ರ್‍ಯಾಪಿಡೋ ಬೈಕ್ ಸೇವೆಯ ನೇಪದಲ್ಲಿ ನಡೆಯುತ್ತಿದ್ದಿಯಾ ಹುಡುಗಿಯರನ್ನು ಅಪಹರಿಸುವ ಯತ್ನ? ಇಂತಹ ಆಪತ್ತಿನಲ್ಲಿ ಸಿಕ್ಕು ಸಿನಿಮಯ ರೀತಿಯಲ್ಲಿ ತಪ್ಪಿಸಿಕೊಂಡ ಯುವತಿ.!

0
188

ದೇಶದ ಹಲವು ನಗರಗಳಲ್ಲಿ ಪ್ರಯಾಣಕ್ಕೆಂದು ಹಲವು ಸೇವೆಗಳು ಲಭ್ಯವಿದ್ದು, ಅದರಂತೆ ಹೊಸದಾಗಿ ರ್‍ಯಾಪಿಡೋ ಬೈಕ್ ಸೇವೆ ಶುರುವಾಗಿದೆ. ಇದು ಬಹುತೇಕ ಜನಮನ್ನಣೆ ಪಡೆದಿದ್ದು, ಪ್ರಯಾಣಿಕರಿಗೆ ಒಳ್ಳೆಯ ಸೇವೆಯಾಗಿ ಹಲವರಿಗೆ ಉದ್ಯೋಗ ನೀಡಿದೆ. ಆದರೆ ಇದರ ಹೆಸರಲ್ಲಿ ಯುವತಿಯರನ್ನು ಅಪಹರಿಸುವ ಪ್ರಯತ್ನ ನಡೆಯುತ್ತಿದೆ. ಎನ್ನುವ ಸುದ್ದಿ ಹರಡಿದ್ದು, ನಿನ್ನೆ ಒಂದು ಘಟನೆ ನಡೆದು ಯುವತಿಯರಿಗೆ ಭಯ ಹುಟ್ಟಿಸಿದ್ದು. ರ್‍ಯಾಪಿಡೋ ಹತ್ತಿದ ಯುವತಿ ಅಪಾಯದಿಂದ ಪಾರಾಗಿದ್ದು, ಯುವತಿಗೆ ಅಪಹರಿಸಲು ಯತ್ನಿಸಿದ ವ್ಯಕ್ತಿ ಪರಾರಿಯಾಗಿದ್ದಾನೆ.

ಏನಿದು ಘಟನೆ?

ಕೆಲಸ ಮುಗಿಸಿ ಮನೆಗೆ ಹೋರಾಟ ಯುವತಿ ಮಂಗಳವಾರ ರಾತ್ರಿ 8:30 ರ ವೇಳೆಗೆ ಎಚ್‌ಎಸ್‌ಆರ್‌ ಲೇಔಟ್‌ನಿಂದ ಬಿಳೇಕಹಳ್ಳಿಗೆ ತೆರಳಲು ರ್‍ಯಾಪಿಡೋ ಬುಕ್ ಮಾಡಿದ್ದಾರೆ. ಮೊಬೈಲ್‌ನಲ್ಲಿ ಬ್ಯಾಟರಿ ಕಡಿಮೆ ಇದ್ದ ಕಾರಣ ಗೆಳತಿಯ ಮೊಬೈಲ್‌ನಿಂದ ಬುಕ್ ಮಾಡಿ, ಆನ್‌ಲೈನ್ ಪೇಮೆಂಟ್ ಮಾಡದೆ ನಗದು ಹಣ ನೀಡುವ ಆಯ್ಕೆ ಮಾಡಿಕೊಂಡಿದ್ದಾರೆ. ನಿಗದಿತ ವೇಳೆಗೆ ಬೈಕ್‌ನಲ್ಲಿ ಬಂದ ರ್‍ಯಾಪಿಡೋ ಹತ್ತಿ ಬಿಳೇಕಹಳ್ಳಿ ಕಡೆಗೆ ಹೊರಟಿದ್ದಾರೆ. ಸಿಲ್ಕ್‌ ಬೋರ್ಡ್‌ ಬರುತ್ತಲೇ ರ್‍ಯಾಪಿಡೋ ದ್ವಿಚಕ್ರ ವಾಹನದ ಚಾಲಕ ನೇರವಾಗಿ ತೆರಳುವ ಬದಲಿಗೆ ಎಡಕ್ಕೆ ಗಾಡಿ ತಿರುಗಿಸಿದ್ದಾನೆ. ಆ ರಸ್ತೆಯಲ್ಲಿ ಸಾಕಷ್ಟು ಬಾರಿ ಸಂಚರಿಸಿದ್ದ ಯುವತಿಗೆ ಇದು ಸರಿಯಾದ ದಾರಿ ಅಲ್ಲ ಎನ್ನುವುದು ತಿಳಿದು ವ್ಯಕ್ತಿಯನ್ನು ಕೇಳಿದ್ದಾಳೆ.

ಯುವತಿಗೆ ಮಾತಿಗೆ ವ್ಯಕ್ತಿ ರಸ್ತೆ ಸರಿಯಿಲ್ಲ ‘ಮುಂದೆ ಯೂಟರ್ನ್‌ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿ ವೇಗವಾಗಿ ಬೈಕ್ ಚಲಾಯಿಸಿದ್ದಾನೆ ಚಾಲಕ. ಮುಂದೆ ಯೂಟರ್ನ್‌ ತೆಗೆದುಕೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಯುವತಿ ಸುಮ್ಮನಾಗಿದ್ದಾಳೆ. ಆದರೆ ಆಕೆಗೆ ಆತಂಕ ಶುರುವಾಗಿದ್ದು ವಾಹನ ಚಾಲಕ ಗಾಡಿಯನ್ನು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಹತ್ತಿಸಿದಾಗ. ಗಾಡಿ ಫ್ಲೈಓವರ್‌ ಮೇಲೆ ಹತ್ತುತ್ತಿದ್ದಂತೆ ಆತಂಕಕ್ಕೆ ಒಳಗಾದ ಯುವತಿ ಗಾಡಿಯನ್ನು ನಿಲ್ಲಿಸಲು ಹೇಳಿದ್ದಾಳೆ. ‘ನಿಲ್ಲಿಸುತ್ತೇನೆ.. ನಿಲ್ಲಿಸುತ್ತೇನೆ’ ಎನ್ನುತ್ತಲೇ ಆತ ಗಾಡಿ ವೇಗವನ್ನು ಹೆಚ್ಚು ಮಾಡಿದ್ದಾನೆ. ‘ನಾನು ಮೂತ್ರ ವಿಸರ್ಜನೆ ಮಾಡಬೇಕು ಕೂಡಲೇ ಗಾಡಿ ನಿಲ್ಲಿಸಿ’ ಎಂದು ಯುವತಿ ಬೇಡಿಕೊಂಡಿದ್ದಾಳೆ.

ವಾಹನ ಚಾಲಕ ಫ್ಲೈಓವರ್‌ ಮೇಲಿನ ‘ಲೇ ಬೇ’ ದಲ್ಲಿ ಗಾಡಿ ನಿಲ್ಲಿಸಿ ಯುವತಿ ಗಾಡಿ ಇಳಿಯುತ್ತಲೇ ಹಣ ಸಹ ಪಡೆಯದೇ ಅಲ್ಲಿಂದ ಪರಾರಿ ಆಗಿದ್ದಾನೆ. ಅದು ಯಾರು ಇಲ್ಲದ ಪ್ರದೇಶವಾಗಿದ್ದು, ಮೊಬೈಲ್ ಕೂಡ ಸ್ವಿಚ್ಆಫ್ ಆಗಿದೆ. ಯಾವ ಕಡೆಗೂ ಹೋದರು ಐದು ಕಿಮೀ ನಡೆಯಬೇಕಾಗಿತ್ತು, ಸುತ್ತಲು ಕತ್ತಲು ಬೇರೆ ಇದೆ. ಅದರಲ್ಲೇ ಸ್ವಲ್ಪ ದೂರ ಹೋಗಿದ್ದಾಳೆ, ಅಲ್ಲಿ ಯುವಕರ ಗುಂಪೊಂದು ಸಿಗರೇಟ್ ಹೊಡೆದುಕೊಂಡು ಕೈಯಲ್ಲಿ ಬಿಯರ್ ಹಿಡಿದು ನಿಂತಿದ್ದರು, ಭಯಗೊಂಡ ಯುವತಿ ಮತ್ತಷ್ಟು ಓಡಿ ಮುದ್ದಕ್ಕೆ ಹೋಗಿದಾಳೆ. ಅಲ್ಲಿ ನವವಿವಾಹಿತ ಜೋಡಿಯೊಂದು ಮಾತನಾಡುತ್ತಾ ನಿಂತಿದ್ದರು. ಅವರ ಬಳಿ ಹೋಗಿದ್ದಾಳೆ ಆದರೆ ಯುವತಿಯನ್ನು ನೋಡಿ ಜೋಡಿ ಬೇರೆ ಕಡೆಗೆ ಹೋಗುತ್ತಿದ್ದರು ಆದರೆ ಯುವತಿ ಅಳುತ್ತಾ ಬೇಡಿಕೊಂಡು ತನ್ನ ಸ್ನೇಹಿತ ಬರುವ ವರೆಗೆ ಇರಿ ಎಂದು ಬೇಡಿಕೊಂಡಿದ್ದಾಳೆ.

ನವವಿವಾಹಿತ ಜೋಡಿ ಆಕೆಯೊಂದಿಗೆ ಇರಲು ಒಪ್ಪಿ. ಮೊಬೈಲ್ ನೀಡಿ ಗೆಳೆಯನಿಗೆ ಕರೆ ಮಾಡಲು ಸಹಾಯ ಮಾಡಿದ್ದಾರೆ. ಗೆಳೆಯನಿಗೆ ಕರೆ ಮಾಡಿ ತಾನಿರುವ ಸ್ಥಳ, ಇರುವ ಪರಿಸ್ಥಿತಿಯನ್ನು ವಿವರಿಸಿ, ನವವಿವಾಹಿತ ಯುವತಿ ಕೊಟ್ಟ ನೀರು ಕುಡಿದು, ಕೊಟ್ಟ ಶಾಲು ಹೊದ್ದುಕೊಂಡು ನಿಂತಿದ್ದಾಳೆ, ಅಷ್ಟರಲ್ಲೇ ಯುವಕನೊಬ್ಬ ಬಂದು ‘ಒಬ್ಬರೇ ನಿಂತಿದ್ದೀರಿ, ಬೇಕೆಂದರೆ ನಾವು ನಿಮ್ಮನ್ನು ಡ್ರಾಪ್ ಮಾಡುತ್ತೇವೆ’ ಎಂದು ಕೇಳಿದ್ದಾನೆ. ಮೊದಲೇ ಹೆದರಿದ ಯುವತಿ ಬೇಡವೆಂದು ಹೇಳಿದ್ದಾಳೆ. ಸ್ವಲ್ಪ ಹೊತ್ತಿನಲ್ಲೇ ಸ್ನೇಹಿತ ಬಂದು ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ ರ್‍ಯಾಪಿಡೋ ಚಾಲಕ ದಾರಿ ತಪ್ಪಿ ಫ್ಲೈಓರ್‌ ಮೇಲೆ ಬಂದಿದ್ದು, ನಂತರ ಯುವತಿಯನ್ನು ಹಣ ಪಡೆಯದೇ ದಾರಿಯಲ್ಲಿ ಬಿಟ್ಟು ಹೋಗಿದ್ದು ನೋಡಿದರೆ ಬೇರೆ ಉದ್ದೇಶವಿದೆ ಎನ್ನುವ ಅನುಮಾನ ಮೂಡಿದೆ ಅದಕ್ಕಾಗಿ ಯುವತಿಯರು ಯಾವುದಕ್ಕೂ ಎಚ್ಚರವಹಿಸುವುದು ಒಳ್ಳೆಯದು.