ಇನ್ಮೇಲೆ ಅತ್ಯಾಚಾರಿಗಳ ದುಷ್ಕೃತ್ಯ ಸಾಬೀತಾದರೆ ಅವರನ್ನು ನಪುಂಸಕಾರನ್ನಾಗಿ ಮಾಡೋ ಶಿಕ್ಷೆ ಜಾರಿಗೆ ಬಂದಿದೆ!!

0
283

ಅತ್ಯಾಚಾರ ಮಾಡಿದವನ ನರ ಕಟ್ ಮಾಡಬೇಕು ಎಂದು ಸಾಮಾನ್ಯವಾಗಿ ಜನರು ಮಾತನಾಡುವುದಿದೆ. ಆದರೆ, ನೈಜೀರಿಯಾ ದೇಶ ಇದೀಗ ತಂದಿರುವ ಕಾನೂನು ಸದ್ಯ ಸುದ್ದಿಯಲ್ಲಿದ್ದು, ಅತ್ಯಾಚಾರಿಗಳ ನರ ಕಟ್ ಮಾಡಲು ಹೊಸ ಕಾನೂನನ್ನು ಸರ್ಕಾರ ಜಾರಿಗೊಳಿಸಿದೆ.

ಅತ್ಯಾಚಾರ ಎಂಬುದು ಕ್ರೂರ ಕೃತ್ಯ. ಸಮ್ಮತವಲ್ಲದ ಸೆಕ್ಸ್‌, ಬಲಾತ್ಕಾರ ಹೆಣ್ಣುಮಕ್ಕಳ ಮೇಲೆ ದೀರ್ಘಕಾಲಿಕ ಮಾನಸಿಕ ಸಮಸ್ಯೆಯನ್ನೂ ತರುತ್ತದೆ. ರೇಪ್ ಅತ್ಯಂತ ಭೀಕರ ಎಂದು ಗೊತ್ತಿದ್ದರೂ ಹಲವು ರಾಷ್ಟ್ರಗಳಲ್ಲಿ ಅಂತಹ ದೊಡ್ಡ ಶಿಕ್ಷೆ ಏನಿಲ್ಲ. ಬಹಳಷ್ಟು ರಾಷ್ಟ್ರಗಳಲ್ಲಿ ಅತ್ಯಾಚಾರ ನಡೆಯುತ್ತದೆ. ಒಂದೊಂದು ಕಡೆ ಒಂದೊಂದು ರೀತಿಯ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಆದರೆ ನೈಜಿರಿಯಾದಲ್ಲಿ ಅತ್ಯಾಚಾರಿಗೆ ಕೊಡೋ ಶಿಕ್ಷೆ ಏನು ನೋಡಿ, ಆತ ಮತ್ಯಾವತ್ತೂ ಸೆಕ್ಸ್ ಮಾಡೋಕೆ ಆಗಲ್ಲ.

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ, ಕಲ್ಲು ಹೊಡೆದು ಸಾಯಿಸುವುದು, ಜೀವಾವಧಿ ಜೈಲು ಶಿಕ್ಷೆ ಹೀಗೆ ವಿವಿಧ ರೀತಿಯ ಶಿಕ್ಷೆ ನೀಡಲಾಗುತ್ತದೆ. ನೈಜೀರಿಯಾದ ಕದುನಾ ಎಂಬ ರಾಜ್ಯದಲ್ಲಿ ಅತ್ಯಾಚಾರಿಗಳನ್ನು ಶಿಕ್ಷಿಸಲು ವಿಚಿತ್ರ ಕಾನೂನೊಂದನ್ನು ಜಾರಿ ಮಾಡಲಾಗಿದೆ. ನೈಜಿರಿಯಾ ದೇಶ ತಂದಿರುವ ಕಾನೂನಿನ ಪ್ರಕಾರ ಅತ್ಯಾಚಾರಿಯ ವೃಷಣವನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ, ಆತನಿಗೆ ಸೆಕ್ಸ್ ನಲ್ಲಿ ಜೀವನ ಪೂರ್ತಿ ಪಾಲ್ಗೊಳ್ಳಲು ಸಾಧ್ಯವಾಗದಂತೆ ಮಾಡಬೇಕು. ಮತ್ತೆಂದಿಗೂ ಆತ ಯಾರ ಮೇಲೂ ಅತ್ಯಾಚಾರ ನಡೆಸಬಾರದು ಎನ್ನುವುದೇ ಇದರ ಉದ್ದೇಶವಾಗಿದೆ ಎಂದು ನೈಜಿರಿಯಾ ಹೇಳಿದೆ.

ಶಿಕ್ಷೆಗೆ ಗುರಿಯಾದವರು ಮತ್ತೆಂದೂ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವೇ ಇಲ್ಲ. ಒಂದು ವೇಳೆ 14 ವರ್ಷದ ಒಳಗಿನವರ ಮೇಲೆ ಅತ್ಯಾಚಾರ ಎಸಗಿದರೆ ಮರಣದಂಡನೆ ಶಿಕ್ಷೆ ಗ್ಯಾರಂಟಿ. ನೈಜೀರಿಯಾದಲ್ಲಿ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳಾ ಸಂಘಟನೆಗಳು ಆಗ್ರಹಿಸಿದ್ದವು.

ನೈಜಿರಿಯಾದಲ್ಲಿ ರೇಪ್ ಮಾಡಿದ ವ್ಯಕ್ತಿಯ ವೃಷ್ಣಣವನ್ನೇ ಕತ್ತರಿಸಲಾಗುತ್ತದೆ. ಇನ್ನು 14 ವರ್ಷಕ್ಕಿಂತ ಕೆಳಗಿನ ಅಪ್ರಾಪ್ತೆಯನ್ನೇನಾದರೂ ರೇಪ್ ಮಾಡಿದರೆ ಮರಣ ದಂಡನೆ ವಿಧಿಸಲಾಗುತ್ತದೆ.

ನೈಜಿರಿಯಾ ರಾಷ್ಟ್ರದ ಕಡುನಾ ಎಂಬ ರಾಜ್ಯದ ರಾಜ್ಯಪಾಲ ನಾಸಿರ್ ಅಹ್ಮದ್ ಎಲ್-ರುಫಾಯಿ ಈ ನಿಯಮ ತಂದಿದ್ದು, ಗಂಭೀರ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಇಂತಹ ಕಠಿಣ ಶಿಕ್ಷೆ ವಿಧಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.

ಕೊರೋನಾ ವೈರಸ್ ಕಾಲಾವಧಿಯಲ್ಲೇ ನೈಜಿರಿಯಾದಲ್ಲಿ ಅತ್ಯಂತ ಹೆಚ್ಚು ರೇಪ್ ಪ್ರಕರಣಗಳು ವರದಿಯಾಗಿವೆ. ಮರಣದಂಡನೆ ಸೇರಿದಂತೆ ಅತ್ಯಾಚಾರ ಮಾಡಿದವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು ಎಂದು ಮಹಿಳಾ ಸಂಘಟನೆಗಳು ಆಗ್ರಹಿಸಿದ್ದವು.

ನೈಜಿರಿಯಾದ ಉಳಿದ ರಾಜ್ಯದಲ್ಲೂ ಈ ಕಾನೂನು ಜಾರಿಯಾಗಬೇಕೆಂದು ಲಿಂಗ ಕಾರ್ಯಕರ್ತೆ ಹಾಗೂ ರೇಪ್ ಸಂತ್ರಸ್ತೆ ದೊರೋತಿ ಜೆಮಂನ್ಝೆ ಆಗ್ರಹಿಸಿದ್ದಾರೆ. ಆಫ್ರಿಕಾದ ಅತ್ಯಂತ ಪ್ರಸಿದ್ಧ ರಾಷ್ಟ್ರ ನೈಜಿರಿಯಾದಲ್ಲಿ ರೇಪ್ ಶಿಕ್ಷೆ ಅತ್ಯಾಚಾರಿಗೆ ನೀಡಲಾದ ಅತ್ಯಂತ ಕಠಿಣ ಶಿಕ್ಷೆಯಾಗಿದೆ.