ಬಿ.ಜೆ.ಪಿ. ಆಡಳಿತವಿರುವ ಮಧ್ಯಪ್ರದೇಶದಲ್ಲಿ ಬಾಲಕಿಯ ಮೇಲೆ ದೇವಾಲಯದ ಪ್ರಾಂಗಣದಲ್ಲೇ ಅರ್ಚಕರಿಂದ ಅತ್ಯಾಚಾರ..!

0
383

5 ವರ್ಷದ ಬಾಲಕಿಯ ಮೇಲೆ ಅರ್ಚಕರಿಬ್ಬರು ಅತ್ಯಾಚಾರ ವೆಸಗಿರುವ ಅಮಾನುಷ ಘಟನೆ ಮಧ್ಯಪ್ರದೇಶದ ದಾಟಿಯಾ ಜೆಲ್ಲೆಯಲ್ಲಿ ನಡೆದಿದೆ. ಬಾಲಕಿಗೆ ಅರ್ಚಕರು ಸಿಹಿ ತಿಂಡಿಯ ಆಮಿಷ ನೀಡಿ ದೇವಾಲಯದ ಪ್ರಾಂಗಣಕ್ಕೆ ಕರೆದೊಯ್ದಿದ್ದಾರೆ. ನಂತರ ಗ್ಯಾಂಗ್‌ ರೇಪ್‌ ಎಸಗಿದ್ದಾರೆ. ಬಡ ರೈತನ ಮಗಳಾಗಿರುವ ಬಾಲಕಿಯನ್ನು ಇಬ್ಬರು ದೇವಾಲಯಕ್ಕೆ ಕರೆದೊಯ್ದು ಈ ಹೇಯ ಕೃತ್ಯ ಎಸಗಿದ್ದಾರೆ. ಬಳಿಕ ಮನೆಯ ಬಳಿ ಬಿಟ್ಟು ಈ ವಿಚಾರ ಯಾರಿಗೂ ಹೇಳಬೇಡ ಎಂದು ಬೆದರಕೆ ಹಾಕಿದ್ದಾರೆ. ಆದರೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಕೆಯ ತಾಯಿ ವಿಚಾರಿಸಿದ್ದಾರೆ. ಆದರೆ ಮೊದಮೊದಲು ಬಾಲಕಿ ಏನನ್ನೂ ಹೇಳಕೊಂಡಿಲ್ಲ.. ನೋವಿನ ತೀವ್ರತೆ ಹೆಚ್ಚಾದಾಗ ಬಾಲಕಿ ತನ್ನ ಪೋಷಕರ ಬಳಿ ಕೃತ್ಯ ನಡೆದಿರುವುದರ ಬಗ್ಗೆ ಹೇಳಿದ್ದಾಳೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Also read: ನಿರುದ್ಯೋಗಿಗಳಿಗೆ ಹಾಗು ಪರ್ಮನೆಂಟ್ ಕೆಲಸ ಬಿಟ್ಟು ಜೀವನದಲ್ಲಿ ಸ್ವತಂತ್ರವಾಗಿ ಕೆಲಸ ಮಾಡಿ ಕೈ ತುಂಬಾ ಸಂಬಳ ಬೇಕೆಂದಿರುವವರು ತಪ್ಪದೇ ಇದನ್ನು ಓದಿ!!

ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತು. ನಂತರ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯದ ಕೃತ್ಯ ನಡೆದಿರುವುದು ತಿಳಿಯಿತು. ಬಳಿಕ ಪೋಷಕರು ನೀಡಿದ ದೂರಿನ ಮೇರೆಗೆ ರಾಜು ಮತ್ತು ಬಟೋಲಿ ಅವರನ್ನು ಬಂಧಿಸಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್‍ಗಳ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳಾದ 55 ವರ್ಷದ ರಾಜು ಪಂಡಿತ್‌ ಮತ್ತು 45 ವರ್ಷದ ಬಾತೋಲಿ ಪ್ರಜಾಪತಿ ಎಂಬ ಇಬ್ಬರನ್ನು ಅರ್ಚಕರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಬೇರೆ ಬಾಲಕಿಯರ ಮೇಲೂ ಲೈಂಗಿಕ ದೌರ್ಜನ್ಯ ಎಸಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ಸತ್ಯ ವಿಚಾರಣೆಯ ಬಳಿಕವಷ್ಟೇ ಹೊರ ಬರಬೇಕಿದೆ.

Also read: ಪುರುಷರೇ ಎಚ್ಚರ ಪ್ರೀತಿ ನಾಟಕವಾಡಿ ಮನೆಗೆ ಕರೆಸಿಕೊಂಡು ಸುಲಿಗೆ ಮಾಡುವ ಮಹಿಳೆಯರು ಹೆಚ್ಚಾಗಿದ್ದಾರೆ. ಇಂತಹ ಪ್ರಕರಣಗಳು ಹೊಸ ಹೊಸ ಸಿನಿಮಯ ರೀತಿಯಲ್ಲಿ ನಡೆಯಿತ್ತಿವೆ ಎಚ್ಚರ.

12 ವರ್ಷಗಳ ಕೆಳ ವಯೋಮಾನದ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಮಂದಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಮಸೂದೆಯನ್ನು 2017ರ ಡಿಸೆಂಬರ್‍ನಲ್ಲೇ ಪ್ರಥಮ ಬಾರಿಗೆ ಮಧ್ಯಪ್ರದೇಶದಲ್ಲಿ ಜಾರಿ ತರಲಾಗಿದೆ. 2018 ಏಪ್ರಿಲ್’’ನಲ್ಲಿ ಮಧ್ಯಪ್ರದೇಶದ ಇಂದೋರ್‍ನ ರಾಜವಾಡದಲ್ಲಿ ನಾಲ್ಕು ತಿಂಗಳ ಮಗುವನ್ನು ಯುವಕನೊಬ್ಬ ಅಪಹರಿಸಿ ಕಟ್ಟಡವೊಂದರಲ್ಲಿ ಅತ್ಯಾಚಾರ ಎಸಗಿ ಕೊಂದು ಹಾಕಿದ್ದ. ಈ ಬರ್ಬರ ಕೃತ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

Also read: ಡ್ರೈವಿಂಗ್ ಲೈಸೆನ್ಸ್ ಗೆ ಇನ್ಮೇಲಿಂದ ಲಂಚ ಕೊಡುವ ಅವಶ್ಯಕತೆ ಇಲ್ಲ, online ನಲ್ಲೆ ಅರ್ಜಿ ಸಲ್ಲಿಸಿ!!

ರಾಜ್ಯ ಮಹಿಳಾ ಸೆಲ್ ದಾಖಲೆಗಳ ಪ್ರಕಾರ, 1,894 ಅತ್ಯಾಚಾರಗಳು ಮತ್ತು 4,069 ಅತ್ಯಾಚಾರ ಪ್ರಕರಣಗಳು 2018 ರ ಮೊದಲ ಐದು ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ದಾಖಲಾಗಿವೆ. ಇದರಂತೆ ಮದ್ಯಪ್ರದೇಶದಲ್ಲಿ ಪ್ರತಿ ದಿನ 13 ಅತ್ಯಾಚಾರಗಳು ಮತ್ತು 27 ಲೈಂಗಿಕ ಕಿರುಕುಳದ ಘಟನೆಗಳನ್ನು ನಡೆಯುತ್ತವೆ ಎಂದು ಹೇಳಲಾಗಿದೆ.