ಆರ್‌ಬಿಐ ಮಹತ್ವದ ನಿರ್ಧಾರ; ಸ್ವಂತ ಮನೆ, ಕಾರು ಖರಿಧಿಸುವ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ..

0
704

ಆರ್‌ಬಿಐ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, 2019-20ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಹಣಕಾಸು ನೀತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಇಂದು ಪ್ರಕಟಿಸಿದ್ದು, ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಸಿಹಿಸುದ್ದಿ ನೀಡಿದೆ. ಮೋದಿ ಸರ್ಕಾರಕ್ಕೆ ವರದಾನವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೆಲ್ಲದರ ನಡುವೆ RBI ನಿರ್ಧಾರದಿಂದ ಏನೇನು ಲಾಭಗಳಿವೆ ಎಂದು ನೋಡೋಣ ಬನ್ನಿ.

Also read: ಖಾಸಗಿ ವಲಯದ ಉದ್ಯೋಗಿಗಳಿಗೆ ಸುಪ್ರಿಂ ಕೋರ್ಟ್ ಮಹತ್ವದ ಆದೇಶ; ಪಿಂಚಣಿಯಲ್ಲಿ ಭಾರಿ ಏರಿಕೆ..

ಹೌದು ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ಇಂದು RBI ಬಡ್ಡಿ ದರ (ರೆಪೋ) ವನ್ನು ಶೇ.0.25ರಷ್ಟು ಕಡಿಮೆ ಮಾಡಿದೆ. RBI ಗೌರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಇಂದು ನಡೆದ ದ್ವಿತೀಯ ಪರಾಮರ್ಶೆ ಸಭೆಯಲ್ಲಿ ಆರು ಸದಸ್ಯರ ಹಣಕಾಸು ನೀತಿ ಸಮಿತಿ 4:2ರ ಅನುಪಾತದಲ್ಲಿ ಈ ಬಡ್ಡಿ ದರ ಏರಿಕೆಗೆ ಸಮ್ಮತಿ ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ RBI ಆರ್ಥಿಕ ಪರಾಮರ್ಶೆಗೆ ಸಂಬಂಧಿಸಿದ ಸಭೆಯಲ್ಲಿ ಆರ್ಥಿಕತೆ ಬಲಗೊಳಿಸುವ ತೀರ್ಮಾನ ಹೊರಬಿದ್ದಿದೆ. ರೆಪೋ ದರವನ್ನು ಶೇ.0.25ರಷ್ಟು ಇಳಿಕೆ ಮಾಡಲಾಗಿದೆ.

ರೆಪೋ ದರ ಕಡಿತಗೊಂಡ ಪರಿಣಾಮ ಬ್ಯಾಂಕಿಗೆ ಪಾವತಿಸುವ ಇಎಂಐ ಇಳಿಕೆಯಾಗಲಿದೆ.

ಇದರಿಂದ ರೆಪೋ ದರ ಈ ಮೊದಲಿದ್ದ ಶೇ. 6.25 ರಿಂದ ಶೇ.6ಕ್ಕೆ ಇಳಿಕೆಯಾಗಿದ್ದು, ಮನೆ ಹಾಗೂ ಕಾರು ಖರೀದಿ ಮಾಡುವವರಿಗೆ ಸಹಾಯವಾಗಲಿದೆ. ಗೃಹ ಸಾಲದ ಇಎಂಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ. ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಬಳಿಕ ಹೊಸದಾಗಿ ನೇಮಕಗೊಂಡಿರುವ ಶಕ್ತಿಕಾಂತ್‍ದಾಸ್ ಅವರ ನೇತೃತ್ವದಲ್ಲಿ ಫೆಬ್ರವರಿಯಲ್ಲಿ ನಡೆದ ಮೊದಲ ಎಂಪಿಸಿ ಸಭೆಯಲ್ಲಿ ರೆಪೋ ದರ ಶೇ.25 ಮೂಲಾಂಕ ಕಡಿತಗೊಂಡಿತ್ತು. 17 ತಿಂಗಳ ಬಳಿಕ ರೆಪೋ ದರವನ್ನು ಆರ್‌ಬಿಐ ಕಡಿತಗೊಳಿಸಿತ್ತು.

Also read: ಕ್ಯಾನ್ಸರ್ ಖಾಯಿಲೆಯ ಮಾತ್ರೆಗಳು ತುಂಬಾ ದುಬಾರಿ, ಬಡವರಿಗೆ ನೆರವಾಗಲು ಮೋದಿ ಸರ್ಕಾರ 390 ಔಷಧಿಗಳ ಬೆಲೆಯನ್ನು ಕಡಿಮೆ ಮಾಡಿದೆ!!

ಆರ್‌ಬಿಐನ ಆರು ಸದಸ್ಯರ ಪಾಲಿಸಿ ಸಮಿತಿ ಮುಂದೆ ರೆಪೋ ದರ ಇಳಿಕೆ ಸಂಬಂಧಿಸಿದಂತೆ ಮಂಡನೆಯಾಗಿದ್ದ ಪ್ರಸ್ತಾವನೆಗೆ 4:2 ರಷ್ಟು ಮತ ಬಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರವೀಂದ್ರ ದೋಲಾಕಿಯ, ಪಾಮಿ ದುವಾ, ಮೈಕೆಲ್ ಪಾತ್ರ ಮತ್ತು ಗವರ್ನರ್ ಶಕ್ತಿಕಾಂತ್ ದಾಸ್ ಅವರು ನಿರ್ಧಾರರ ಪರ ಮತ ಹಾಕಿದರೆ, ಡೆಪ್ಯೂಟಿ ಗವರ್ನರ್ ವಿರಾಳ್ ಆಚಾರ್ಯ ಮತ್ತು ಚೇತನ್ ಘಾಟ್ಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಎರಡನೇ ತ್ರೈಮಾಸಿಕ ಅವಧಿಯ ಏಪ್ರಿಲ್ ಹಾಗೂ ಜೂನ್‌ನಲ್ಲಿ ಆರ್‌ಬಿಐ ಎರಡು ಸಭೆ ನಡೆಯಲಿದ್ದು, ಬಡ್ಡಿ ದರ ಇಳಿಕೆ ಮಾಡಿ ನೀತಿಗಳನ್ನು ಸಡಿಲಗೊಳಿಸಲು ಮುಂದಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಬಡ್ಡಿದರ ಕಡಿತ ಮಾಡಲು ಕೇಂದ್ರದ ಒತ್ತಡ ಕೂಡ ಇದ್ದು, ಜೂನ್ ಬದಲಿಗೆ ಏಪ್ರಿಲ್‌ನಲ್ಲೇ ಆರ್‌ಬಿಐ ಬಡ್ಡಿದರ ಕಡಿತಗೊಳ್ಳಲಿದೆ ಎನ್ನಲಾಗಿದೆ. ಇದೇ ವೇಳೆ ರಾಯ್ಟರ್ಸ್ ಸುದ್ದಿ ಸಂಸ್ಥೆ ಅರ್ಥಶಾಸ್ತ್ರಜ್ಞರ ಅಭಿಪ್ರಾಯ ಕೂಡ ಸಂಗ್ರಹಿಸಿದ್ದು, ಬಹುತೇಕ ಅರ್ಥಶಾಸ್ತ್ರಜ್ಞರು ದೇಶದ ಸದೃಢ ಆರ್ಥಿಕತೆಗಾಗಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಒಳ್ಳೆಯದು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ ಎನ್ನಲಾಗಿದೆ.

Also read: ಕೇಂದ್ರ ಸರ್ಕಾರದಿಂದ ನೌಕರರ ವರ್ಗಕ್ಕೆ ಮತ್ತೊಂದು ಗಿಫ್ಟ್; ಗ್ರಾಚ್ಯುಟಿ ಮೇಲಿನ ಆದಾಯ ತೆರಿಗೆ ಮಿತಿ ಹೆಚ್ಚಳ..

ರೆಪೋ ದರ, ರಿವರ್ಸ್ ರೆಪೋ ಎಂದರೇನು?

ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು. ರಿವರ್ಸ್ ರೆಪೋ ಎಂದರೆ ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್‌ಬಿಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವಸ್ರ್ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ.

ಒಟ್ಟಾರೆಯಾಗಿ ಸ್ವಂತ ಮನೆ, ಕಾರು ಹೊಂದಬೇಕೆಂಬ ಕನಸು ಕಾಣುತ್ತಿರುವವರಿಗೆ ಆರ್ಬಿಐ ರೆಪೊ ಕಡಿತಗೊಳಿಸಿದ್ದು, ಗೃಹ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ.