ರವೆ ಇಡ್ಲಿ ಮಾಡುವ ವಿಧಾನ

0
4929

Kannada News | Recipe tips in Kannada

ರವೆ ಅಥವಾ ಬಾಂಬೆ ರವೆ ಬಳಸಿ ತಯಾರಿಸಲಾಗುವ ರವೆ ಇಡ್ಲಿಯು (Rava idli) ದಕ್ಷಿಣ ಭಾರತದ ಜನಪ್ರಿಯ ಉಪಾಹಾರ ತಿನಿಸಾದ ಇಡ್ಲಿಯ ಒಂದು ಬಗೆ.

ಇದು ಕರ್ನಾಟಕದ ಒಂದು ವೈಶಿಷ್ಟ್ಯ ಉಪಾಹಾರ.

ಬೇಕಾಗುವ ಸಾಮಗ್ರಿಗಳು

  • ರವೆ (ಲೋಕಲ್ ರವೆ)
  • ಎರಡು ಕಪ್ ಮೊಸರು
  • ಅಡುಗೆ ಎಣ್ಣೆ
  • ಹಸಿಮೆಣಸಿನಕಾಯಿ ನಾಕಾರು
  • ಉದ್ದಿನ ಬೇಳೆ
  • ಸಾಸಿವೆ ಅರ್ಧ ಟೀ ಸ್ಪೂನ್
  • ಕಾಯಿತುರಿ
  • ಇಂಗು ಚಿಟಿಕೆ, ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿದ್ದು
  • ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ

ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ, ಸಣ್ಣಗೆ ಹೆಚ್ಚಿಕೊಂಡ ಹಸಿಮೆಣಸಿನಕಾಯಿ, ಕರಿಬೇವು, ಇಂಗು ಹಾಕಿ ಚೆನ್ನಾಗಿ ತಾಳಿಸಿ ನಂತರ ರವೆಯನ್ನು ಹಾಕಬೇಕು. ರವೆ ಘಂ ಅಂತ ವಾಸನೆ ಬರುವವರೆಗೆ ಹುರಿಯಬೇಕು. ಹುರಿದು ತಣ್ಣಗಾದ ಬಳಿಕ ಉಪ್ಪು, ಕೊತ್ತಂಬರಿ ಸೊಪ್ಪು, ಕಾಯಿತುರಿ ಹಾಕಿ ಮೊಸರನ್ನು ಹಾಕುತ್ತ ಇಡ್ಲಿ ಹಿಟ್ಟಿನ ಹದಕ್ಕೆ ಬರುವವರೆಗೆ ಕಲಿಸಬೇಕು. ಸ್ವಲ್ಪ ಕಾಯಿತುರಿ, ಕ್ಯಾರೆಟ್ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಮಿಕ್ಸ್ ಮಾಡಿಟ್ಟುಕೊಳ್ಳಬೇಕು. ಆ ಕಡೆ ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟು ಕೊಂಡಿರಬೇಕು. ನಂತರ ಎಣ್ಣೆ ಸವೆರಿದ ಇಡ್ಲಿ ತಟ್ಟೆಗೆ ಒಂದೊಂದು ಗೋಡಂಬಿ ಇಟ್ಟಮೇಲೆ ಕ್ಯಾರೆಟ್ ತುರಿ ಮಿಕ್ಸ್ ಮಾಡಿದ್ದನ್ನು ಹದವಾಗಿ ಹರಡಿ ಮೊಸರು ಸೇರಿಸಿ ಕಲೆಸಿದ ಹಿಟ್ಟನ್ನು ಹಾಕಿ ಕುಕ್ಕರನ್ನು ಸ್ಟೌವ್ ಮೇಲೆ ಪ್ರತಿಷ್ಠಾಪಿಸಬೇಕು. 10 ನಿಮಿಷಕ್ಕೆ ಕುಕ್ಕರ್ ಆಫ್ ಮಾಡಿದರೆ ಸಾಕು ಬಿಸಿಬಿಸಿ ರವೆ ಇಡ್ಲಿ ತಯಾರಾಗಿರುತ್ತದೆ.ರವೆ ಇಡ್ಲಿಯನ್ನು ಸಾಗು, ಕಾಯಿ ಚಟ್ನಿ ಮತ್ತು ಸಾಂಬಾರ್ ಜೊತೆ ಮೆಲ್ಲಬಹುದು.

Also Read: ಹೆಚ್ಚು ಖಾರವನ್ನು ತಿನ್ನಲು ಬಯಸುವವರು ಇಂದೇ ಟ್ರೈ ಮಾಡಿ ಬಟರ್ ಚಿಕನ್ ಮಸಾಲ….