ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಚೀನಾ ಲಗ್ಗೆ

0
846

೫೦೦ ಮತ್ತು ೧೦೦೦ ನೋಟು ರದ್ದಾದ ನಂತರ ಮಾರುಕಟ್ಟೆ ದರ ಕುಸಿಯುವ ಭೀತಿ ನಡುವೆಯೂ ಚೀನಾ ಮೂಲದ ಎಸ್ ಜಿಡಬ್ಲ್ಯೂ ಸಂಸ್ಥೆ ಬೆಂಗಳೂರು ಮೂಲದ ಫಾರ್ಚುನಾ ರಿಯಲ್ ಎಸ್ಟೇಟ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದು, ೧೦೦ ದಶಲಕ್ಷ ಡಾಲರ್ ಹೂಡಿಕೆ ಮಾಡಲಿದೆ.

ಬೀಜಿಂಗ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಸ್ ಜಿಡ್ಬ್ಲೂ ಸಂಸ್ಥೆ ಪ್ರಸ್ತುತ ೩ ಶತಕೋಟಿ ಡಾಲರ್ ವಹಿವಾಟು ನಡೆಸಿದ್ದು, ಚೀನಾದ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ಒಂದಾಗಿದೆ.

ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಪ್ರಾರಂಭಿಕ ಹಂತವಾಗಿ ಬೆಂಗಳೂರಿನಲ್ಲಿ ೧೦೦ ದಶಲಕ್ಷ ಡಾಲರ್ ಹೂಡಿಕೆ ಮಾಡುತ್ತಿದ್ದೇವೆ. ತಲಾ ೫೦ ದಶಲಕ್ಷ ಡಾಲರ್ ನಂತೆ ಒಂದು ವರ್ಷದಲ್ಲಿ ೨ ಕಂತುಗಳಲ್ಲಿ ವಿನಿಯೋಗಿಸಲಾಗುವುದು ಎಂದು ಕಂಪನಿ ಅಧ್ಯಕ್ಷ ಚೆನ್ ಲೂಯಿ ತಿಳಿಸಿದರು.

ಫಾರ್ಚುನಾ ಗ್ರೂಪ್ ನಿರ್ದೇಶಕ ಎಸ್.ವಿ. ರಾಜೇಶ್ ಕುಮಾರ್, ನೋಟು ರದ್ದತಿಯಿಂದ ದೇಶದೆಲ್ಲೆಡೆ ಶೇ.೨೫ ರಷ್ಟು ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿದಿದ್ದರೂ ಬೆಂಗಳೂರಿನಲ್ಲಿ ಅದರ ಪರಿಣಾಮ ಅಷ್ಟಾಗಿ ಬಿದ್ದಿಲ್ಲ. ಎಸ್ ಜಿ ಡಬ್ಲ್ಯೂ ಬಂಡವಾಳ ಹೂಡಿಕೆಯಿಂದ ಯೋಜನೆಗಳನ್ನು ಶೀರ್ಘವಾಗಿ ಪೂರೈಸಿ ಗ್ರಾಹಕರಿಗೆ ವಿತರಿಸಲು ಸಹಾಯಕವಾಗಿದೆ. ಇದರಿಂದ ಗ್ರಾಹಕರು ನಿಗದಿತ ಅವಧಿಯಲ್ಲಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಫ್ಲಾಟ್ ಖರೀದಿಸಬಹುದಾಗಿದೆ ಎಂದರು.