ಮನೆ ಕಟ್ಟಿಸುವ ಆಸೆ ಯಾರಿಗೆ ಇರುವುದಿಲ್ಲ. ಎಲ್ಲರಿಗೂ ಕನಸಿನ ಮನೆ ಕಟ್ಟುವ ಆಸೆ ಇದ್ದೇ ಇರುತ್ತದೆ. ಹೀಗೆ ಆಸೆಯ ಬೆನ್ನು ಹತ್ತಿ ಕೈ ಸುಟ್ಟುಕೊಂಡವರು ರಾಜ್ಯಧಾನಿಯಲ್ಲಿ ಸಿಗುತ್ತಾರೆ. ಟಿಜಿಎಸ್ ಮತ್ತು ಗೃಹ ಕಲ್ಯಾಣ ಸೇರಿದಂತೆ ನಾನಾ ಯೋಜನೆಗಳ ಹೆಸರಲ್ಲಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪಿ ಈಗ ಪೊಲೀಸರ ಅತಿಥಿ.
2012ರಲ್ಲಿ ಸಹಸ್ರಾರು ಜನ 1 ಲಕ್ಷ ಹಾಗೂ 1.2 ಕೋಟಿ ಹಣವನ್ನು ಮೂರು ಬೆಂಗಳೂರಿನ ರಿಯಲ್ ಎಸ್ಟೆಟ್ ಕಂಪನಿಗಳಲ್ಲಿ ತೊಡಗಿಸುತ್ತಾರೆ. ಇದರಲ್ಲಿ ಮೊದಲನೇಯದು ಡ್ರೀಮ್ ಇನ್ಫ್ರಾ ಇಂಡಿಯಾ ಲಿಮಿಟೆಡ್, ದಿಶಾ ಚೌಧರಿ ಒಡೆತನದ್ದು, ಎರಡನೇಯದು ಗ್ರುಹ ಕಲ್ಯಾಣ ಸಹ ಇವರೇ ನಡೆಸುತ್ತಿದ್ದರು. ಆದರೆ ಟಿಜಿಎಸ್ ಮಾತ್ರ ಮಂದೀಪ್ ಕೌರ್ ಅವರು ನಡೆಸುತ್ತಿದ್ದರು.
ಈ ಮಾಲೀಕರು ತಮಗೆ ಬಿಬಿಎಂಪಿ ಇಂದ ಪರವಾನಿಗೆ ಸಿಕ್ಕಿದೆ. ಆರು ತಿಂಗಳಲ್ಲಿ ಮನೆ ಕಟ್ಟಿ ಕೊಡುತ್ತೇವೆ ಎಂದು ಆಶ್ವಾಸನೆಯನ್ನು ನೀಡುತ್ತಾರೆ. ಇದನ್ನು ನಂಬಿದ ಗ್ರಾಹಕ ಹಣ ನೀಡುತ್ತಾರೆ, ಕಲೆವು ದಿನಗಳ ಬಳಿಕ ಮಾಲೀಕರನ್ನು ಕೇಳಿದಾಗ ಯೋಜನೆ ಪ್ರಗತಿಯಲ್ಲಿರುವುದಾಗಿ ತಿಳಿಸುತ್ತಾರೆ. ಇನ್ನು ಇದೆ ಉತ್ತರ ಪದೆ ಪದೆ ಬರುತ್ತಿದ್ದಂತೆ ಹಣ ನೀಡಿದವರು ಹಣ ಹಿಂದಿರುಗಿಸುವಂತೆ ಕಾಟ ನೀಡುತ್ತಾರೆ.
ಮಾಲೀಕರು ಗ್ರಾಹಕರ ಆಕ್ರೋಶಕ್ಕೆ ಬೇಸತ್ತು. ಚೆಕ್ ಮೂಲಕ ಹಣ ನೀಡುತ್ತಾರೆ. ಚೆಕ್ ಪಡೆದ ಗ್ರಾಹಕ ಬ್ಯಾಂಕ್ ಗೆ ಹೋಗಿ ಚೆಕ್ ಹಾಕಿದಾಗ ಚೆಕ್ ಬೌನ್ಸ್ ಮೆಸೆಜ್ ಬರುತ್ತದೆ.
ಹಣ ಕಳೆದುಕೊಂಡವರ ಆಕ್ರೋಶ ಮುಗಿಲು ಮುಟ್ಟಿದೆ ಇದನ್ನು ಅರಿತ ಸರ್ಕಾರ ತನಿಖೆಯನ್ನು ಸಿಐಡಿ ನಡೆಸಲಿದೆ ಎಂದು ತಿಳಿಸಿದೆ.
ಪ್ರಕರಣಕ್ಕೆ ಸಂಭಂಧಿಸಿದಂತೆ ಬೆಂಗಳೂರು ಪೊಲೀಸರು ಸಚಿನ್ ನಾಯಕ್ ಅವರನ್ನು ಬಂಧಿಸಿದ್ದಾರೆ. ಅಲ್ಲದೆ ಆರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
2016 ರ ಡಿಸೆಂಬರ್ ನಲ್ಲಿ ಸಚಿನ್ ನಾಯಕ್ ಮತ್ತು ಆತನ ಪತ್ನಿ ದಿಶಾ ಚೌಧರಿ, ಹಾಗೂಕಂಪನಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನುಬಂಧಿಸಲಾಗಿತ್ತು.
ಸಚಿನ್ ನಾಯಕ್ ನಡೆಸುತ್ತಿದ್ದ ಈ ಕಂಪನಿಗಳಿಗೆ ಆತನ ಪತ್ನಿ ದಿಶಾ ಚೌಧರಿ ಸಿಇಓ ಆಗಿನೇಮಕಗೊಂಡಿದ್ದಳು. ಸಾವಿರಾರು ಗ್ರಾಹಕರಿಂದ ನೂರಾರು ಕೋಟಿ ಹಣವನ್ನುಮುಂಗಡವಾಗಿ ಪಡೆದಿದ್ದ ಸಚಿನ್ ನಾಯಕ್ ಅವರಿಗೆ ಪ್ಲ್ಯಾಟ್ ಗಳನ್ನು ನೀಡಿರಲಿಲ್ಲ.