ಭಾರತದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೊಂದು ಸಾಧನೆ

0
489

 

ಕಳೆದ ವರ್ಷ ದಾಖಲೆಗಳನ್ನೇ ಸುರಿಸಿದ್ದ ಭಾರತದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮತ್ತೊಂದು ಮೈಲಿಗಲ್ಲನ್ನು ನಿರ್ಮಿಸಿದ್ದಾರೆ.

ಕಳೆದ ವರ್ಷ ನ್ಯೂಜಿಲ್ಯಾಂಡ್ ಸರಣಿಯಲ್ಲಿ ಅತಿ ವೇಗದ 200 ವಿಕೆಟ್ ಕಬಳಿಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಶ್ವಿನ್ ಬಾಗ್ಲಾದೇಶದ ವಿರುಶದ ವಿರುದ್ಧ ನಡೆಯುತ್ತಿರುವ ಏಕಮೇವ ಟೆಸ್ಟ್ ವೇಳೆ ಮು.ರಹೀಮ್ ರವರು ವಿಕೆಟ್ ಕೀಪರ್ ವೃದ್ದಿಮಾನ್ ಶಾಗೆ ಕ್ಯಾಚ್ ನೀಡುತ್ತಿದ್ದಂತೆ ಅಶ್ವಿನ್ ನೂತನ ದಾಖಲೆಯನ್ನು ನಿರ್ಮಿಸಿದರು. ರವಿಚಂದ್ರನ್ ಅಶ್ವಿನ್ ತಾನಾಡಿದ 45 ಟೆಸ್ಟ್ ಪಂದ್ಯಗಳಿಂದ 250 ವಿಕೆಟ್ ಗಳನ್ನು ಕಬಳಿಸಿದ ವೇಗದ ಆಟಗಾರ ಎಂಬ ದಾಖಲೆ ನಿರ್ಮಿಸಿ ಕ್ರಿಕೆಟ್ ದಂತಕಥೆ ಆಸ್ಟ್ರೇಲಿಯಾದ ಡೆನ್ನಿಸ್ ಲಿಲಿ (48 ಪಂದ್ಯ )ದ ದಾಖಲೆಯನ್ನು ಸರಿಗಟ್ಟಿದರು. ಭಾರತ ತಂಡದ ಅನಿಲ್ ಕುಂಬ್ಳೆ ಅವರು 22 ಅಕ್ಟೋಬರ್ 1999ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಆದರೆ ಅವರು ಈ ಸಾಧನೆ ಮಾಡಲು ತೆಗೆದುಕೊಂಡಿದ್ದು 55 ಪಂದ್ಯಗಳು.

250 ವಿಕೆಟ್ ಪಡೆದ ಟಾಪ್ ಟೆನ್ 10 ಆಟಗಾರರು:

ರವಿಂದ್ರನ್ ಅಶ್ವಿನ್ (ಭಾರತ, 45 ಪಂದ್ಯ), ಡೆನ್ನಿಸ್ ಲಿಲಿ (ಆಸ್ಟ್ರೇಲಿಯಾ, 48 ಪಂದ್ಯ), ಡೇನ್ ಸ್ಟೇನ್ (ದಕ್ಷಿಣ ಆಫ್ರಿಕಾ, 49 ಪಂದ್ಯ), ಅಲನ್ ಡೋನಾಲ್ಡ್(ದ,ಆಫ್ರಿಕಾ 50 ಪಂದ್ಯ), ವಾಕರ್ ಯುನಿಸ್ (ಪಾಕಿಸ್ತಾನ್, 51 ಪಂದ್ಯ), ಮುತ್ತಯ್ಯಮುರಳೀಧರನ್ (ಶ್ರೀಲಂಕಾ, 51 ಪಂದ್ಯ), ರಿಚರ್ಡ್ ಹ್ಯಾಡ್ಲಿ (ನ್ಯೂಜಿಲ್ಯಾಂಡ್, 53 ಪಂದ್ಯ), ಎಂ.ಡಿ.ಮಾರ್ಷಲ್(ವೆಸ್ ಟ್ ಇಂಡಿಸ್, 53 ಪಂದ್ಯ), ಇಯಾನ್ ಖಾನ್ (ಪಾಕಿಸ್ತಾನ, 55 ಪಂದ್ಯ)