ಎರಡು ಸಾವಿರ ರೂ. ನೋಟ್ ಮುದ್ರಣ ಸ್ಥಗಿತಕ್ಕೆ ಕಾರಣ ನೀಡಿದ RBI; ಕಪ್ಪುಹಣ ತಡೆಗೆ ನೋಟ್ ಮುದ್ರಣ ಸ್ಥಗಿತಗೊಳಿಸಿದೆ ಅಂತೆ.!

0
191

ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿ ಹಣದ ದಿಕ್ಕನೆ ಬದಲಿಸಿ 2000 ಮೌಲ್ಯದ ನೋಟ್ ಬಳಕೆಗೆ ತಂದಿರುವ ಉದ್ದೇಶ ಕಪ್ಪು ಹಣವನ್ನು ಬಯಲಿಗೆ ತರಬೇಕು ಎನ್ನುವ ಉದ್ದೇಶದಿಂದ , ಆದರೆ ಅದೇ ಎರಡು ಸಾವಿರ ರೂ. ನೋಟನ್ನು ಮುಚ್ಚಿಡುವವರಿಗೆ ಇನ್ನಷ್ಟು ಅನುಕೂಲವಾಗಿತು, ಮತ್ತೆ ಕಪ್ಪು ಹಣ ಸಂಗ್ರಹವಾಗುತ್ತಿದೆ ಎನ್ನುವ ಸುದ್ದಿ ಎಲ್ಲಡೆ ಹರಿದಾಡುತ್ತಿದ್ದು. 2,000 ರೂ ನೋಟುಗಳ ಮುದ್ರಣ ಸ್ಥಗಿತಗೊಂಡಿದೆ ಈ ಕುರಿತು ಆರ್‌ಟಿಐ ಉತ್ತರಿಸಿದ್ದು ಕಪ್ಪು ಹಣ ನಿಯಂತ್ರಿಸಲು ಮುದ್ರಣ ಸ್ಥಗಿತಗೊಳಿಸಿದೆ ಎಂದು ತಿಳಿಸಿದೆ.

Also read: ಕ್ರಿಕೆಟ್​ ಸಾಮ್ರಾಜ್ಯವನ್ನೇ ಆಳಲು ಮುಂದಾದ ಸೌರವ್ ಗಂಗೂಲಿ; ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ, ಅಮಿತ್ ಶಾ ಪುತ್ರನಿಗೆ ಕಾರ್ಯದರ್ಶಿ ಪಟ್ಟ??

ಹೌದು ಕಳೆದ ಕೆಲವು ತಿಂಗಳುಗಳಿಂದ ಎಟಿಎಂಗಳು ಕೇವಲ 2,000 ರೂ ನೋಟುಗಳನ್ನು ಏಕೆ ವಿತರಿಸುತ್ತಿವೆ ಎಂದು ನೀವು ಯೋಚಿಸುತ್ತಿದ್ದೀರಾ? ಹೆಚ್ಚಿನ ಮೌಲ್ಯದ ನೋಟಿನ ಮುದ್ರಣವನ್ನು ನಿಲ್ಲಿಸಿದ ಕಾರಣ, ಆರ್‌ಟಿಐ ಪ್ರಶ್ನೆಗೆ ಉತ್ತರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದ್ದು. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್ ಪ್ರೈವೇಟ್ ಲಿಮಿಟೆಡ್ ಈ ಹಣಕಾಸು ವರ್ಷದಲ್ಲಿ 2,000 ರೂ.ಗಳ ಒಂದು ನೋಟನ್ನು ಮುದ್ರಿಸಿಲ್ಲ ಎಂದು ಆರ್‌ಟಿಐ ಉತ್ತರಿಸಿದೆ ತಜ್ಞರು ಹೇಳುವಂತೆ, ಕಡಿಮೆ ಮೌಲ್ಯದ ನೋಟುಗಳ ಮುದ್ರಣವನ್ನು ನಿಲ್ಲಿಸುವ ಕ್ರಮವು ಸುಲಭವಾದ ಸಂಗ್ರಹಣೆಯನ್ನು ತಡೆಗಟ್ಟುವ ಪ್ರಯತ್ನವಾಗಿ ಕಂಡುಬಂದಿದೆ, ಇದು ಕಪ್ಪು ಹಣದ ಹರಿವನ್ನು ತಡೆಯುವ ಸರ್ಕಾರದ ಉಪಕ್ರಮಗಳನ್ನು ಧಿಕ್ಕರಿಸಿತು.

Also read: ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರಕ್ಕೆ ಯುವಕರು ಕೆಲಸ ಕೇಳಿದರೆ ಚಂದ್ರನನ್ನು ತೋರಿಸುತ್ತಿದೆ; ರಾಹುಲ್ ಗಾಂಧಿ

ಅದರಂತೆ ಇಂಡಿಯನ್ ಎಕ್ಸ್ ಪ್ರೆಸ್ ಆರ್ ಟಿಐ ಅರ್ಜಿಯಡಿ ಕೇಳಿದ ಪ್ರಶ್ನೆಗೆ ಆರ್ ಬಿಐ ಈ ಮಾಹಿತಿ ನೀಡಿರುವುದಾಗಿ ತಿಳಿಸಿದೆ. ಪ್ರಸಕ್ತ ಸಾಲಿನಲ್ಲಿ 2000 ರೂಪಾಯಿ ಮುಖಬೆಲೆಯ ಒಂದೇ ಒಂದು ನೋಟನ್ನು ಮುದ್ರಿಸಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ ತಿಳಿಸಿದೆ. ದುಬಾರಿ ಮುಖಬೆಲೆಯ ನೋಟುಗಳ ಮುದ್ರಣ ನಿಲ್ಲಿಸುವ ಮೂಲಕ ಕಪ್ಪು ಹಣದ ವಹಿವಾಟಿಗೆ ಕಡಿವಾಣ ಹಾಕಲು ನೆರವಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. 2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಲ್ಲಿ ಕಡಿಮೆಯಾಗುವ ಮೂಲಕ ಹೆಚ್ಚಿನ ಕಪ್ಪು ಹಣದ ವಹಿವಾಟಿಗೆ ಕಷ್ಟವಾಗಲಿದೆ.

ನೋಟು ಮುದ್ರಣ ನಿಲ್ಲಿಸುವ ಕ್ರಮ, ನೋಟು ನಿಷೇಧಕ್ಕಿಂತ ಉತ್ತಮವಾದದ್ದು. ಇದರಿಂದ ನಮಗೆ ಯಾವುದೇ ತೊಂದರೆಯಾಗುವುದಿಲ್ಲ, ಕೇವಲ ನೋಟಿನ ಚಲಾವಣೆ ಕಡಿಮೆಯಾಗಲಿದೆ ಎಂದು ಆರ್ಥಿಕ ತಜ್ಞ ನಿತಿನ್ ದೇಸಾಯಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಬಹುಶಃ ಜನರು ಹೆಚ್ಚು, ಹೆಚ್ಚು ನಗದನ್ನು ಕೂಡಿಡುವುದು ಅಥವಾ ಕಪ್ಪು ಹಣವನ್ನು ಹೊಂದುವುದನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಿರಬೇಕೆಂದು ಮತ್ತೊಬ್ಬ ಆರ್ಥಿಕ ತಜ್ಞ, ಲೇಖಕ ಶೇರ್ ಸಿಂಗ್ ತಿಳಿಸಿದ್ದಾರೆ. ಅಲ್ಲದೇ ನಗದು ವಹಿವಾಟಿಗಿಂತ ಜನರು ಹೆಚ್ಚು, ಹೆಚ್ಚು ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ಕೊಡಲು ಸರಕಾರ ಚಿಂತಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Also read: ಸಮುದ್ರ ದಡದಲ್ಲಿ ಕಸ ತೆಗೆಯುವ ಮೂಲಕ ಜನರಿಗೆ ಸ್ವಚ್ಛತೆಯ ಸಂದೇಶ ಸಾರಿದ ಪ್ರಧಾನಿ ಮೋದಿ ಅವರ ವೀಡಿಯೋ ವೈರಲ್.!

2016-17ನೇ ಸಾಲಿನಲ್ಲಿ 3,542.991 ಮಿಲಿಯನ್ ನಷ್ಟು 2000 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿರುವುದಾಗಿ ಆರ್ ಬಿಐ ನೀಡಿರುವ ಉತ್ತರದಲ್ಲಿ ತಿಳಿಸಿದೆ. 2017-18ನೇ ಸಾಲಿನಲ್ಲಿ 111.507 ಮಿಲಿಯನ್ (2000 ಮುಖಬೆಲೆಯ) ನೋಟುಗಳನ್ನು ಮುದ್ರಿಸಲಾಗಿತ್ತು. 2018-19ನೇ ಸಾಲಿನಲ್ಲಿ ಕೇವಲ 46.690 ಮಿಲಿಯನ್ (2000 ಮುಖಬೆಲೆಯ) ನೋಟುಗಳನ್ನಷ್ಟೇ ಮುದ್ರಿಸಲಾಗಿತ್ತು ಎಂದು ವಿವರಿಸಿದೆ.