KGF ಮತ್ತು ದಿ ವಿಲನ್ ಸಿನಿಮಾಗಳು ಅಭಿಮಾನಿಗಳ ತಲೆಯಲ್ಲಿ ದಿನಕ್ಕೊಂದು ಹುಳ ಬಿಡುತ್ತಿರುವುದು ಯಾಕೇ ಅಂತ ಗೊತ್ತ??

0
545

ರಾಕಿಂಗ್ ಸ್ಟಾರ್ ಯಶ್ ಅವರ kgf ಸಿನಿಮಾ ಕಳೆದ ಒಂದೂವರೆ ವರ್ಷದಿಂದ ಸುದ್ದಿಯಲ್ಲಿದೆ ಈ ಸಿನಿಮಾದಲ್ಲಿ ಅಭಿಮಾನಿಗಳಿಗೆ ಹೆಚ್ಚು ಹುಚ್ಚು ಹಿಡಿಸಿರುವ ವಿಷಯ ಅಂದ್ರೆ ಯಶ್ ಅವರ ‘ದಾಡಿಯ’ ಕದರ್ ಮತ್ತು ಹೇರ್ ಸ್ಟೈಲ್ ಇದನ್ನೇ ನೋಡಿ ಯಶ್ ಅವರ ಅಭಿಮಾನಿಗಳು ಕಳೆದ ಒಂದೂವರೆ ವರ್ಷದಿಂದ ತಮ್ಮ ಹೀರೋನ ಸ್ಟೈಲ್ ಅಲ್ಲಿ ಸೇವಿಂಗ್, ಹೇರ್ ಸ್ಟೈಲ್ ಮಾಡಿಕೊಂಡು ಬಂದಿದ್ದಾರೆ ಈ ಸೂಪರ್ ಸ್ಟೈಲ್ ನೋಡಿ ಬೇಸತ ಮನೆಯವರು ನಿಮ್ಮ ಕೂದಲಿಗೆ ಕತ್ರಿಪೂಜೆ ಯಾವಾಗೆ ಅಂದ್ರೆ kgf ರಿಲೀಸ್ ಆದ ಮೇಲೆ ಎಂಬ ಮಾತಿನಿಂದ ಕಳೆದ ಒಂದೂವರೆ ವರ್ಷದಿಂದ ಕಾಯಿತ್ತಿರುವ ಅಭಿಮಾನಿಗಳ ತಲೆಯಲ್ಲಿ ಏನೇನೋ ವಿಚಾರಗಳು ಹೊಳೆಯಲು ಶುರುವಾಯಿತು ಅದು ಏನ್ ಅಂದ್ರೆ..? ಯಶ್ ಅವ್ರು ಕೊದಲಿಗೆ ಕತ್ರಿಹಾಕಿದ್ರು “ಕೆಜಿಎಪ್” ಹೊರಬರುವ ಮಾತೆಯಿಲ್ಲ ಎಂಬ ನಿರಾಸೆಯಲ್ಲಿರುವ ಅಭಿಮಾನಿಗಳಿಗೆ ಯಶ್ ಬಿಗ್ ಬ್ರೇಕಿಂಗ್ ಕೊಟ್ಟಿದ್ದಾರೆ.

ಕೆಜಿಎಫ್ ಸಿನಿಮಾ ತಂಡ ಮೇಕಿಂಗ್ ವೀಡಿಯೊ ಒಂದು ಬಿಟ್ರೆ ಯಾವುದೇ ಮಾಹಿತಿಯನ್ನು ಹೊರಬಿಟ್ಟಿರಲಿಲ್ಲ. ಈ ಹಿಂದೆ ಕೆಜಿಎಪ್ ಅಡ್ಡಾದಿಂದ ಬರ್ತಿರೋ ದಿನಕ್ಕೊಂದು ನ್ಯೂಸ್ ಗಾಳಿಯ ಸುದ್ದಿ ಅಂತೆ, ಈಗ ಯಶ್ ಅವರೇ kgf ಸಿನಿಮಾದ ಟ್ರೇಲರ್ ಬಗ್ಗೆ ಬ್ರೆಕಿಂಗ್ ಕೊಟ್ಟಿದ್ದಾರೆ ಅದು ಏನ್ ಅಂದ್ರೆ ಸೆಪ್ಟೆಂಬರ್ ಅಲ್ಲಿ ರಿಲೀಸ್ ಆಗೋ kgf ಟ್ರೇಲರ್ ಅಕ್ಟೋಬರ್ ನಲ್ಲಿ ರಿಲೀಸ್ ಆಗುತ್ತೆ ಅಂತ ಕುದ್ದಾಗಿ ಯಶ್ ಅವರೇ ಅಭಿಮಾನಿ ಒಬ್ಬರ ಪ್ರಶ್ನೆಗೆ facebook ನಲ್ಲಿ ರಿಪ್ಲೈ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ಸ್ವಲ್ಪಮಟ್ಟಿನ ಖುಷಿ ಕಂಡ್ರು ಸಿನಿಮಾ ಬರೋದು ಇನ್ನು ಲೇಟ್ ಆಗುತ್ತೆ ಅಂತ ಮತ್ತೆ ನಿರಾಸೆಯಲ್ಲಿ ಮುಳುಗಿದ್ದಾರೆ. ಹೀಗೆ ಅಭಿಮಾನಿಗಳು ಒಂದು ಹೊಸ ಸಿನಿಮಾ ಬರುತ್ತೆ ಅಂತ ತಿಳಿದರೆ ಸಾಕು ಅದರಲ್ಲಿ ಇರೋ ತಮ್ಮ ನೇಚಿನ ನಾಯಕನ ಸ್ಟೈಲ್ಅನ್ನೇ ಮಾಡಲು ಮುಂದಾಗುತ್ತಾರೆ ಅದರಲ್ಲಿ ಈ kgf ಸಿನಿಮಾದಲ್ಲಿ ಯಶ್ ಅವರ ವಿಭಿನ್ನ ಗಡ್ಡದ ವಿಶೇಷತೆ ಎಲ್ಲರಲೂ ಮನೆಮಾಡಿದೆ ಈ ಹೇರ್ ಸ್ಟೈಲ್ ಹುಡುಗರಿಗೆ ತುಂಬಾ ಇಷ್ಟವಾದ್ರೆ ಹುಡುಗಿಯರಿಗೆ ಅಷ್ಟೊಂದು ಲೈಕ್ ಆಗ್ತಿಲ್ಲ ಎಂಬುದು ಕೇಳಿಬರುತ್ತಿತು.

ಇಂತಹದೆ ಸುದ್ದಿಯಲ್ಲಿರುವ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮತ್ತು ಕಿಚ್ಚಾ ಸುದೀಪ್ ಜೋಡಿಯಾಗಿ ಮಾಡಿರುವ ದಿ ವಿಲನ್ ಸಿನಿಮಾ ಗಂಟೆಗೊಂದು ವಿವಾದ ಸೃಷ್ಟಿ ಮಾಡುತ್ತಿದೆ. ಈ ಹಿಂದೆ ಟೀಸರ್ ರಿಲೀಸ್ ಆದಾಗೆ ಶಿವಣ್ಣ ಹಾಗೂ ಸುದೀಪ್ ಅಭಿಮಾನಿಗಳಲ್ಲಿ ವಾರ್ ಶುರುವಾಗಿತ್ತು ಅದರಲ್ಲೂ ಸುದೀಪ್ ಟೀಸರ್ ಹೆಚ್ಚು ವ್ಯೂ ಪಡೆದಿತ್ತು ಇದೆ ವಿಷಯಕ್ಕೆ ಸಾಕಷ್ಟು ವಿವಾದ ನಡೆದವು ಅಂದಿನಿಂದ ಶಿವಣ್ಣನ ಫ್ಯಾನ್ಸ್ ಸುದೀಪ್ ಟೀಸರ್ ಮೇಲೆ ಕಣ್ಣು ಇಟ್ಟಿದ್ರು ಅನ್ಸುತ್ತೆ. ಯಾಕೆಂದ್ರ ಕೆಲವೂ ದಿನಗಳ ಹಿಂದೆ ರಿಲೀಸ್ ಆದ ಶಿವಣ್ಣನ ಟಿಕ್ ಟಿಕ್ ಸಾಂಗ್ 10 ಮಿಲಿಯನ್ ವ್ಯೂ ಗಡಿದಾಟಿದೆ.

ಎಲ್ಲದಕೂ ವಿಶೇಷ ಅಂದ್ರೆ ಈ ಸಿನಿಮಾದ ಎಲ್ಲ ಹಾಡುಗಳಲ್ಲಿ ‘ಟಿಕ್ ಟಿಕ್ ಹಾಡು’ ಒಂದು ಕೋಟಿ ವೀಕ್ಷಣೆ ಪಡೆದು ಹೆಸರು ಮಾಡುತ್ತಿದೆ. ಹೀಗಾಗಿ ಶಿವಣ್ಣನ ಅಭಿಮಾನಿಗಳು ರಾಜಾದಿರಾಜನೇ ರಾಕ್ಷಕ್ಷರ ರಾಜಾ ಎಂದು ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಹಾಡಿನಲ್ಲಿರುವ “ನಿನ್ನೆಮೊನ್ನೇ ಬಂದವರು ಎಲ್ಲ ನಂಬರ್ ಒನ್ ಅಂತಾರೋ ಅವ್ರಅವರ ಸಂಘ ಕಟ್ಕೊಂಡು ಬಿರುದು ಹಿಡ್ಕೊಂಡು ನಿಂತಾರೋ ನಿಂಗೆ ಆ ನಂಬರ್’ಗಳೇ ಲೇಖಕಿಲ್ಲಣ್ಹೋ” ಎಂಬ ಹಾಡಿನ ಚುಟುಕು ಹೆಚ್ಚು ಹವದಲ್ಲಿದೆ. ಒಟ್ಟಾರೆಯಾಗಿ ಕನ್ನಡ ಸಿನಿಮಾರಂಗ 2018-19 ರಲ್ಲಿ ಕೋಟಿ ಕೋಟಿ ಕರ್ಚುಮಾಡಿ ಹೊಸ ಹೊಸ ಸಿನಿಮಾ ಹೊರ ತರುತ್ತಿದೆ ಸಿನಿಮಾ ಪ್ರಿಯರಿಗೆ ಅಂತು ಯಾವ ಸಿನಿಮಾ ನೋಡುವುದು ಯಾವುದನ್ನು ಬಿಡುವುದು ಎಂಬ ಯೋಚನೆ ಮೂಡುತ್ತಿದೆ.