ಮೊದಲ ಸ್ವಾತಂತ್ರ್ಯ ಹೋರಾಟ ವೀರಮಹಿಳೆ ರಾಣಿ ಅಬ್ಬಕ್ಕ

0
804

ರಾಣಿ ಅಬ್ಬಕ್ಕ ದಕ್ಷಿಣ ಭಾರತದಲ್ಲಿನ ತುಳುನಾಡನ್ನು ಆಳಿದ ಮಹಿಳೆ. ಆಕೆಯನ್ನು ಅಬ್ಬಕ್ಕ ಮಹಾ ದೇವಿ ಎಂತಲೂ ಕರೆಯುತ್ತಿದ್ದರು. ಚೌತ ರಾಜ್ಯ ವಂಶಕ್ಕೆ ಸೇರಿದ ರಾಣಿ ಅಬ್ಬಕ್ಕ 16ನೇ ಶತಮಾನದಲ್ಲಿ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಂದಿಗೆ ಧೈರ್ಯ, ಶೌರ್ಯ, ಸಾಹಸದಿಂದ ಹೋರಾಡಿದ್ದಳು. ಉಲ್ಲಾಳ ಕೋಟೆಯನ್ನು ವಶಪಡಿಸಿಕೊಳ್ಳಲು ನಾಲ್ಕು ದಶಕಗಳ ಪೋರ್ಚುಗೀಸರ ಪ್ರಯತ್ನವನ್ನು ಮಣ್ಣು ಮುಕ್ಕಿಸಿದಳು ರಾಣಿಅಬ್ಬಕ್ಕ. ಆಕೆಯ ಈ ಧೈರ್ಯಕ್ಕೆ ಆಕೆಯನ್ನು ಅಭಯ (ಭಯವಿಲ್ಲದ) ರಾಣಿ ಅಂತ ಕರೆಯಲಾರಂಭಿಸಿದರು. ಕೆಲವು ಐತಿಹಾಸಿಕಕಾರರು ಆಕೆಯನ್ನು ಭಾರತ ದೇಶದಲ್ಲಿ ಸಾಮ್ರಾಜ್ಯವಾದ ಶಕ್ತಿಗಳ ವಿರುದ್ಧ ಹೋರಾಡಿದ ಪ್ರಥಮ ಮಹಿಳೆಯಾಗಿ ಗುರ್ತಿಸುತ್ತಿದ್ದಾರೆ. ಆಕೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮೊದಲ ದಿಟ್ಟ ಮಹಿಳೆ ಎಂತಲೂ ವರ್ಣಿಸಿದ್ದಾರೆ.

ಅಬ್ಬಕ್ಕ ರಾಣಿಯ ವೇಷಧಾರಣೆ ಸಾಮಾನ್ಯ ಮಹಿಳೆಯಂತಿರುತ್ತಿತ್ತಂತೆ. ಪ್ರಜೆಗಳ ಸಮಸ್ಯೆಗಳನ್ನು ಪರಿಷ್ಕರಿಸಲು ರಾತ್ರಿ ಹಗಲೆನ್ನದೇ ಶ್ರಮಪಟ್ಟಿದ್ದಳೆಂದು ಸ್ಥಳೀಯರ ಕಥನಾಕಗಳಿಂದ ತಿಳಿಯುತ್ತದೆ. ಪತಿ ಪೋರ್ಚುಗೀಸರೊಂದಿಗೆ ಕೈ ಬೆರೆಸಿದ್ದರೂ, ಅವರನ್ನೆಲ್ಲಾ ಎದುರಿಸಿ ಹೋರಾಡಿದ ಸಾಹಸಿ ಅಬ್ಬಕ್ಕ. ಕೊನೆಗೆ ಯುದ್ಧದಲ್ಲಿ ಹೋರಾಡಿ ವೀರ ಮರಣವನ್ನಪ್ಪಿದ ಅಮರಳಾದಳು. ಅಬ್ಬಕ್ಕನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರೆಂತಲೂ ಅವರೂ ಆಕೆಯ ಹೆಸರಿನಲ್ಲೇ ವ್ಯವಹಾರಗಳನ್ನು ಮಾಡುತ್ತಿದ್ದರೆಂದು ಮಾಹಿತಿ ತಿಳಿದು ಬಂದಿದೆ.

ಹಲವಾರು ವರ್ಷಗಳಿಂದಲೂ ರಾಣಿ ಅಬ್ಬಕ್ಕಳ ಚರಿತ್ರೆ. ಮಹಿಮೆಯನ್ನು ಕರ್ನಾಟಕದಲ್ಲಿ ಯಕ್ಷಗಾನ, ನಾಟಕ, ಬಯಲಾಟ, ಕೇಳಿಕೆ, ಲಾವಣಿ ಮುಂತಾದ ಸಾಂಸ್ಕೃತಿಕ ಜಾನಪದ ನೆಲಗಟ್ಟಿನಲ್ಲಿ ಹಾಡಿ ನಾಡಿಗೆ ಪ್ರಚಾರ ಮಾಡುತ್ತಿದ್ದಾರೆ. ಪ್ರತಿವರ್ಷವೂ ಉಲ್ಲಾಳ ಪ್ರದೇಶದಲ್ಲಿ ರಾಣಿಅಬ್ಬಕ್ಕಳ ಉತ್ಸವವನ್ನು ಆಚರಿಸುತ್ತಾರೆ. ಆ ಸಂಧರ್ಭದಲ್ಲಿ ಅವರ ಸ್ಮರಣಾರ್ಥ ಒಬ್ಬ ಮಹಿಳೆಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಭಾರತೀಯ ಅಂಚೆ ಇಲಾಖೆ 2003 ಜನವರಿ 15ರಂದು ರಾಣಿ ಅಬ್ಬಕ್ಕನ ಹೆಸರಿನಲ್ಲಿ ಒಂದು ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿತು. ಉಲ್ಲಾಳ ಹಾಗೂ ಬೆಂಗಳೂರಿನಲ್ಲಿ ಆಕೆಯ ಕಂಚಿನ ಪ್ರತಿಮೆಗಳೂ ಇವೆ.