ನೊಟುಗಳ ಬದಲಾವನೆಯಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರಿ ಹೋಡೆತ ಸಾಧ್ಯತೆ

0
1361

ನವದೆಹಲಿ: ಕಪ್ಪು ಹಣ ಮತ್ತು ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 500, 1000ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ಕ್ರಮದಿಂದಾಗಿ  ದೇಶದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಭಾರಿ ಹೋಡೆತ್ತಕ್ಕೆ ಕಾರಣವಾಗಿದೆ. ಈ ಕಪ್ಪು ಹಣದ ವಹಿವಾಟು ಈ ರೀಯಲ್ ಎಷ್ಟೇಟ್ ನಲ್ಲಿ ತುಂಬಾ ನಡೆಯುತ್ತಿರುತ್ತಿರುತ್ತದೆ. ಅದ್ದರಿಂದ ಗಂಭೀರ ಪರಿಣಾಮ ಉಂಟಾಗಲಿದೆ.

ಇದರಿಂದ ಮಹಾನಗರಗಳಲ್ಲಿ ಫ್ಲ್ಯಾಟ್‌, ನಿವೇಶನ ಹಾಗೂ ಸಿದ್ಧ ಮನೆಗಳ ದರ ಭಾರಿ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆಯಿದೆ. ಸಾಮಾನ್ಯವಾಗಿ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳು ಶೇ.60ರಷ್ಟು ಬಿಳಿ ಹಣ ಹಾಗೂ ಶೇ.40ರಷ್ಟು ಕಪ್ಪು ಹಣ ಪಡೆದು ನಿವೇಶನ, ಫ್ಲ್ಯಾಟ್‌ ಹಾಗೂ ಮನೆಗಳನ್ನು ಮಾರಾಟ ಮಾಡುವ ಪರಿಪಾಠ ಹೊಂದಿದ್ದಾರೆ. ನೋಟುಗಳ ನಿಷೇಧದಿಂದ ಶೇ.40ರಷ್ಟು ಕಪ್ಪುಹಣದ ವಹಿವಾಟಿಗೆ ಬ್ರೇಕ್‌ ಬೀಳಲಿದೆ. ಇದರಿಂದಾಗಿ ಕಪ್ಪು ಹಣದಿಂದ ಆಸ್ತಿ ಖರೀದಿಸುವ ಪ್ರಕ್ರಿಯೆಯೂ ಕುಸಿತವಾಗಲಿದ್ದು, ಬಿಲ್ಡರ್‌ಗಳು ಆತಂಕಕ್ಕೆ ಸಿಲುಕಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ ಹಲವಾರು ಬಿಲ್ಡರ್‌ಗಳ ಹತ್ತಿರ ಈಗಾಗಲೇ 1000, 500 ಮುಖಬೆಲೆಯ ಕಪ್ಪುಹಣವಿದ್ದು, ಅದನ್ನು ಹೇಗೆ ಬ್ಯಾಂಕ್‌ಗಳಲ್ಲಿ ಜಮಾ ಮಾಡಿ ವಿನಿಮಯ ಮಾಡಿಕೊಳ್ಳುವುದು ಎಂಬ ಚಿಂತೆಯಲ್ಲಿ ಅವರಿದ್ದಾರೆ.

ಈ ನೋಟು ನಿಷೇದ ವಿಷಯವಾಗಿ ಆರ್ಥಿಕ ತಜ್ಞರೊಂದಿಗೆ ಮಾತನಾಡಿದ ಜೇಟ್ಲಿ , ಕಾಳಧನ, ಖೋಟಾನೋಟು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ನಿಲುವಿನಿಂದ ಅನೇಕ ಅಕ್ರಮಗಳು ಬೆಳಕಿಗೆ ಬರುತ್ತಿವೆ ಎಂದು ಹೇಳಿದರು. ಕಾಳಧನಿಕರು ತಪ್ಪಿಸಿಕೊಳ್ಳಬಹುದಾದ ಎಲ್ಲ ಮಾರ್ಗಗಳನ್ನು ಸಮರ್ಥವಾಗಿ ಬಂದ್ ಮಾಡಲಾಗಿದೆ. ತೆರಿಗೆ ವಂಚಿಸದಂತೆ ಮತ್ತು ಬೇನಾಮಿ ಹೆಸರಿನಲ್ಲಿ ವಹಿವಾಟು ನಡೆಸುವುದನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ತೆರಿಗೆ ವಂಚಕರು ಪಾರಾಗುವ ಸಾಧ್ಯತೆ ಇಲ್ಲ ಎಂದು ಜೇಟ್ಲಿ ತಿಳಿಸಿದರು. ಈ ರೀತಿಯಾಗಿ ಸರ್ಕಾರದ ಕ್ರಮ ದಿಂದಾಗಿ ಕಪ್ಪು ಹಣ ತೆಗೆದು ಕೊಳ್ಳುವ ರಿಯಲ್ ಎಸ್ಟೇಟ್ ಉದ್ದಿಮೆಗಳಿಗೆ ನೊಟುಗಳ ಬದಲಾವನೆಯಿಂದಾಗಿ ವಹಿವಾಟು ಕಡಿಮೆಯಾಗುವ ಸಾದ್ಯತೆಯಿದೆ.

ಆದರೆ, ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲೂ ಸಂಪೂರ್ಣ ಬ್ಯಾಂಕ್‌ ಖಾತೆಯ ಮೂಲಕವೇ ಪಾವತಿ ಪಡೆಯುವ ಸಾಕಷ್ಟು ಬಿಲ್ಡರ್‌ಗಳಿದ್ದಾರೆ. ಅವರಿಗೆ ಈ ನಿರ್ಧಾರಿಂದ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ತೆರಿಗೆ ವಂಚಿಸಲು ಕಪ್ಪು ಹಣ ಸ್ವೀಕರಿಸುವ ರಿಯಲ್‌ ಎಸ್ಟೇಟ್‌ ಉದ್ದಿಮೆಗಳಿಗೆ ಹಾಗೂ ಕಪ್ಪು ಹಣ ನೀಡಿ ಆಸ್ತಿ ಖರೀದಿಸುವ ಶ್ರೀಮಂತ ಕುಳಗಳಿಗೆ ನಿಶ್ಚಿತವಾಗಿ ತೊಂದರೆಯಾಗಲಿದೆ ಎಂದು ಭಾರತೀಯ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ಒಕ್ಕೂಟ ಹೇಳಿಕೊಂಡಿದೆ. ಬಿಳಿ ಹಣ ನೀಡಿ ಸ್ಥಿರಾಸ್ತಿ ಖರೀದಿಸಿದವರು ಅದನ್ನು ಮಾರಾಟ ಮಾಡುವಾಗ ಕ್ಯಾಪಿಟಲ್‌ ಗೇನ್ಸ್‌ ತೆರಿಗೆ ತಪ್ಪಿಸಲು ಬಹಳ ಕಡಿಮೆ ಮೊತ್ತವನ್ನು ಬ್ಯಾಂಕ್‌ ಖಾತೆ ಮೂಲಕ ಹಾಗೂ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವುದಿದೆ. ಹೀಗೆ ಆಸ್ತಿ ಖರೀದಿಸುವವರಿಗೂ ನೋಂದಣಿ ಸಮಯದಲ್ಲಿ ನಗದು ರೂಪದಲ್ಲಿ ಪಾವತಿಸಿದ ಹಣಕ್ಕೆ ಸ್ಟಾಂಪ್‌ ಡ್ಯೂಟಿ ಅನ್ವಯಿಸುವುದಿಲ್ಲ. ಈ ವ್ಯವಹಾರದಲ್ಲಿ ಲಕ್ಷಾಂತರ ರೂ. ಕಪ್ಪು ಹಣ ಕೆಲವರ ಕೈಯಲ್ಲಿ ಸಂಗ್ರಹವಾಗುತ್ತದೆ. ಈ ಹಣ 500 ಹಾಗೂ 1000 ರೂ.ಗಳ ನೋಟುಗಳಲ್ಲೇ ಇರುವುದರಿಂದ ಈ ನೋಟುಗಳ ನಿಷೇಧದಿಂದ ಕಪ್ಪುಹಣದ ವಹಿವಾಟಿಗೆ ತಡೆ ಬೀಳುವುದರ ಜೊತೆಗೆ ರಿಯಲ್‌ ಎಸ್ಟೇಟ್‌ ಖರೀದಿಯೂ ಕಡಿಮೆಯಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಕಪ್ಪು ಹಣದಿಂದಾಗಿಯೇ ಮೆಟ್ರೋ ನಗರಗಳಲ್ಲಿ ರಿಯಲ್‌ ಎಸ್ಟೇಟ್‌ ದರಗಳು ಭಾರಿ ಏರಿಕೆ ಕಂಡಿದ್ದವು. ಈಗ ಗ್ರಾಹಕರನ್ನು ಆಕರ್ಷಿಸಲು ರಿಯಲ್‌ ಎಸ್ಟೇಟ್‌ ಕಂಪನಿಗಳು ದರ ಸಮರಕ್ಕೆ ಇಳಿದು ಕಡಿಮೆ ಬೆಲೆಗೆ ಆಸ್ತಿಗಳನ್ನು ಮಾರಾಟ ಮಾಡುವ ಸಾಧ್ಯತೆಗಳಿವೆ.ಈ ಕಪ್ಪು ಹಣದ ವಹಿವಾಟು ಈ ರೀಯಲ್ ಎಷ್ಟೇಟ್ ನಲ್ಲಿ ತುಂಬಾ ನಡೆಯುತ್ತಿರುತ್ತಿರುತ್ತದೆ. ಆಂದರಿಮದ ಗಂಭೀರ ಪರಿಣಾಮ ಉಂಟಾಗಲಿದೆ.