ಈ ಮಾವಿನ ಸೀಸನ್-ನಲ್ಲಿ ಬೇರೆಲ್ಲಾ ಚಟ್ನಿ ಮಾಡೋದನ್ನು ಬಿಟ್ಟು ರುಚಿ ರುಚಿಯಾದ ಮಾವಿನಕಾಯಿ ಚಟ್ನಿ ಮಾಡಿ ಸವಿಯಿರಿ!!

0
683

ಬೇಸಿಗೆ ಅಂದರೆ ಮಾವಿನ ಹಣ್ಣಿನ ಸೀಜನ್. ಹಣ್ಣುಗಳ ರಾಜ ಮಾವು ತಿನ್ನಲು ರುಚಿ. ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಮಾವಿನ ಸಿಪ್ಪೆ , ಕಾಯಿ, ತೊಗಟೆ, ಎಲೆ ಎಲ್ಲವೂ ಆರೋಗ್ಯಕರವಾದುದು. ಮಾವಿನ ಹಣ್ಣು ಹೇಗೆ ರುಚಿಯೋ ಹಾಗೆಯೇ ಮಾವಿನ ಕಾಯಿ ಕೂಡ ತನ್ನದೇ ಆದ ಸೊಗಡನ್ನು ಹೊಂದಿರುತ್ತದೆ. ಮಾವಿನ ಹಣ್ಣಿನ ಸೀಸನ್ ನಲ್ಲಿ ಮಾವಿನಕಾಯಿ ಇಂದ ಥರಹೇವಾರಿ ಅಡುಗೆ ಮಾಡಬಹುದು. ಈ ಮಾವಿನ ಕಾಯಿಯನ್ನು ಬಳಸಿ ವೆರಿಸಿಂಪಲ್ ಆಗಿ ಮಾಡುವ ಮಾವಿನಕಾಯಿ ಚಟ್ನಿ ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ ನೋಡಿಕೊಳ್ಳಿ. ತಿಂಡಿ ಯಾವುದೇ ಆದರೂ ಅದಕ್ಕೆ ಮ್ಯಾಚ್ ಆಗುವ ಚಟ್ನಿ ಇದಾಗಿದೆ. ಅನ್ನಕ್ಕೂ ಕೂಡ ಒಳ್ಳೆಯ ಜೊತೆಯಾಗುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಚಟ್ನಿ, ಪಲ್ಯ ತಿಂದು ಬೇಜಾರಿಗಿದ್ರೆ, ಈ ಮಾವಿನ ಸೀಸನ್-ನಲ್ಲಿ ರುಚಿ ರುಚಿಯಾದ ಮಾವಿನ ಕಾಯಿ ಗೊಜ್ಜನ್ನು ಮಾಡೋದು ಹೇಗೆ ಅಂತ ಹೇಳ್ತೀವಿ ನೋಡಿ!!

ಬೇಕಾಗುವ ಸಾಮಗ್ರಿಗಳು

 • ಸ್ವೀಟ್ ಮಾವಿನಕಾಯಿ
 • ಸಾಸಿವೆ
 • ಜೀರಿಗೆ
 • ಕರಿಬೇವು
 • ಉದ್ದಿನಬೇಳೆ
 • ಹಸಿ ಮೆಣಸಿನಕಾಯಿ 2 ರಿಂದ 4
 • ಇಂಗು – ಒಂದು ಸಣ್ಣ ಚೂರು
 • ಮೆಂತ್ಯ ಪೂಡಿ – ಕಾಲು ಚಮಚ
 • ಒಂದು ಬಟ್ಟಲು ಕೊಬ್ಬರಿ
 • ರುಚಿಗೆ ತಕಷ್ಟು ಉಪ್ಪು

ಮಾಡುವ ವಿಧಾನ

 1. ಮೊದಲಿಗೆ ಮಾವಿನಕಾಯಿಯ ಸಿಪ್ಪೆಯನ್ನು ತೆಗೆದು ತುರಿದುಕೊಳ್ಳಬೇಕು.
 2. ಈಗ ಒಂದು ಬಾಣಲೆಗೆ ಹಸಿ ಮೆಣಸಿನಕಾಯಿ, ಉದ್ದಿನ ಬೆಳೆ ಮತ್ತು ಕರಿಬೇವು ಹಾಕಿ ಹುರಿದುಕೊಳ್ಳಬೇಕು.
 3. ಈಗ ಇದಕ್ಕೆ ತುರಿದ ಮಾವಿನಕಾಯಿ ಹಾಕಿ ಅದು ಹಸಿ ಬಿಡುವವರೆಗೆ ಬೇಯಿಸಿಕೊಳ್ಳಬೇಕು.
 4. ನಂತರ ಒಂದು ಬಟ್ಟಲು ಕೊಬ್ಬರಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
 5. ಈಗ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ತಣ್ಣಗಾದ ಮೇಲೆ ರುಚಿಗೆ ತಕ್ಕಷ್ಟು ಉಪ್ಪು ಸ್ವಲ್ಪ ನೀರನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಿ.
 6. ಈಗ ಒಂದು ಸಣ್ಣ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಹಾಕಿ ಇದನ್ನು ಮಾವಿನಕಾಯಿ ಚಟ್ನಿ ಹಾಕಿದರೆ ರುಚಿಯಾದ ಮಾವಿನಕಾಯಿ ಚಟ್ನಿಯನ್ನು ಸವಿಯಲು ಸಿದ್ದ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522