ಜನಸಾಮಾನ್ಯರ, ಗೊಂದಲಕರ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಪರಿಹಾರ!!!

0
869

ನವದೆಹಲಿ: ಬ್ಯಾಂಕ್ ಸ್ಥಾಪನೆಗೆ ಆಸಕ್ತಿ ತೋರಿರುವ ಸಂಸ್ಥೆಗಳು ಹೊಸ ಬ್ಯಾಂಕ್ ಅನುಮತಿಗೆ ಸಂಬಂಧಿಸಿದ ಮಾರ್ಗಸೂಚಿ ಕುರಿತು ಮುಂದಿಟ್ಟಿರುವ ಪ್ರಶ್ನೆ ಮತ್ತು ಸಂದೇಹಗಳಿಗೆ ಈ ಮಾಸಾಂತ್ಯ ಅಥವಾ ಮೇ ಮೊದಲ ವಾರದಲ್ಲಿ ಸ್ಪಷ್ಟೀಕರಣವನ್ನು ಅಂತರ್ಜಾಲದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ಪ್ರಕಟಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾತ್ರೊ ರಾತ್ರಿ ಗರಿಷ್ಠ ಮುಖಬೆಲೆಯ ನೋಟಗಳನ್ನು ನಿಷೇಧಿಸಿದ್ದೆ ತಡ, ಜನ ಗಾಬರಿಗೆ ಬಿದ್ದಿರುವುದು ನಿಜ. ಅದಕ್ಕೆ ಕಾರಣ ಜನರಿಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದು. ಅದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ, 500 – 1000 ಮುಖ ಬೆಲೆಯ ನೋಟಗಳನ್ನು ಹಿಡಿದು ಜನ ಬ್ಯಾಂಕ್, ಅಂಚೆ ಕಚೇರಿಯ ಮುಂದೆ ಸಾಲುಗಟ್ಟಿದ್ದಾರೆ. ಈ ನೋಟುಗಳು ಇಂದಿನಿಂದಲೇ ಮೌಲ್ಯ ಕಳೆದುಕೊಂಡಿವೆಯೇ, ನಮ್ಮ ಮುಂದಿನ ಜೀವನ ಹೇಗೆ ಎಂಬ ಸಹಜ ಆತಂಕ ಜನರಲ್ಲಿ ಮನೆಮಾಡಿದೆ. ನೋಟಿನ ವಿನಿಮಯದ ಕುರಿತು ಸಾರ್ವಜನಿಕರಲ್ಲಿ ಇರುವ ಗೊಂದಲಗಳನ್ನು ನಿವಾರಿಸುವ ಉತ್ತರಗಳು ಇಲ್ಲಿವೆ.

ಹಣ ವಿನಿಮಯ ಎಲ್ಲಿ?

ಎಲ್ಲಿ ಹಣ ಬದಲಿಸಿಕೊಳ್ಳಬೇಕು ಎನ್ನುವುದು ಈಗಾಗಲೇ ಹಲವರಿಗೆ ತಿಳಿದಿರಬಹುದು, ಆದರೂ ಕೆಲವರಿಗೆ ಈ ಬಗ್ಗೆ ಗೊಂದಲ ಇದೆ. ನಿಮ್ಮಬಳಿ ಈಗ ಇರುವ ಹಳೆಯ 500 ಮತ್ತು 1000 ರೂ. ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗಳು. ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಹೊಸ ನೋಟುಗಳಿಗೆ ಇಲ್ಲವೆ. ಚಲಾವಣೆಯಲ್ಲಿ ಇರುವ ಇತರ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಬಹುದು.

ಹಣ ಪಡೆಯುವುದು ಹೇಗೆ?

ನೀವು ವಿನಿಮಯದ ಮೊತ್ತದ ಜತೆಗೆ ಅರ್ಜಿಯೊಂದನ್ನು ಭರ್ತಿ ಮಾಡಿ ನೀಡಬೇಕು. ಕೆಲವು ಬ್ಯಾಂಕುಗಳು. ಅಂಚೆ ಕಚೇರಿಗಳು ಈ ಅರ್ಜಿಗಳನ್ನು ವಿತರಿಸುತ್ತಿದೆ, ಮುಂಜಾಗರೂಕತಾ ಕ್ರಮವಾಗಿ ನೀವು ಆರ್ ಬಿಐ ವೆಬ್ ಸೈಟ್ ನಿಂದ ಈ ಅರ್ಜಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಅಂಚೆ ಕಚೇರಿ/ ಬ್ಯಾಂಕುಗಳಿಂದ ಹಣ ಪಡೆಯಲು ದಾಕಲೆ ಬೇಕೆ? ಹಣ ವಿನಿಮಯಕ್ಕೆ ದಾಖಲೆ ಕಡ್ಡಾಯ ನಿಮ್ಮ ಪ್ಯಾನ್ ಕಾರ್ಡ್/ಆಧಾರ್/ ಮತದಾರ ಗುರುತಿನ ಚೀಟಿಯ ಪ್ರತಿಯೊಂದನ್ನು ಸಹಿಮಾಡಿ ನೀಡಬೇಕು. ಆದ್ದರಿಂದ ಹಣ ವಿನಿಮಯಕ್ಕೆ ಹೋಗುವಾಗ ದಾಖಲೆಯ ಪ್ರತಿ ಮರೆಯಬೇಡಿ.

ನನ್ನಬಳಿ ಬ್ಯಾಂಕ್ ಖಾತೆ ಇಲ್ಲವಾದಲ್ಲಿ ಏನು ಮಾಡುಬಹುದು?

ಈಗಲೂ ಕಾಲ ಮಿಂಚಿಲ್ಲ. ಸೂಕ್ತ ದಾಖಲೆಗಳೊಂದಿಗೆ ತೆರಳಿ ಖಾತೆ ತೆರೆಯಬಹುದು.

ಜನ-ಧನಿ ಯೋಜನೆಯಡಿ ತೆರೆಲಾರದ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿಕೊಳ್ಳಬಹುದು?

ಖಂಡಿತ, ಆದರೆ ನಿಯಮದ ಪ್ರಕಾರ ನಿರ್ಧಿಷ್ಟಮೊತ್ತದ ಹಣವನ್ನು ಮಾತ್ರ ಜಮಾ ಮಾಡಿಕೊಳ್ಳಬೇಕು,

ನಗದು ವಿನಿಮಯಕ್ಕಾಗಿ ನಮ್ಮಬ್ಯಾಂಕಿನ ಸ್ವಂತ ಶಾಖೆಗೆ ತೆರಳಬೇಕು?

ನಾಲ್ಕು ಸಾವಿರದವರೆಗಿನ ವಿನಿಮಯಕ್ಕೆ ಯಾವುದೇ ಬ್ಯಾಂಕಿನ ಯಾವುದೇ ಶಾಖೆಗೆ ತೆರಳಬಹುದು, ಆದಕ್ಕೂ ಹೆಚ್ಚಿನ ಮೊತ್ತದ ವಹಿವಾಟಿಗಾಗಿ ನಿಮ್ಮ ಬ್ಯಾಂಕಿನ ಶಾಖೆ ಅಥವಾ ನಿಮ್ಮ ಬ್ಯಾಂಕಿನ ಯಾವುದೇ ಶಾಖೆಗೆ ತೆರಳಬಹುದು.

ಒಂದು ವೇಳೆ ನೀವು ಖಾತೆ ಹೊಂದಿರದ ಬ್ಯಾಂಕಿನಲ್ಲಿ ವಿನಿಮಯ ಮಾಡಿಕೊಳ್ಳಲು ಬಯಸಿದರೆ. ನಿಮ್ಮ ಖಾತೆಯ ಹಣ ವರ್ಗಾಯಿಸಲು ನಿಮ್ಮ ಖಾತೆಯ ದಾಖಲೆಗಳು ಮತ್ತು ನಿಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

ನನ್ನಬಳಿ ಬ್ಯಾಂಕ್ ಖಾತೆಯಿಲ್ಲ, ಸ್ನೇಹಿತರು ಮತ್ತು ಸಂಬಂಧಿಗಳ ಖಾತೆಗೆ ಹಣ ಜಮಾಮಾಡಬಹುದೆ?

ಹೌದು. ಆದರೆ ನೀವು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಖಾತೆಗೆ ಹಣ ಜಮಾ ಮಾಡಬಯಸಿದಲ್ಲಿ ಅವರಿಂದ ಲಿಖಿತ ಸಮ್ಮತಿ ಪತ್ರವನ್ನು ತರಬೇಕು. ವಿನಿಮಯ ಮಾಡುವಾಗ ಖಾತೆದಾರರ ಒಪ್ಪಿಗೆ ಪತ್ರ ಮತ್ತು ನಿಮ್ಮ ಗುರುತಿನ ಚೀಟಿ ತರುವುದು ಕಡ್ಡಾಯ.

ನಾನು ಖದ್ದಾಗಿ ಬ್ಯಾಂಕಿಗೆ ತೆರಳಬೇಕಡ? ನನ್ನ ಪರ ಪ್ರತಿನಿಧಿಯನ್ನು ಕಳಿಸಬಹುದೆ?

ನೀವೇ ಸ್ವತಃ ಬ್ಯಾಂಕಿಗೆ ತೆರಳಿ ವಹಿವಾಟು ನಡೆಸುವುದು ಸೂಕ್ತ, ಒಂದುವೇಳೆ ಸಾಧ್ಯವಾಗದಿದ್ದಲ್ಲಿ ನಿಮ್ಮ ಪ್ರತಿನಿಧಿ ಬಳಿ ಲಿಖಿತ ಸಮ್ಮತಿ ಪತ್ರವಿರಬೇಕು ನೋಟು ವಿನಿಮಯ ಮಾಡಿಕೊಳ್ಳುವ ಸಮಯದಲ್ಲಿ ಪ್ರತಿನಿಧಿಗಳು ಸಮ್ಮತಿ ಪತ್ರದ ಜತೆಗೆ ಅವರ ಗುರುತಿನ ಚೀಟಿಯನ್ನು ಹಾಜರು ಪಡಿಸಬೇಕು.

ಚೆಕ್ ಮೂಲಕ ಹಣ ಪಡೆಯಬಹುದೆ?

ಹೌದು, ಹಣವನ್ನು ಚೆಕ್ ಅಧವಾ ಹಿಂಪಡೆವ ನಮೂನೆ (ವಿತ್ ಡ್ರಾವಲ್ ಸ್ಲಿಪ್) ಯಿಂದ ಹಣ ಪಡೆಯಬಹುದು. ಆದರೆ ದಿನಕ್ಕೆ ಗರಿಷ್ಠ 10 ಸಾವಿರ, ವಾರಕ್ಕೆ ಗರಿಷ್ಠ 20 ಸಾವಿರ ರೂ. ಮಾತ್ರ ಪಡೆಯಬಹುದು. ಈ ಮಿತಿ ನ.24ರವರೆಗೆ ಮುಂದುವರೆಯಲಿದೆ.

ನಗದು ಜಮಾ ಯಂತ್ರ (ಎಟಿಎಂ)ನಿಂದ ನೋಟುಗಳನ್ನು ಖಾತೆಗೆ ಜಮಾ ಮಾಡಬಹುದು?

ಹೌದು, ಮಾಡಬಹುದು. ಗರಿಷ್ಠ ಮುಖಬೆಲೆಯ ನೋಟುಗಳನ್ನು ನಗದು ಜಮಾ ಯಂತ್ರದಿಂದ ಖಾತೆಗೆ ವರ್ಗಾಯಿಸಬಹುದು.

ಗುರುತಿನ ಚೀಟಿಗಳು ಅಂದರೆ ಯಾವುದು?

ಈ ಕೆಳಗಿನ ಯಾವುದನ್ನಾದರು ಗುರುತಿನ ಪತ್ರವಾಗಿ ಬಳಸಿಕೊಳ್ಳಬಹುದು. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಪತ್ರ, ಪಾಸ್ ಫೋರ್ಟ್, ಪ್ಯಾನ್ ಕಾರ್ಡ್, ಸರಕಾರಿ ಇಲಾಖೆಗಳು, ಸರಕಾರಿ ಸ್ವಾಮ್ಯದ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ನೀಡಿರುವ ಗುರುತಿನ ಚೀಟಿ.

ಸದ್ಯಕ್ಕೆನಾನು ಭಾರತದಲ್ಲಿಲ್ಲ, ಏನು ಮಾಡಬಹುದು?

ನಿಮಗೆ ಗೊತ್ತಿರುವ ಯಾರಿಗಾದರೂ ಆಧಿಕೃತ ಸಮ್ಮತಿ ಪತ್ರವನ್ನು ತಲುಪಿಸಿದರೆ ಸಾಕು, ನಿಮ್ಮ ಪರವಾಗಿ ಅವರ ವಿನಿಮಯ ಮಾಡಬಹುದು.

ನಾನೊಬ್ಬ ಎನ್ ಆರ್ ಐ, ನನ್ನ ಬಳಿ ಎನ್ ಆರ್ ಒ (ಅನಿವಾಸಿ ಭಾರತೀಯರ ಸಾಮಾನ್ಯ) ಖಾತೆಯಿದೆ, ನನ್ನಖಾತೆಗೆ ಹಣ ಜಮಾ ಮಾಡಿಕೊಳ್ಳಬಹುದೆ?

ಮಾಡಿಕೊಳ್ಳಬಹುದು. ನಿಮ್ಮ ಖಾತೆಗೆ ಗರಿಷ್ಠ ಮುಖಬೆಲೆಯ ಹಳೆ ನೋಟುಗಳನ್ನು ವಿನಿಮಯ ಮಾಡಿ ಕೊಂಡು ಜಮಾ ಮಾಡಿಕೊಳ್ಳಬಹುದು.

ನಾನೊಬ್ಬ ವಿದೇಶಿ ಪ್ರವಾಸಿ, ನನ್ನಬಳಿ ಇರುವ ನೋಟುಗಳನನ್ನು ಹೆಗೆ ವಿನಿಮಯ ಮಾಡಿಕೊಳ್ಳಬೇಕು?

ಐದು ಸಾವಿರ ರೂ. ಮೌಲ್ಯದ ಹಳೆಯ ನೋಟುಗಳನ್ನು ವಿಮಾನ ನಿಲ್ದಾಣಗಳ ಕೌಂಟರ್ ನಲ್ಲಿ ವಿದೇಶಿ ವಿನಿಮಯ ಮಾಡಿಕೊಳ್ಳಬಹುದು, ಈ ಸೌಲಭ್ಯ ಬದಲಾವಣೆ ಆದೇಶದ 72 ಗಂಟೆಕಾಲ ಲಭ್ಯವಿದ್ದು. ಪ್ರಸ್ತುತ ನೋಟು ಪಡೆದುದರ ಬಗ್ಗೆ ದಾಖಲೆ ಹಾಜರು ಪಡಿಸಬೇಕು.

ಜಮಾಮಾಡಿದ ಸಂಪೂರ್ಣ ಮೊತ್ತದ ಹೊಸ ನೋಟುಗಳನ್ನು ಪಡೆಯಬಹುದೆ?

ಇಲ್ಲ, ನೀವು ಎಷ್ಟೇ ದೊಡ್ಡ ಮೊತ್ತದ ಹಣವನ್ನು ತಂದರೂ ಒಬ್ಬ ವ್ಯಕ್ತಿ ಗರಿಷ್ಠ 4 ಸಾವಿರ ರೂ ಗಳನ್ನು ನಗದು ರೂಪದಲ್ಲಿ ಪಡೆಯಬಹುದು. ಅದಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕು ಖಾತೆಗೆ ಜಮಾ ಮಾಡಿಕೊಳ್ಳಬಹುದು ನಂತರ ಅದನ್ನು ಪ್ರತ್ಯೇಕವಾಗಿ ಬಿಡಿಸಿಕೊಳ್ಳಬಹುದು.

ಜೀವನ ನಿರ್ವಹಣೆಗೆ 4 ಸಾವಿರಕ್ಕಿಂತ ಹೆಚ್ಚಿನ ಹಣ ಬೇಕಾದರೆ ಏನು ಮಾಡಬಢಕು?

ನೀವು ಚೆಕ್, ಎಲೆಕ್ಟ್ರಾನಿಕ್, ಇಂಟರ್ ನೆಟ್ ಬ್ಯಾಂಕಿಂಗ್, ಮೊಬೈಲ್ ವಾಲೆಟ್, ಕ್ರೆಡಿಟ್ ಕಾರ್ಡ್ ಗಳ ಮೂಲಕ ವಹಿವಾಟು ನಡೆಸಬಹುದು.