ಆರ್‍ಬಿಐ 45 ದಿನದಲ್ಲಿ ಹೊರಡಿಸಿದ 60 ಅಧಿಸೂಚನೆಗಳ ಪೂರ್ಣ ಪಾಠ

0
790

ಕೇಂದ್ರ ಸರಕಾರ ಹಳೆಯ 500 ಮತ್ತು 1000 ನೋಟುಗಳನ್ನು ನಿಷೇಧಿಸಿ ಹೊಸದಾಗಿ 500 ಮತ್ತು 2000 ನೋಟುಗಳನ್ನು ಬಿಡುಗಡೆ ಮಾಡಿ 45 ದಿನಗಳು ಕಳೆದುಹೋದವು. ಮಂಗಳವಾರ 5000 ಮೇಲ್ಪಟ್ಟು ಹಣವನ್ನು ಒಂದೇ ಬಾರಿ ಖಾತೆಗೆ ಜಮೆ ಮಾಡಬಹುದು ಎಂದು ಆದೇಶ ಹೊರಡಿಸಿದ್ದ ರಿಸರ್ವ್ ಬ್ಯಾಂಕ್‍ ಆಫ್‍ ಇಂಡಿಯಾ ಗೊಂದಲ ಸೃಷ್ಟಿಯಾದ ಬೆನ್ನಲ್ಲೇ ಈ ಆದೇಶವನ್ನು ವಾಪಸ್‍ ಪಡೆದು ತಿವ್ರ ಮುಜುಗರಕ್ಕೆ ಒಳಗಾಯಿತು. ಭಾರತೀಯ ಇತಿಹಾಸದಲ್ಲಿ ರಿವರ್ಸ್‍ ಬ್ಯಾಂಕ್ ಈ ರೀತಿ ಗೊಂದಲ ಉಂಟು ಮಾಡಿದ್ದು ಇದೇ ಮೊದಲು ಎನ್ನಲಾಗುತ್ತಿದೆ. ಆದರೆ ನೋಟು ಬ್ಯಾನ್ ಆದಾಗಿನಿಂದಲೂ ಇಲ್ಲಿಯವರೆಗೆ ಸುಮಾರು 45 ದಿನಗಳು ಕಳೆದು ಹೋಗಿದ್ದು, ರಿಸರ್ವ್ ಬ್ಯಾಂಕ್ 60 ಅಧಿಸೂಚನೆ ಹೊರಡಿಸಿದೆ. ಅಂದರೆ ದಿನಕ್ಕೆ ಒಂದಕ್ಕಿಂತಲೂ ಹೆಚ್ಚು ಬಾರಿ ಅಧಿಸೂಚನೆ ಹೊರಡಿಸಿರುವುದು ಆರ್‍ಬಿಐ ಗೊಂದಲ ಸ್ಪಷ್ಟ ಉದಾಹರಣೆಯಾಗಿದೆ.

ನ.8ರಿಂದ ಇಲ್ಲಿಯವರೆಗೆ ಆರ್‍ಬಿಐ ಹೊರಡಿಸಿದ ಅಧಿಸೂಚನೆಗಳ ವಿವರ ಇಲ್ಲಿದೆ.

ನವೆಂಬರ್‍ 8
ಪ್ರಧಾನಿ ಹಳೆ ನೋಟುಗಳ ರದ್ದು ಮಾಡಿದ ಪ್ರಕಟಣೆಯನ್ನು ಎಲ್ಲಾ ಬ್ಯಾಂಕ್‍ಗಳಿಗೆ ಕಳುಹಿಸಿಕೊಟ್ಟಿತು.
ಕೌಂಟರ್‍ಗಳಲ್ಲಿ 4000 ರೂ,ವರೆಗೆ ಹಳೆ ನೋಟುಗಳ ಬದಲಾವಣೆ ಮಾಡಿಕೊಳ್ಳುವುದು ಹಾಗೂ 10 ಸಾವಿರ ರೂ.ವರೆಗೆ ವಾರಕ್ಕೆ 20 ಸಾವಿರ ಮೀರದಂತೆ ಡ್ರಾ ಮಾಡಲು ಹಾಗೂ ಎಟಿಎಂಗಳಲ್ಲಿ 2000ವರೆಗೆ ಹಣ ಪಡೆಯಲು ಅವಕಾಶ ಮಾಡಿಕೊಡಲು ಬ್ಯಾಂಕ್‍ಗಳಿಗೆ ಸೂಚನೆ.
ಆರ್‍ಬಿಐ ಇಡೀ ದಿನ ಜನಸಾಮಾನ್ಯರ ಪ್ರಶ್ನೆಗಳಿಗೆ ಉತ್ತರಿಸಲು ಆಗದೇ ಡಿಸೆಂಬರ್‍ 30ರವರೆಗೆ ಹಣ ಬದಲಾವಣೆಗೆ ಅವಕಾಶ ಇದೆ ಎಂದು ಅಧಿಸೂಚನೆ ಹೊರಡಿಸಿತು.
ಬ್ಯಾಂಕ್‍ ಮತ್ತು ಎಟಿಎಂಗಳು ಡಿಸೆಂಬರ್‍ 9ರಂದು ತೆರೆಯುವುದಿಲ್ಲ ಎಂದು ಪ್ರಕಟಿಸಿತು.
ನವೆಂಬರ್ 9
ಹೊಸ 500 ಮತ್ತು 2000 ನೋಟುಗಳ ಗುರುತುಗಳನ್ನು ಪ್ರಕಟಿಸಿದ್ದು ಅಲ್ಲದೇ ಸಾರ್ವಜನಿಕ ಪ್ರಕಟಣೆ ಮಾಡುವಂತೆ ಬ್ಯಾಂಕ್‍ಗಳಿಗೆ ಸೂಚಿಸಿತು.
ಎಟಿಎಂಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ 100ರ ನೋಟುಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಬ್ಯಾಂಕ್‍ಗಳಿಗೆ ಸೂಚನೆ ನೀಡಿತು.
ಡಿ.12 ಮತ್ತು 13 (ಶನಿವಾರ-ಭಾನುವಾರ) ಬ್ಯಾಂಕ್‍ಗಳನ್ನು ತೆರೆದು ಕಾರ್ಯ ನಿರ್ವಹಿಸಲು ಸೂಚನೆ
ನವೆಂಬರ್ 10
ಇಂಟರ್‍ನೆಟ್‍ನಲ್ಲಿ ಹಣ ವರ್ಗಾವಣೆ, ಅಂಚೆ ಕಚೇರಿ, ವಿಮಾನ ನಿಲ್ದಾಣ ಶುಲ್ಕ, ಬಿಳಿ ಲೇಬಲ್‍ ಇರುವ ಎಟಿಎಂಗಳಲ್ಲಿ ಪ್ರತಿದಿನ 10000 ಬಳಕೆ ಮಿತಿ ಇಲ್ಲ ಎಂದು ಸ್ಪಷ್ಟನೆ
ಡಿ.12 ಮತ್ತು 13ರಂದು ಎನ್ಇಎಫ್‍ಟಿ (ರಾಷ್ಟ್ರೀಯ ಎಲೆಕ್ಟ್ರಾನಿಕ ನಿಧಿ ವರ್ಗಾವಣೆ), ಆರ್‍ಟಿಜಿಎಸ್‍ (ರಿಯಲ್‍ ಟೈಮ್ ಗ್ರಾಸ್‍ ಸೆಟ್ಲ್‍ಮೆಂಟ್ ಸಿಸ್ಟಮ್) ಮತ್ತು ಚೆಕ್‍ಗಳ ಕ್ಲಿಯರೆನ್ಸ್‍ಗೆ ಸೂಚನೆ
ನವೆಂಬರ್ 11
ವಿದೇಶೀ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರೀಪೇಯ್ಡ್‍ ಹಣ ಬದಲಾವಣೆ ಮಾಡಿಕೊಡಲು ಆದೇಶ
ಬ್ಯಾಂಕ್‍ಗಳ ಲಿಖಿತ ಮನವಿ ಹಿನ್ನೆಲೆಯಲ್ಲಿ ಸರಕಾರಿ ಸಂಸ್ಥೆಗಳಿಗೆ 10 ಸಾವಿರ ಮೇಲ್ಪಟ್ಟು ಹಣ ಡ್ರಾ ಮಾಡಲು ಅವಕಾಶ.
ಕೌಂಟರ್‍ಗಳಲ್ಲಿ ಹಣ ಜಮೆ ಮಾಡಿದ ಬ್ಯಾಂಕ್‍ ಖಾತೆಗಳು ಹಾಗು ಮೊತ್ತದ ಪ್ರಮಾಣದ ವಿವರ ನೀಡುವಂತೆ ಸೂಚನೆ
ಬ್ಯಾಂಕ್‍ಗಳ ಮೇಲೆ ಭಾರೀ ಒತ್ತಡ ಬಿದ್ದ ಹಿನ್ನೆಲೆಯಲ್ಲಿ ತಾಳ್ಮೆಯಿಂದ ಕಾರ್ಯ ನಿರ್ವಹಿಸಲು ಹಾಗೂ ಸಾಧ್ಯವಾದಷ್ಟು ಹಣ ಚಲಾವಣೆಗೆ ಕ್ರಮ ಕೈಗೊಳ್ಳಲು ಸೂಚನೆ
ನವೆಂಬರ್ 12
ಹಣ ಪಾವತಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸಾರ್ವಜನಿಕರಿಗೆ ಕೋರಿಕೆ
ನವೆಂಬರ್‍ 13
ಹಣ ಬದಲಾವಣೆಗೆ ಇದ್ದ ಮಿತಿಯನ್ನು 4000ದಿಂದ 4500ಕ್ಕೆ ಏರಿಕೆ. ಎಟಿಎಂಗಳಲ್ಲಿ 2500ರೂ.ವರೆಗೂ ಹಣ ಪಡೆಯಲು ಅವಕಾಶ, ವಾರದ ಹಣ ಡ್ರಾ ಮಿತಿ 24000ಕ್ಕೆ ಏರಿಕೆ
ಬ್ಯಾಂಕ್ ಅಕೌಂಟ್‍ ಮತ್ತು ಎಟಿಎಂಗಳಲ್ಲಿ ಹಣದ ವಹಿವಾಟು ಕುರಿತ ಖಾತೆಗಳ ವಿವರ ಪ್ರತಿದಿನ ಸಲ್ಲಿಸುವಂತೆ ಆದೇಶ
ನವೆಂಬರ್ 14
ನವೆಂಬರ್‍ 10ರಿಂದ 30ರವರೆಗೆ ಎಟಿಎಂ ಬಳಕೆಗೆ ಯಾವುದೇ ಶುಲ್ಕ ವಿಧಿಸದಂತೆ ಬ್ಯಾಂಕ್‍ಗಳಿಗೆ ಸೂಚನೆ
ಸಹಾಯಕ ಗವರ್ನರ್‍ ಎಸ್‍.ಎಸ್‍. ಮುಂದ್ರಾ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದ ಆರ್‍ಬಿಐ, ಎಟಿಎಂಗಳ ಮುಂದೆ ಭಾರೀ ಜನದಟ್ಟಣೆಗೆ ವಿವರ ನೀಡಲು ಆದೇಶಿಸಿತು.
ಕರೆಂಟ್‍ ಅಕೌಂಟ್‍ ಹೊಂದಿರುವವರು ಹೊಸ 2000 ನೋಟುಗಳಲ್ಲಿ ವಾರಕ್ಕೆ 50 ಸಾವಿರವರೆಗೆ ಹಣ ಡ್ರಾ ಮಾಡಲು ಅವಕಾಶ.
ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ನಿವೃತ್ತ ನೌಕರರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳುವಂತೆ ಸೂಚನೆ
ಪ್ಲಾಂಟೇಶನ್ಸ್‍, ಸಕ್ಕರೆ ಕಾರ್ಖಾನೆ ನೌಕರರು, ದಿನಗೂಲಿ ನೌಕರರು ಮುಂತಾದವರಿಗೆ ಬ್ಯಾಂಕ್‍ ಖಾತೆ ತೆರೆಯಲು ಅವಕಾಶ ನೀಡಲು ಸೂಚನೆ
ನವೆಂಬರ್‍ 15
ಕೌಂಟರ್‍ಗಳಲ್ಲಿ ಹಣ ಬದಲಾವಣೆ ಮಾಡಿಕೊಳ್ಳುವವರ ಬೆರಳಿಗೆ ಶಾಯಿ ಹಾಕಲು ಸೂಚನೆ
ನವೆಂಬರ್‍ 16
50 ಸಾವಿರ ಮೇಲ್ಪಟ್ಟು ಹಣ ಜಮೆ ಮಾಡುವವರ ಪ್ಯಾನ್‍ ಸಂಖ್ಯೆ ಸಂಗ್ರಹಿಸಲು ಬ್ಯಾಂಕ್‍ಗಳಿಗೆ ಆದೇಶ
ನವೆಂಬರ್ 17
ಹಣ ಡ್ರಾ ಮಿತಿಯನ್ನು ಮತ್ತೆ 2000 ರೂ.ಗೆ ಇಳಿಸಲಾಯಿತು.
ಗ್ರಾಹಕರು ತಾಳ್ಮೆ ವಹಿಸಬೇಕು. ಹಣದ ಕೊರತೆ ಇಲ್ಲ ಎಂದು ಸಾರ್ವಜನಿಕರಲ್ಲಿ ಮನವರಿಕೆ
ನವೆಂಬರ್‍ 18
ಸಣ್ಣ ಅಂಗಡಿ ಮಾಲೀಕರು ಹೆಚ್ಚು ಶುಲ್ಕ ಇಲ್ಲದೇ 2000 ಮಿತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
ನವೆಂಬರ್‍ 20
ಎಟಿಎಂಗಳಲ್ಲಿ 2500 ರೂ. ಡ್ರಾ ಮಿತಿ ಕಡಿಮೆ ಮಾಡಲು ನಿರಾಕರಣೆ
ನವೆಂಬರ್‍ 21
ಹಣ ಬದಲಾವಣೆ ಹಾಗೂ ಖಾತೆಗಳಿಗೆ ಜಮೆಯಿಂದ 5.44 ಶತಕೋಟಿ ಹಳೆಯ ನೋಟುಗಳು ಶೇಖರಣೆ ಆಗಿವೆ ಎಂದು ಪ್ರಕಟಣೆ
ಸಾಲ ಮತ್ತು ಖಾತೆಗಳಿಂದ ರೈತರು ವಾರಕ್ಕೆ 25,000ವರೆಗೂ ಡ್ರಾ ಮಾಡಲು ಅವಕಾಶ
ಎಪಿಎಂಸಿ ಮತ್ತು ಮಂಡಿಗಳು ಕರೆಂಟ್‍ ಅಕೌಂಟ್‍ನಲ್ಲಿ ವಾರಕ್ಕೆ 50,000 ರೂ.ವರೆಗೂ ಡ್ರಾ ಮಾಡಲು ಅವಕಾಶ
ನವೆಂಬರ್‍ 22
ಪ್ರೀಪೇಯ್ಡ್‍ ಸೇವೆಗಳಿಗೆ 10,000 ಬದಲು 20000 ರೂ.ಗೆ ಮಿತಿ ಹೆಚ್ಚಳ
ನವೆಂಬರ್‍ 23
ಜನ್‍ಧನ್‍ ಖಾತೆಗಳಿಗೆ ಹಳೆಯ ನೋಟುಗಳನ್ನು ಪಡೆಯಬಾರದು ಎಂಬ ಸೂಚನೆ
ನವೆಂಬರ್‍ 24
ಬ್ಯಾಂಕ್‍ಗಳಲ್ಲಿ ಹಳೆ ನೋಟುಗಳ ಬದಲಾವಣೆ ನಿಲ್ಲಿಸಿ, ಆರ್‍ಬಿಐಗೆ ಮಾತ್ರ ಅವಕಾಶ ಸೀಮಿತಗೊಳಿಸಲಾಯಿತು.
ಪಿಂಚಣಿದಾರರು ಮತ್ತು ಯೋಧರಿಗೆ ಆದ್ಯತೆ ಮೇಲೆ ಸೇವೆ ನೀಡಲು ಸೂಚನೆ
ನಿಶ್ಚಿತ ಠೇವಣಿ ಹಾಗೂ ಲಾಕರ್‍ಗಳಲ್ಲಿ ಅಲ್ಲದೇ ವಿವಿಧ ಶಾಖೆಗಳಲ್ಲಿ ಇರಿಸಿದ ಹಳೆ ನೋಟುಗಳ ಬದಲಾವಣೆಗೆ ಅವಕಾಶ ನೀಡಲು ಆದೇಶ
ನವೆಂಬರ್‍ 25
ಭಾರತಕ್ಕೆ ಭೇಟಿ ನೀಡಿದ ವಿದೇಶಿಯರಿಗೆ ವಾರಕ್ಕೆ 5 ಸಾವಿರ ರೂ. ಡ್ರಾ ಮಿತಿ
ವಾರಕ್ಕೆ ಡ್ರಾ ಮಿತಿ 24ಕ್ಕೆ ಬದಲಾವಣೆ
ನವೆಂಬರ್‍ 26
ಸೆ.16ರಿಂದ ನ.11ರವರೆಗೆ ಹೆಚ್ಚುವರಿ ಹಣದ ಸಂಗ್ರಹ ಹಾಗೂ ಶೇ.100ರಷ್ಟು ಬಳಕೆಯಾದ ಹಣದ ವಿವರ ಸಲ್ಲಿಸುವಂತೆ ಪ್ರಕಟಣೆ
ನವೆಂಬರ್ 27
ಜಿಲ್ಲಾ ಮಟ್ಟದಲ್ಲಿ ಹಣ ಬದಲಾವಣೆ ಪ್ರಾರಂಭಕ್ಕೆ ಆದೇಶ.
ನವೆಂಬರ್‍ 28
ನ.10ರಿಂದ 27ರವರೆಗೆ ಬ್ಯಾಂಕ್‍ಗಳ ಮೂಲಕ 8.45 ಸಾವಿರ ಕೋಟಿ ರೂ. ಸಂಗ್ರಹವಾದ ಬಗ್ಗೆ ಪ್ರಕಟಣೆ
ವಾರಕ್ಕೆ 24 ಸಾವಿರ ರೂ. ಡ್ರಾ ಮಾಡಿದವರ ವಿವರ ಸಂಗ್ರಹಕ್ಕೆ ಸೂಚನೆ
ನವೆಂಬರ್ 30
ಜನ್‍ಧನ್‍ ಖಾತೆಯಿಂದ ಹಣ ಡ್ರಾ ಮಾಡುವ ಮಿತಿಯನ್ನು ತಿಂಗಳಿಗೆ 10,000 ಸೀಮಿತಗೊಳಿಸಿತು.
ಜನ್‍ಧನ್‍ ಖಾತೆಯಿಂದ ಹೆಚ್ಚು ಹಣ ಡ್ರಾ ಮಾಡಿದವರ ವಿವರ ನೀಡಲು ಬ್ಯಾಂಕ್‍ಗಳಿಗೆ ಸೂಚನೆ
ಡಿಸೆಂಬರ್‍ 1
ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಮಾರ್ಗಸೂಚಿ ಅನುಸರಿಸದೇ ಆರ್‍ಬಿಐ ಅಧಿಕೃತವಾಗಿ ನೀಡಿದ ಮಾರ್ಗಚೂಚಿಯನ್ನಷ್ಟೇ ಪಾಲಿಸಲು ಸೂಚನೆ
ಡಿಸೆಂಬರ್ 2
ನಗದು ಬಳಕೆ ಮಿತಿಯಿಂದ ಮಾರುಕಟ್ಟೆ ಸುಸ್ಥಿರ ಸ್ಕೀಮ್ (ಎಂಎಸ್ಎಸ್‍) 6 ಸಾವಿರ ಕೋಟಿಯಿಂದ 300 ಶತಕೋಟಿಗೆ ಇಳಿಕೆ
ಬ್ಯಾಂಕ್‍ಗಳಲ್ಲಿನ ವಂಚನೆ ತಡೆಯಲು ಬ್ಯಾಂಕ್‍ಗಳು ತಮ್ಮ ಶಾಖೆಗಳಿಗೆ ಸಮಾನವಾಗಿ ಹಣ ಪೂರೈಸುವಂತೆ ಸಲಹೆ
ಡಿಸೆಂಬರ್ 6
ಬ್ಯಾಂಕ್‍ಗಳಿಗೆ ಬಂದ ದೂರುಗಳಲ್ಲಿ ವಿಶೇಷವಾದುದು ಇದ್ದರೆ ಗಮನಕ್ಕೆ ತರಲು ಸಲಹೆ
ಡಿಸೆಂಬರ್ 12
ಬ್ಯಾಂಕ್‍ಗಳು ಹಣ ಬದಲಾವಣೆ ಪತ್ತೆಯಾದ ನಕಲಿ ನೋಟುಗಳ ವಿವರಗಳನ್ನು ಪ್ರತಿದಿನ ನೀಡಬೇಕು. ಅದರಲ್ಲೂ ನ.10ರಿಂದ 30ರವರಗೆ ಪೂರ್ಣ ವಿವರ ನೀಡುವಂತೆ ಸೂಚನೆ.
ಡಿಸೆಂಬರ್‍ 13
ನೋಟುಗಳ ಅಕ್ರಮ ತಡೆಯಲು ಹಾಗೂ ಜಾರಿ ನಿರ್ದೇಶನಲಾಯದ ತನಿಖೆಗೆ ಸಹಾಯವಾಗುವ ಉದ್ದೇಶದಿಂದ ಸಿಸಿಟಿವಿ ದೃಶ್ಯಗಳನ್ನು ಸಂರಕ್ಷಿಸಬೇಕು.
ಡಿಸೆಂಬರ್‍ 15
ನವೆಂಬರ್‍ 9ರಿಂದ 2ಲಕ್ಷಕ್ಕಿಂತ ಹೆಚ್ಚು ಹಣ ಜಮೆ ಮಾಡಿದ ಹಾಗೂ 5ಲಕ್ಷಕ್ಕಿಂತ ಹೆಚ್ಚು ಹಣ ಜಮೆಯಾದ ಖಾತೆಗಳಿಂದ ಹಣ ಡ್ರಾಗೆ ತಡೆ ನೀಡುವಂತೆ ಆದೇಶ
ಡಿಸೆಂಬರ್‍ 17
ವ್ಯಾಪಾರಿಗಳು ಜ.1ರಿಂದ ಮಾರ್ಚ್31ರವರಗೆ ಡೆಬಿಟ್‍ ಅಥವಾ ಕ್ರೆಡಿಟ್‍ ಕಾರ್ಡ್ ಮೂಲಕ ಹಾಗೂ ಸಣ್ಣ ಮೊತ್ತವನ್ನು ಮೊಬೈಲ್‍ಗಳ ಮೂಲಕ ನಡೆಸಲು ಸೂಚನೆ
ಡಿಸೆಂಬರ್‍ 19
ಹಳೆಯ 500 ಮತ್ತು 1000 ನೊಟುಗಳು 5000 ರೂ. ಮೇಲ್ಪಟ್ಟು ಒಂದು ಬಾರಿ ಮಾತ್ರ ಜಮಾ ಮಾಡಲು ಅವಕಾಶ.
ಬ್ಯಾಂಕ್‍ಗಳು 500 ಮತ್ತು 1000 ನೋಟುಗಳಲ್ಲಿ ಹಣ ಪಡೆಯಬಹುದು ಎಂದು ಸ್ಪಷ್ಟನೆ ನೀಡಿದ ಆರ್‍ಬಿಐ
ಡಿಸೆಂಬರ್ 21
ಹಳೆ ನೋಟುಗಳಲ್ಲಿ 5000 ರೂ. ಮೇಲ್ಪಟ್ಟು ಒಮ್ಮೆ ಮಾತ್ರ ಜಮಾ ಮಾಡಬಹುದು ಎಂಬ ನಿಯಮವನ್ನು ವಾಪಸ್‍ ಪಡೆದ ಆರ್‍ಬಿಐ, ಗ್ರಾಹಕರ ಕಾಯ್ದೆ ಅನ್ವಯ ಎಷ್ಟು ಬೇಕಾದರೂ ಜಮೆ ಮಾಡಬಹುದು ಎಂದು ಮತ್ತೊಂದು ಅಧಿಸೂಚನೆ ಹೊರಡಿಸಿತು.