ದಿನ ಭವಿಷ್ಯ: ಜನವರಿ 15, 2018

0
1009
ದಿನ ಭವಿಷ್ಯ

ಮೇಷ:

ಮಾತು ಕಡಿಮೆ ಮಾಡಿ ಧ್ಯಾನಯೋಗದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ಹಬ್ಬದ ವಾತಾವರಣವು ನಿಮಗೆ ಹೆಚ್ಚಿನ ಖುಷಿ ಮತ್ತು ನೆಮ್ಮದಿಯನ್ನು ತಂದು ಕೊಡುವುದು. ಮಕ್ಕಳ ಪ್ರಗತಿಯ ಬಗ್ಗೆ ಹೆಮ್ಮೆ ಎನಿಸುವುದು.

ವೃಷಭ:

ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಹೆಚ್ಚಿನ ಆಸಕ್ತಿ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸಂಕ್ರಾಂತಿಯು ನಿಮ್ಮ ಸಂಕಷ್ಠಗಳನ್ನು ದೂರ ಮಾಡುವುದು. ಹಳೆಯ ಸ್ನೇಹಿತರು ಇಂದು ನಿಮ್ಮನ್ನು ಭೇಟಿ ಮಾಡುವ ಸಂದರ್ಭ.

ಮಿಥುನ:

ಸಕಲರಿಗೂ ಮಾರ್ಗದರ್ಶನ ನೀಡುವ ನಿಮ್ಮನ್ನು ಹತ್ತು ಹಲವು ಜನರು ಬಂದು ಶುಭ ಹಾರೈಸುವರು. ಎಲ್ಲರನ್ನು ನಗುಮುಖದಿಂದಲೇ ಮಾತನಾಡಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕಟಕ:

ಹಣಕಾಸು ವಿಷಯದಲ್ಲಿ ಜಾಗ್ರತೆಯಿರಲಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ವಿನಾಕಾರಣ ಉದ್ವೇಗಗೊಳ್ಳುವುದರಿಂದ ಆರೋಗ್ಯದಲ್ಲಿ ತೊಂದರೆಯಾಗುವುದು. ತಾಳ್ಮೆಯಿಂದ ಈದಿನ ಪರಿಸ್ಥಿತಿಯನ್ನು ನಿಭಾಯಿಸುವಿರಿ.

ಸಿಂಹ:

ಮನಸ್ಸಿಗೆ ಏಕೋ ಅಲ್ಪ ಕಸಿವಿಸಿ ಉಂಟಾಗುವುದು. ಉದರ ಶೂಲೆಯು ಹಬ್ಬದ ಸಂಭ್ರಮವನ್ನು ಕಸಿದುಕೊಳ್ಳುವ ಸಾಧ್ಯತೆ. ಆಹಾರ-ವಿಹಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಸಹಪಾಠಿಗಳು ನಿಮಗೆ ಸಹಾಯ ಮಾಡುವರು.

ಕನ್ಯಾ:

ಇಚ್ಛೆ ಇದ್ದಲ್ಲಿ ಕಷ್ಠವಿರಲಾರದು. ಮಾಡುವ ಕೆಲಸದಲ್ಲಿ ಶ್ರದ್ಧೆಯನ್ನು ತೋರಿದಲ್ಲಿ ಕೆಲಸದಲ್ಲಿ ಪರಿಪೂರ್ಣತೆಯನ್ನು ಸಾಧಿಸುವಿರಿ. ಸೋಮಾರಿತನ ಬಿಟ್ಟು ಕಾರ್ಯ ಪ್ರವತ್ತರಾಗುವುದರಿಂದ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು.

ತುಲಾ:

ನೀವು ನಿಮ್ಮ ಹಿರಿಯರ ಮಾತನ್ನು ಮೀರುವುದು ತರವಲ್ಲ. ಸಂಕ್ರಾಂತಿಯ ಈ ಪರ್ವ ಕಾಲದಲ್ಲಿ ನೀವಾಗಿಯೇ ಸಂಕಷ್ಠಕ್ಕೆ ಗುರಿ ಆಗದಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚಿರಿ. ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಮಾಡಬೇಡಿರಿ.

ವೃಶ್ಚಿಕ:

ಕಷ್ಟಕಾಲಕ್ಕೆ ಇದ್ದ ಒಡವೆ ವಸ್ತುಗಳನ್ನು ಮಾರಾಟ ಮಾಡಬೇಕಾಗಿ ಬರುವ ಸಾಧ್ಯತೆ. ಆದರೆ ನಿಮ್ಮ ಆಪ್ತಮಿತ್ರರೊಬ್ಬರು ಹಣಕಾಸಿನ ಸಹಾಯವನ್ನು ಮಾಡುವುದರಿಂದ ಸಂತೋಷದಿಂದ ಹಬ್ಬವನ್ನು ಆಚರಿಸುವಿರಿ.

ಧನಸ್ಸು:

ಶಿಕ್ಷಣ ಕ್ಷೇತ್ರದಲ್ಲಿ ನಿಮ್ಮ ಸಾಧನೆ ಅಪಾರವಾಗಿದೆ. ನೀವು ಸಾಧಿಸಿದ್ದನ್ನು ಬರಹರೂಪದಲ್ಲಿಡುವುದು ಒಳ್ಳೆಯದು. ಅದು ಮತ್ತೊಬ್ಬರಿಗೆ ಮಾರ್ಗದರ್ಶನವಾಗುವುದು. ನಿಮ್ಮ ವಿಚಾರಧಾರೆಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವ ಹಂಬಲ ಉಂಟಾಗುವುದು.

ಮಕರ:

ಕೋರ್ಟು ಕಚೇರಿಯ ಕೆಲಸಗಳಲ್ಲಿ ತುಸು ಹಿನ್ನಡೆ ಕಂಡುಬರುವ ಸಾಧ್ಯತೆ ಇದೆ. ಯಾವುದೇ ವಿಚಾರಕ್ಕೂ ಎರಡು ಬಾರಿ ಚಿಂತಿಸಿ ಕಾರ್ಯಪ್ರವತ್ತರಾಗಿರಿ. ಸದ್ಯದ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿಲ್ಲ.

ಕುಂಭ:

ಬೇರೆಯವರು ಮಾಡಿದ ಸಹಾಯಕ್ಕಾಗಿ ತಕ್ಷಣವೇ ಧನ್ಯವಾದ ಹೇಳುವ ನೀವು ಇಂದು ನಿಮ್ಮ ಕುಟುಂಬದ ಸದಸ್ಯರು ನಿಮಗಾಗಿ ಮಾಡಿದ ಕಾರ್ಯಕ್ಕೆ ಅಥವಾ ಸಹಾಯಕ್ಕೆ ಧನ್ಯವಾದ ಹೇಳಿ, ಇದು ಮಹತ್ರರ ಪರಿಣಾಮ ಬೀರಲಿದೆ.

ಮೀನ:

ಹಿರಿಯರ ಆಸ್ತಿ ಮಾರಿ ಬೇರೊಂದು ಕಡೆ ನೆಲೆಸಿರುವ ನಿಮಗೆ ಇಂದು ಹಳೆಯ ನೆನಪುಗಳು ಬಂದು ಕಾಡುವುದು. ಸಂಗಾತಿಯ ಮಾತುಗಳು ನಿಮಗೆ ಧೈರ್ಯವನ್ನು ತುಂಬುವುದು. ನಿಮ್ಮ ಸ್ನೇಹಿತರು ಸರಿಯಾದ ಮಾರ್ಗದರ್ಶನ ಮಾಡುವರು.