ರವಿ ಚನ್ನಣ್ಣನವರ್-ರವರು ಬೆಂಗಳೂರಿನ ಬೀದಿ ವ್ಯಾಪಾರಿಗಳ ಜೊತೆ ಮಾತಾಡಿರುವ ಈ ವೀಡಿಯೊ ನೋಡಿ, ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತೆ!!

0
1018

ನಗರದಲ್ಲಿ ಪೊಲೀಸರೆಂದರೆ ಬೀದಿ-ಬದಿ ವ್ಯಾಪಾರಿಗಳಲ್ಲಿ ಇಂದಿಗೂ ಹೆದರುತ್ತಾರೆ. ಅರ್ಥಿಕ ಮುಗಟ್ಟಿನಲ್ಲಿರುವ ಸಾಮಾನ್ಯ ಬೀದಿ ವ್ಯಾಪಾರಿಗಳು ಪೋಲೀಸರ ಹಾವಳಿಗೆ ಬೆಚ್ಚಿ ಬೀಳುವ ಸಂದರ್ಭಗಳನ್ನು ನಾವು ನೋಡುತ್ತಾ ಬಂದಿದ್ದೇವೆ. ಅದರಲ್ಲೂ ವಿಶೇಷವಾಗಿ ಮೆಜೆಸ್ಟಿಕ್ ಎಂದರೆ ಕೇವಲ ಬೀದಿ ವ್ಯಾಪಾರಿಗಳಿಗಲ್ಲ ಕೆಲ ಸಾರ್ವಜನಿಕರಲ್ಲೂ ಭಯದ ವಾತಾವರಣ ಇದೆ. ಬೇರೆ ಊರುಗಳಿಂದ ಬರುವವರಿಗೆ ಇಲ್ಲಿ ಮೋಸ ಹೋಗುವ ಹಾಗೆ ಪಿಕ್ ಪಾಕೆಟ್ ಆಗುವ ಭೀತಿ ಸದಾ ಇದ್ದೇ ಇರುತ್ತೆ. ಇತ್ತೀಚೆಗಷ್ಟೇ ಬೆಂಗಳೂರಿನ ಪಶ್ಷಿಮ ಭಾಗದಲ್ಲಿ ಡಿಸಿಪಿಯಾಗಿ ಕಾರ್ಯಾಚರಣೆ ಆರಂಭಿಸಿದ ಖಡಕ್ ಐ.ಪಿ.ಎಸ್. ಅಧಿಕಾರಿ ರವಿ ಚನ್ನಣ್ಣನವರ್ ಬೀದಿ ಬದಿ ವ್ಯಾಪರಿಗಳೊಂದಿಗೆ ಮುಕ್ತ ಸಂವಾದ ನಡೆಸಿದರು.

ಎಂದಿನಂತೆ ಸಂವಾದದಲ್ಲಿ ಹುರುಪಿನಲ್ಲಿ ಮಾತಾಡುತ್ತಾ, “ಪೋಲೀಸರ ಕಡೆಯಿಂದ ಯಾವುದೇ ತಪ್ಪುಗಳಾಗಿದ್ದರೆ ಅದಕ್ಕೆ ಕ್ಷೆಮೆ ಕೋರುತ್ತೇವೆ, ಮುಂದೆ ಈ ತರಹದ ತಪ್ಪುಗಳು ಆಗುವುದಿಲ್ಲ” ಎಂದು ಬೀದಿ ವ್ಯಾಪಾರಿಗಳಲ್ಲಿ ರವಿ ಚನ್ನಣ್ಣನವರು ಮನವಿ ಮಾಡಿಕೊಂಡಿದ್ದಾರೆ. ಮೆಜೆಸ್ಟಿಕ್ ನಲ್ಲಿ ಜನಸ್ನೇಹಿ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬೀದಿ ವ್ಯಾಪಾರಿಗಳಿಗೆ ಪ್ರೀತಿಯಿಂದ ಮಾತನಾಡಿಸಿದ್ದಾರೆ.

ಇಷ್ಟಲ್ಲದೇ ಬೀದಿ ಬದಿ ವ್ಯಾಪಾರಿಗಳ ಮಕ್ಕಳ ಶಿಕ್ಷಣದ ಬಗ್ಗೆ ಮಾತಾಡುತ್ತಾ, “ಬೀದಿ ವ್ಯಾಪಾರವೇನಿದ್ದರೂ ನಿಮಗೆ ಕೊನೆಯದಾಗಲಿ. ಅದು ನಿಮ್ಮ ಮಕ್ಕಳಿಗೂ ಮುಂದುವರಿಯಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತೆ ಮಾಡಬೇಕು”. ಬೆಂಗಳೂರಿನ ದುಬಾರಿ ಶಿಕ್ಷಣದ ಬಗ್ಗೆ ಮಾತಾಡುತ್ತ, “ನಮ್ಮ ಮಕ್ಕಳನ್ನೂ ಬೆಂಗಳೂರಿನಲ್ಲಿ ಓದಿಸುವುದು ಬಹಳ ಕಷ್ಟವಾಗಿದೆ, ನೀವೇನಾದರು ನಿಮ್ಮ ಮಕ್ಕಳನ್ನು ಮೈಸೂರಿನಲ್ಲಿ ಓದಿಸುತ್ತೀರಿ ಎಂದಾದರೆ ಕರೆದುಕೊಂಡು ಬನ್ನಿ ಮೆಡಿಕಲ್ ಹೊರೆತುಪಡಿಸಿ ಯಾವುದೇ ಶಿಕ್ಷಣವನ್ನು ಅಲ್ಲಿ ಕೊಡಿಸುತೇನೆ ದಾನಿಗಳಿಂದಾನೆ ನಡೆಸುತ್ತಿರುವ ಶಾಲೆಯಲ್ಲಿ ಉತ್ತಮ ಶಿಕ್ಷಣ ಕೊಡಿಸುವ ಜವಾಬ್ದಾರಿ ಹೊರುತ್ತೇನೆ.  ರಹೀಮ್ ಇರಲಿ ಅಥವಾ ಆಂಟೋನಿಯಿರಲಿ, ಯಾರಾದರು ಸರಿಯೇ ಜಾತಿ ಧರ್ಮದ ಹಂಗಿಲ್ಲದೆ ಶಿಕ್ಷಣ ಕೊಡಿಸುವ ಕೆಲಸ ಕೆಲಸ ಮಾಡುತ್ತಿದ್ದೇವೆ”ಎಂದರು.

ರವಿ ಚನ್ನಣ್ಣ ನವರು ಬೀದಿ ವ್ಯಾಪಾರಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಡು “ಮೆಜಿಸ್ಟಿಕ್ ನಮ್ಮದಲ್ಲ ನಿಮ್ಮದು”ಎಂದು ಜನತೆಗೆ ಮನಮುಟ್ಟುವಂತೆ ಹೇಳಿದ್ದರು. ಮೈಸೂರು ಮತ್ತು ಶಿವಮೊಗ್ಗದಲ್ಲಿ S.P ಯಾಗಿ ಹವಾ ಸೃಷ್ಟಸಿ ಲಕ್ಷಾಂತರ ಜನರ ಅಭಿಮಾನವನ್ನು ರವಿ ಚನ್ನಣ್ಣ ನವರ ಈ ವೀಡಿಯೋ ಬೆಂಗಳೂರು ಜನತೆಯ ಮನಗೆದ್ದಿದೆ. ಜನರ ಜೊತೆಯಲ್ಲಿ ಮಾತನಾಡುವ ಈ ವಿಡಿಯೋ ವೈರಲ್ ಆಗಿದ್ದು, ಖಾಕಿಯೋಳಗಿರುವ ಮಾನವೀಯತೆಯನ್ನು ಜನತೆಗೆ ದರ್ಶನಮಾಡಿಸುವ ಪ್ರಯತ್ನ ನಡೆಸಲು ಮುಂದಾದರು. ಇಂತಹ ಅಧಿಕಾರಿಗಳನ್ನು ನೋಡಿ ಮುಂದೆ ಬರುವ ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಯಿಸಬೇಕು ಎಂದು ಹೇಳಲಾಗಿದೆ.

ವೀಡಿಯೊ ಕೃಪೆ: ಈನಾಡು ಕನ್ನಡ