿಗೂ ಕೂಡ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡುತ್ತಿಲ್ಲ..

ರಾಜ್ಯ ರಾಜಕಾರಣದಲ್ಲೂ ರಮ್ಯಾರನ್ನು ಕಡೆಗಣಿಸಲಾಗಿದೆ.. ಇದೆಲ್ಲಾ ಮನಸ್ಸಿಗೆ ನೋವುಂಟು ಮಾಡಿದೆ.. ಈ ನೋವೂ ರಮ್ಯಾಗೂ ಇದೆ.. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲು ಚಿಂತಿಸಿದ್ದೇನೆ ಎಂದಿದ್ದಾರೆ..

ರಮ್ಯಾ ಜಿಲ್ಲೆಗೆ ನೀಡಿರುವ ಕೊಡುಗೆಯನ್ನೇ ಶ್ರೀರಕ್ಷೆಯನ್ನಾಗಿಸಿಕೊಂಡು ಮತದಾರರ ಬಳಿಗೆ ಹೋಗಲು ನಿರ್ಧರಿಸಿದ್ದೇನೆ ಎಂದಿದ್ದಾರೆ..

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರಾವಳಿ ಪ್ರವಾಸ ಆರಂಭಗೊಂಡ ದಿನವೇ ಬಂಡಾಯದ ಧ್ವನಿ ಎತ್ತಿರುವ ರಂಜಿತಾ ರವರನ್ನು ನೋಡಿದಾಗ ತಾಯಿ ಮತ್ತು ಮಗಳ ನಡುವೆ ಮನಸ್ತಾಪ ಇದೆಯಾ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಎದ್ದಿದೆ..

ಈಗ ಧ್ವನಿ ಎತ್ತಿದರೆ ಈ ವಿಚಾರ ರಾಹುಲ್ ಗಾಂಧಿಯವರಿಗೆ ತಿಳಿಯಬಹುದು ಎನ್ನುವ ಕಾರಣಕ್ಕೆ ತನ್ನ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನುವ ಮತ್ತೊಂದು ವಿಶ್ಲೇಷಣೆ ಶುರುವಾಗಿದೆ..