ಇದು ನೈಜ ಕಥೆ ಅಮ್ಮನ ಪ್ರೀತಿ ಮುಂದೆ ಉಗ್ರನೂ ಯೋಧರಿಗೆ ಶರಣಾದ ಅದ್ಭುತ ಸ್ಟೋರಿ ಒಮ್ಮೆ ಓದಿ..!

0
2031

Kannada News | kannada Useful Tips

ಅಮ್ಮ ಅಂದ್ರೆ ಅದೇನೋ ಒಂದು ಶಕ್ತಿ ಕಣ್ರೀ ಈ ತಾಯಿ ಮನಸ್ಸು ಮಾಡಿದರೆ ಏನ್ ಬೇಕಾದರೂ ಮಾಡಬಾಹುದು ಅನ್ನೋದಕ್ಕೆ ಈ ಕಥೆಯೇ ಸಾಕ್ಷಿ. ಜಗತ್ತಿನಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ ಎನ್ನುತ್ತಾರೆ, ಮಗುವನ್ನು ಒಂಭತ್ತು ತಿಂಗಳು ಹೊತ್ತು ಹೆತ್ತು, ಮಡಿಲಲ್ಲಿ ಹಾಕಿಕೊಂಡು ಸಾಕಿ ಸಲಹಿ ಕಾಪಾಡುವಳು ಹೆತ್ತ ತಾಯಿ. ಅಮ್ಮ ಎಂಬ ಶಬ್ದವನ್ನು ಬಾಯ್ತುಂಬಾ ಕರೆಯೋದೆ ಒಂದು ಹರುಷ ನಮ್ಮೆಲ್ಲರ ಪಾಲಿಗೆ ಅವಳೇ ದೈವವಾಗಿದ್ದಾಳೆ, ತಾಯಿಗಿಂತ ಮಿಗಿಲಾದುದು ಯಾವುದೂ ಇಲ್ಲ. ತಾಯಿ ಮಗುವಿಗೆ ತೋರಿಸುವ ಮಮತೆಯು ನಿಷ್ಕಲ್ಮಶವಾಗಿರುತ್ತದೆ.

source:marathipizza.com

ತಾಯಿಯ ಮಮತೆ ಪಡೆಯುವ ಮಗುವೇ ಧನ್ಯ. ತಾಯಿ ಮಗುವಿಗೆ ತೋರಿಸುವ ಪ್ರೀತಿ, ವಿಶ್ವಾಸವನ್ನು ಎಷ್ಟು ಬಣ್ಣಿಸಿದರೂ ಸಾಲದು. ಅಳುವ ಕಂದನನ್ನು ಅಪ್ಪಿಕೊಂಡು ತನ್ನ ಮಡಿಲಲ್ಲಿ ಹಾಕಿಕೊಂಡು ಅಮೃತಕ್ಕಿಂತ ಮಿಗಿಲಾದ ಆ ತಾಯಿಯ ಎದೆಹಾಲು ಉಣಿಸುವದರ ಮೂಲಕ ಆ ಮಗುವಿಗೆ ಸಮಾಧಾನ ಮಾಡುತ್ತಾಳೆ.

source:Blue Maize

ತಾಯಿ ಮನಸ್ಸು ಮಾಡಿದರೆ ಒಬ್ಬ ಉಗ್ರನನ್ನು ಸಾಮಾನ್ಯ ಮನುಷ್ಯನ್ನನು ಮಾಡಿದ ಕಥೆ ಇದು ಓದಿ.

26 ವರ್ಷದ ಉಮರ್‌ ಖಾಲೀದ್ ಎಂಬ ಉತ್ತರ ಕಾಶ್ಮೀರದ ಯುವಕ ಪಾಕ್‌ನ ಲಷ್ಕರ್ ಏ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ್ದ. ಕಳೆದ ವರ್ಷ ಮಾರ್ಚ್‌ನಲ್ಲಿ ಮನೆಯಿಂದ ಹೋಗಿದ್ದ ಈತ ಮರಳಿ ಬಂದಿರಲಿಲ್ಲ. ಉಗ್ರ ಸಂಘಟನೆ ಜೊತೆ ಸೇರಿ ಹೀನ ಕೃತ್ಯಗಳಲ್ಲಿ ಭಾಗಿಯಾಗಿದ್ದ.

ಈ ಮಧ್ಯೆ ಸೊಪೊರೆ ಪ್ರದೇಶದ ಮನೆಯೊಂದರಲ್ಲಿ ಈ ಉಗ್ರ ಅಡಗಿರುವುದನ್ನು ಭದ್ರತಾ ಪಡೆ ಅರಿತು ಕಾರ್ಯಾಚರಣೆಗೆ ಇಳಿದಿದ್ದರು. ಆಗ ಇವರ ಮನೆ ಹಾಗೂ ತಾಯಿ ಸಮೀಪದಲ್ಲೇ ಇರುವುದನ್ನು ಭದ್ರತ ಪಡೆ ಅರಿತಿದ್ದಾರೆ. ತಕ್ಷಣ ಉಗ್ರನ ತಾಯಿಯನ್ನು ಸ್ಥಳಕ್ಕೆ ಕರೆ ತಂದಿದ್ದಾರೆ. ಉಗ್ರನ ಮನವೊಲಿಸುವಂತೆ ಕೋರಿದ್ದಾರೆ.

source:Pinterest

ಇದಕ್ಕೆ ಉಗ್ರನ ತಾಯಿ ಒಪ್ಪಿಕೊಂಡು ತನ್ನ ಮಗ ಅಡಗಿದ್ದ ಮನೆಯೊಳಗೆ ಹೋಗಿ ಆತನೊಂದಿಗೆ 2 ಗಂಟೆ ಮಾತನಾಡಿದ್ದಾಳೆ. ಪ್ರೀತಿಯಿಂದ ಮನವೊಲಿಸಿದ್ದಾಳೆ. ಅಮ್ಮನ ಪ್ರೀತಿಗೆ ಶರಣಾದ ಉಗ್ರ ಭದ್ರತಾ ಪಡೆಗೆ ಶರಣಾಗುವುದಾಗಿ ತಿಳಿಸಿದ್ದಾನೆ. ಬಳಿಕ ಮನೆಯಿಂದ ಹೊರಬಂದು ತನ್ನ ಗನ್‌ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗಿದ್ದಾನೆ.

source:liveinternet.ru

ನೋಡಿ ತಾಯಿ ಅಂದ್ರೇನೆ ಒಂದು ಶಕ್ತಿ ತಾಯಿ ಬಿಟ್ಟು ಈ ಜಗತ್ತಲ್ಲಿ ಮತ್ತೆ ಯಾವುದಕ್ಕೂ ಈ ಶಕ್ತಿ ಇಲ್ಲ ಅನ್ಸುತ್ತೆ.
ತಾಯಿ ಅನ್ನೋ ಈ ಎರಡು ಪದದಲ್ಲಿ ಎಷ್ಟೊಂದು ಪ್ರೀತಿ ಮಮತೆ ಅನ್ನೋದು ಇದೆ . ನೀವು ಯಾವತ್ತು ನಿಮ್ಮ ತಾಯಿನ ನೋಯಿಸಬೇಡಿ ಮತ್ತು ನಿಮ್ಮ ತಾನೇ ತಾಯಿಗಳನ್ನು ಸಾಕಿ ಅವರ ಅರೋಗ್ಯ ನೋಡಿಕೊಳ್ಳಿ.

Also Read: ಈ ವೀಕೆಂಡ್ ಎಲ್ಲಾದ್ರೂ ಟ್ರೆಕ್ ಮಾಡಬೇಕು ಅಂತಿದ್ರೆ ಊಟಿ ಕೊಡೈಕನಾಲ್ ಅಷ್ಟೇ ರಮಣೀಯವಾಗಿರೋ ಸ್ಕಂದಗಿರಿಗೆ ಹೋಗ್ಬನ್ನಿ..