ರಜರಥ ಚಿತ್ರದ ವಿವಾದ ಪ್ರತಿಯೊಬ್ಬ ಯುವ ಸಿನೆಮಾ ನಿರ್ದೇಶಕನಿಗೆ ಪಾಠ ಕಲಿಸಿದೆ: ಚಿತ್ರ ಓಡದೆ ಇರೋದಕ್ಕೆ ಕಾರಣ ನಿಮ್ಮ ಚಿತ್ರಕಥೆ, ಪ್ರೇಕ್ಷಕನಲ್ಲ!!

0
619

ಸಿನಿಮ ಪ್ರೇಕ್ಷಕರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಕ್ಷಮೆ ಯಾಚಿಸಿದ ಭಂಡಾರಿ ಸಹೋದರರು….

ಸಿನಿಮಾ ಪ್ರೇಕ್ಷಕರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡುವುದಕ್ಕೆ ಸಂಬಂಧಿಸಿದಂತೆ ‘ರಾಜರಥ’ ಸಿನಿಮಾ ನಿರ್ದೇಶಕ ಅನುಪ್ ಭಂಡಾರಿ, ಕ್ಷೆಮೆ ಕೋರಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅನೂಪ್ ಭಂಡಾರಿ, ನಮ್ಮಿಂದ ಆಗಿರುವುದು ದೊಡ್ಡ ತಪ್ಪು. ಕನ್ನಡಿಗರಿಗೆ ಬೇಸರ ಉಂಟುಮಾಡುವುದು ಖಂಡಿತವಾಗಿಯೂ ನಮ್ಮ ಉದ್ದೇಶ ವಾಗಿರಲಿಲ್ಲ’ ಎಂದು ಹೇಳಿದರು. ಹೀಗೆಲ್ಲಾ ಕನ್ನಡ ಪ್ರೇಕ್ಷಕರನ್ನು ಯಾವಾತ್ತು ಅವಮಾನಿಸಿರಲಿಲ್ಲ ಎಂದು ಹೇಳಿದ್ದರೆ.

ಕನ್ನಡ ಚಿತ್ರರಂಗದ ಎಂಟು ದಶಕ ಇತಿಹಾಸದಲೇ ಇದೊಂದು ಕಪ್ಪು ಚುಕ್ಕೆ ಇದ್ದಂತೆ. ಡಾ.ರಾಜ್ ಕುಮಾರ್ ರವರು ಸದಾ “ಅಭಿಮಾನಿಗಳೆ ನನ್ನ ದೇವರು” ಎಂದು ಹೇಳಿದವರು. ಇನ್ನು ಡಾ. ವಿಷ್ಣುವಾಧನ್-ರವರು, ಅಭಿಮಾನಿಗಳೇ ನನ್ನ ಜೀವ ಎಂದು ಹೇಳುತ್ತಿದ್ದರು, ಶಂಕರ್ ನಾಗ್ ರವರು ಕೆಲವೆ ದಿನಗಳು ಸಿನಿಮ ರಂಗದಲ್ಲಿ ಇದ್ದರೂ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಚಿರಸ್ಮರಣೆಯಾಗಿದ್ದಾರೆ, ಅವರೂ ಕೂಡ ಅಭಿಮಾನಿಗಳಿಗೆ ತಮ್ಮ ಜೀವನ ಕಲೆಯನ್ನು ಸಮರ್ಪಿಸಿದ್ದರು. ರವಿಚಂದ್ರನ್, ಅಂಬರೀಶ್, ಶಿವರಾಜ್ ಕುಮಾರ್, ಇನ್ನು ಹಲವಾರು ಉನ್ನತ ನಟರು ಇಂದೂ ಕೂಡ ನಮ್ಮ ಚಿತ್ರರಂಗದ ಮೇಲೆ ಅಭಿಮಾನ ತೋರಿಸುವುದ ಜೊತೆಗೆ ಗೌರವವನ್ನು ವ್ಯಕ್ತಪಡಿಸಿದರೆ, ಆದರೆ ಹೀಗೆಲ್ಲ ಪ್ರೇಕ್ಷಕರನ್ನು ಅವಮಾನಪಡಿಸಿರಲಿಲ್ಲ.

ಕನ್ನಡ ಚಿತ್ರರಂಗ ದೇಶಕ್ಕೆ ಮಾದರಿ ನಟರನ್ನು ಕೊಟ್ಟಿದೆ.ಇಂತಹ ಚಿತ್ರರಂಗದಲ್ಲಿ ಈಗಷ್ಟೇ ಬೆಳೆಯುತ್ತಿರುವ ಅನೂಪ್ ಮತ್ತು ನಿರೂಪ್,ಕನ್ನಡಿಗರನ್ನು ಬೈಯುವುದು ಎಷ್ಟು ಸರಿ. ಸಂದರ್ಶನದಲ್ಲಿ ಮಾತನಾಡುವಾಗ ಸ್ವಲ್ಪ ವಿವೇಚನೆ, ಸಾಮಾನ್ಯ ಜ್ಞಾನ ಇರಬೇಕು. ಯಾರು ಎಷ್ಟೇ ಪ್ರಚೋದನೆ ಮಾಡಿದರೂ,ಮೈಮರೆತು ಮಾತನಾಡುವುದು ತಪ್ಪು.

ಎಷ್ಟೋ ಕಲಾವಿದರು ಹಲವಾರು ಚಿತ್ರಗಳನ್ನು ಮಾಡಿ ಪ್ರೇಕ್ಷಕರಿಗೆ ನೀಡಿದ್ದಾರೆ, ಅದರಲ್ಲಿ ಕೆಲವು ಹಿಟ್ ಆಗಿದ್ದು, ಇನ್ನು ಕೆಲವು ಸೋಲನ್ನು ಅನುಭವಿಸಿವೆ, ಆದರೆ ಯಾವ ನಟರು ಕೂಡ ಪ್ರೇಕ್ಷಕರನ್ನು ಅವಮಾನಿಸಲು ಮುಂದಾಗಿಲ್ಲ. ಎರಡೇ ಚಿತ್ರಗಳನ್ನು ಮಾಡಿರುವ ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ಸಹೋದರರು ಕನ್ನಡಿಗರನ್ನು ಬೈಯುವುದು ಯಾವಮಟದಲ್ಲಿ ಸರಿ? ‘ರಂಗಿತರಂಗ’ ಚಿತ್ರವನ್ನು ನೋಡಿ ಗೆಲ್ಲಿಸಿದು, ಇದೆ ಕನ್ನಡಿಗರೇ ತಾನೇ. ಆಗ ಕನ್ನಡಿಗರ ಮೇಲಿದ್ದಂತಹ ಗೌರವ ಮತ್ತು ಪ್ರೀತಿ, ಈಗ ‘ರಾಜರಥ’ ಸೋತ ಬಳಿಕ ಎಲ್ಲಿ ಹೋಯ್ತು? ಚಿತ್ರ ಚೆನ್ನಾಗಿದ್ದರೆ ಪ್ರೇಕ್ಷಕ ಎಂದೂ ಕೈಬಿಡಲ್ಲ, ಚಿತ್ರ ಸೋತಾಗ ಅವರ ಚಿತ್ರ ಕಥೆ, ನಟರ ಅಭಿನಯದಲ್ಲಾದ ಲೋಪಗಳನ್ನು ಹುಡುಕುವ ಬದಲು ಪ್ರೇಕ್ಷಕನನ್ನು ದೂರುವುದು ಸರಿಯೇ??

ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿ, ತಮ್ಮ ವ್ಯಕ್ತಿತ್ವವನ್ನು ತಾವೇ ಹರಾಜು ಮಾಡಿಕೊಳ್ಳುವುದು ಸಾಧನೆಯ ಮೆಟ್ಟಿಲಿಗೆ ತಾವೇ ಕೊಡಲಿಯ ಪೆಟ್ಟು ಹೊಡೆದಂತೆ. ಇನ್ನು ಮುಂದೆ ಇಂತಹ ಮಾತುಗಳನ್ನಾಡದೆ, ಒಳ್ಳೆಯ ಚಿತ್ರ ಮಾಡುವತ್ತ ಗಮನಹರಿಸಿ, ಎಂದು ಕರ್ನಾಟದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಹೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಎದ್ದು ನಿಂತು, ಕೈಮುಗಿದು ಕ್ಷಮೆ ಯಾಚಿಸಿದ ಅನೂಪ್ ಮತ್ತು ನಿರೂಪ್ “ನಮ್ಮಿಂದ ದೊಡ್ಡ ತಪ್ಪಾಗಿದೆ”. ನನಗೆ ಕನ್ನಡಿಗರ ಮೇಲೆ ಅಪಾರವಾದ ಅಭಿಮಾನ, ಗೌರವ ಮತ್ತು ಪ್ರೀತಿ ಇದೆ. ನಾವು ಯಾವುದೇ ಸಂದರ್ಶನೆಕ್ಕೆ ಹೋದರೂ, ಮನವಬಿಚ್ಚಿ ಮಾತಾಡುವುದಿಲ್ಲ ಎಂಬ ಆರೋಪ ನಮ್ಮ ಮೇಲೆ ಇತ್ತು. ಹಾಗಾಗಿ ಈ ಕಾರ್ಯಕ್ರಮದಲ್ಲಿ ಜಾಲಿಯಾಗಿ ಭಾಗವಹಿಸಿದ್ದೆವು ಅದಕ್ಕಾಗಿಯೇ ಆ ಮಾತು ತಪ್ಪಿ ಬಂತು. ಯಾರಿಗೂ ನೋಯಿಸುವ ಉದ್ದೇಶ ನಮಗಿರಲಿಲ್ಲ ಎಂದು ಅನೂಪ್ ಹೇಳಿದರು. ಈ ಮಾತಿನಿಂದ ಕನ್ನಡಿಗರಿಗೆ ನೋವಾಗಿದೆ. ಆ ನೋವು ನಮಗೂ ಆಗಿದೆ. ಇನ್ನೂ ಮುಂದೆ ಸಿನಿಮ ಬಿಟ್ಟು ಬೆರೆಯೇನನ್ನೂ ಮಾತನಾಡುವುದಿಲ್ಲ ಎಂದರು.

ಏನಿದು ವಿವಾದ?:- “ರಾಜರಥ” ಚಿತ್ರತಂಡದೊಂದಿಗೆ Rapid ರಶ್ಮಿ ನಡೆಸಿಕೊಟ್ಟಿರುವ ಸಂದರ್ಶನಲ್ಲಿ ಭಂಡಾರಿ ಸಹೋದರರು ಮತ್ತು ನಾಯಕಿ ಅವಂತಿಕಾ ಶೆಟ್ಟಿ ಜೊತೆಸೇರಿ ನಡೆಸಿಕೊಟ್ಟಿರುವ “ರಾಜರಥ ಸಿನಿಮ ನೋಡದೆ ಇರುವವರು ಕಚಡಾ ನನ್ಮಕ್ಳು” ಎಂದು ಹೇಳಿದ್ದರು. ಆ ವಿಡಿಯೋ ಕಳೆದ ಎರಡು ದಿನಗಳಿದ್ದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾದುತ್ತಿದ್ದೆ. ಕರ್ನಾಟಕ ರಕ್ಷಣಾ ವೇದಿಕೆ ಮನನೊಂದು “ರಾಜರಥ” ತಂಡದವರು ಕ್ಷೆಮೆ ಯಾಚಿಸಬೇಕು ಎಂದು ಹೇಳಿದ್ದಾರೆ. ‘ಹಣ ಮಾಡುವುದಕೊಸ್ಕರ Rapid ರಶ್ಮಿಯಂಥವರು ಬೇಕಂತಲೇ ವಿವಾದಾತ್ಮಕ ಹೇಳಿಕೆಯನ್ನು ಕೊಡುವಂತೆ ಪ್ರಚೋದಿಸುತ್ತಾರೆ. ತಪ್ಪು ತಪ್ಪು ಕನ್ನಡ ಮಾತನಡುವುದಲ್ಲದೇ ಇಡೀ ಕನ್ನಡ ಚಿತ್ರರಂಗದ ಮರ್ಯಾದೆ ಕಳೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಅವರು ನಡೆಸಿಕೊಡುವ ಕಾರ್ಯಕ್ರಮಗಳಿಗೆ ಚಿತ್ರರಂಗ ಬಹಿಷ್ಕರ ಹಾಕಬೇಕು’ ಎಂದು ಸಾ.ರಾ. ಗೋವಿಂದು ಆಗ್ರಹಿಸಿದರು. ಆಗ Rapid ರಶ್ಮಿ ಯವರು ತಾವೇ ಖುದ್ದಾಗಿ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಬಂದು ರಾಜರಥ ಸಂದರ್ಶನದ ವೇಳೆ ಮಾತನಾಡಿದ ಪದಗಳಿಂದ ಕನ್ನಡಿಗರಿಗೆ ನೋವಾಗಿದ್ದರೆ ನಾನು ಕ್ಷೆಮೆ ಕೇಳುತ್ತೇನೆ. ಕನ್ನಡಿಗರ ಮನಸ್ಸಿಗೆ ನೋವಾಗುವಂತಹ ವಿಚಾರ ಬಂದಾಗ ಎಚ್ಚರದಿಂದ ಇರುತ್ತೇನೆ.ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ಕೊಡುವಂತ ಕಾರ್ಯಕ್ರಮಗಳನ್ನು ಹುಟ್ಟು ಹಾಕಿದ್ದೇನೆ. ಕಳೆದ ಒಂದು ವರ್ಷದಲ್ಲಿ ನಮ್ಮ ಕಾರ್ಯಕ್ರಮಕ್ಕೆ ಬಹಳಷ್ಟು ಚಿತ್ರ ತಂಡದವರು ಬಂದಿದ್ದಾರೆ. ಇನ್ನು ಮುಂದೆ ನಿಮ್ಮ ಸಹಕಾರ ಹೀಗೆ ಎರಲ್ಲಿ.ಎಂದು ಹೇಳಿ ಮತ್ತೊಮೆ ಕನ್ನಡಿಗರಲ್ಲಿ ಕ್ಷೆಮೆ ಯಾಚಿಸುತಿದ್ದೇನೆ.

ಎಷ್ಟಾದರೂ ಈ ಘಟನೆಯ ವಿರುದ್ದ ಮತ್ತೊಂದು ದೂರು ದಾಖಲಾಗಿದೆ.ಕರ್ನಾಟಕ ರಕ್ಷಣಾ ವೇದಿಕ್ಕೆಯು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತರದಲ್ಲಿ ಅಧ್ಯಕ್ಷ ಕುಮಾರ್ ಈ ಬಗ್ಗೆ ವಿಜಯನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿದಿದ್ದರೆ.ರಾಜರಥ ಚಿತ್ರ ತಂಡವು ಕನ್ನಡಿಗರಲ್ಲಿ ದಯವಿಟ್ಟು ಕ್ಷೆಮೆಸಿ ಎಂದು ಕೇಳಿಕೊಂಡಿದೆ.ಸಾರಾ ಗೋವಿಂದ್ ಮಾತನಾಡಿ ವಾಣಿಜ್ಯ ಮಡಳಿಗೆ ಬಂದು ಖುದ್ದು ಹೆಣ್ಣು ಮಗಳು ಬಂದು ಮೊದಲ ಬಾರಿಗೆ ತಪ್ಪಗ್ಗೆ ಕ್ಷಮಾಪಣೆ ಕೇಳಿದ್ದಾರೆ.ಕನ್ನಡಿಗರು ಔದಾರ್ಯದಿಂದ ಕ್ಷಮಿಸಬೇಕು ಎಂದು ತಿಳಿಸಿದರು.