ಚಂದನವನದ​ ನಟ, ನಿರ್ಮಾಪಕರಿಗೆ IT ಬಿಗ್ ಶಾಕ್ ನೀಡಲು ಹಿಂದಿರುವ ಕಾರಣವೇನು ಗೊತ್ತೇ.?

0
497

ಸ್ಯಾಂಡಲ್​ವುಡ್​ಗೆ ಐಟಿ ಅಧಿಕಾರಿಗಳು ಮಾಸ್ಟರ್ ಪ್ಲಾನ್ ಮಾಡಿ ಬಿಗ್ ಶಾಕ್ ನೀಡಲು ಕಳೆದ ಒಂದು ವಾರದಿಂದ ಇದಕ್ಕೆ ಸಿದ್ಧತೆ ಕೂಡ ನಡೆಸಿ. ಸುದೀಪ್​, ಪುನೀತ್​ ರಾಜ್​ಕುಮಾರ್​, ಯಶ್​, ಶಿವರಾಜ್​ಕುಮಾರ್​, ವಿಜಯ್​ ಕಿರಗಂದೂರು, ಜಯಣ್ಣ, ರಾಕ್​ಲೈನ್​ ವೆಂಕಟೇಶ್​, ಸಿಆರ್​ ಮನೋಹರ್​ ಅವರ ಆದಾಯದ ಬಗ್ಗೆ ಐಟಿ ಅಧಿಕಾರಿಗಳು ಸಮಗ್ರ ಮಾಹಿತಿ ಕಲೆ ಹಾಕಿದ್ದರು. ಸೂಕ್ತ ದಾಖಲೆ ಪಡೆದ ನಂತರವೇ ದಾಳಿ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಈ ಮೊದಲು ಪ್ಲಾನ್​ ಮಾಡಿದಂತೆ ಇಂದು ಬೆಳಗ್ಗೆ ಖಾಸಗಿ ವಾಹನಗಳಲ್ಲಿ ಬಂದು ದಾಳಿ ನಡೆಸಿದ್ದಾರೆ. ಸತತ 7 ಗಂಟೆಗಳಿಂದ ಐಟಿ ಪರಿಶೀಲನೆ ಮುಂದುವರೆಯುತ್ತಿದೆ. ಇಷ್ಟೆಲ್ಲ ಸಿದ್ಧತೆ ನಡೆದಿದ್ದರೂ ಎಲ್ಲಿಯೂ ದಾಳಿಯ ಒಂದಿಂಚೂ ಮಾಹಿತಿಯೂ ಹೊರಬಂದಿಲ್ಲ.

@publictv.in

Also read: ಕನ್ನಡ ಚಿತ್ರರಂಗದ ಮೇಲೆ IT ಶಾಕ್; ಸುದೀಪ್, ಪುನಿತ್, ಯಶ್, ಶಿವರಾಜ್ ಕುಮಾರ, ಸೇರಿದಂತೆ ಹಲವರ ಮನೆ ಮೇಲೆ IT ದಾಳಿ..

ಬುಧವಾರವೇ ಸಿಕಿತ್ತು ಸರ್ಚ್ ವಾರೆಂಟ್

IT ಅಧಿಕಾರಿಗಳು ದಾಳಿ ಮಾಡುವ ಮೊದಲು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆಯಬೇಕು. ಈ ಪ್ರಕ್ರಿಯೆಯನ್ನು ಬುಧವಾರವೇ ಮುಗಿಸಿಕೊಂಡಿದ ಐಟಿ ಅಧಿಕಾರಿಗಳು. ಪೂರ್ವ ಸಿದ್ದತೆಗಾಗಿ ಮೊದಲೇ ಸುಮಾರು 200 ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಗೋವಾದಿಂದಲೂ IT ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿದ್ದರು. ಈ ವಿಷಯನ್ನು ಗುಪ್ತವಾಗಿಡಲಾಗಿತ್ತು.

ಸ್ಯಾಂಡಲ್‍ವುಡ್ ದಾಳಿಗೆ ಕಾರಣ ಏನು?

@publictv.in

ಹೆಸರಾಂತ ನಿರ್ಮಾಪಕರ ಮೂಲಕ ದೊಡ್ಡ ದೊಡ್ಡ ಬಜೆಟ್ ಅನ್ನು ಕೋಟ್ಯಾಂತರ ಹಣಹೊಂದಿರುವ ರಿಯಲ್ ಎಸ್ಟೇಟ್ ಮತ್ತು ಫೈನ್ಯಾನ್ಶಿಯರ್ಸ್‍ ತಮ್ಮ ಬ್ಲಾಕ್ ಮನಿಯನ್ನು ವೈಟ್ ಮನಿ ಮಾಡಲು ನಿರ್ಮಾಪಕರ ಹೆಸರಲ್ಲಿ ಹೊಡಿಕೆ ಮಾಡುತ್ತಿದ್ದಾರೆ. ಥಿಯೇಟರ್, ಮಾಲಿಕರ ಮೂಲಕ ಕೋಟ್ಯಂತರ ರೂಪಾಯಿ ಸುಳ್ಳು ಲೆಕ್ಕ ನೀಡಿ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎನ್ನುವ ಆರೋಪ ಹಿನ್ನೆಲೆ ಒಂದಾದರೆ. ಇನ್ನೊಂದು ಕಾರಣ ಸ್ಯಾಂಡಲ್​ ವುಡ್​ ಚಿತ್ರರಂಗದಲ್ಲಿ ಈಗ ಕೋಟಿ ಕೋಟಿ ಬಜೆಟ್​ ಸಿನಿಮಾ ಸೆಟ್ಟೇರುತ್ತಿದ್ದು, ಸಿನಿಮಾ ಗಳಿಕೆಯಲ್ಲಿಯೂ ದಾಖಲೆಗಳನ್ನು ನಿರ್ಮಿಸುತ್ತಿರುವುದು ಕಾರಣವಾಗಿದೆ.

ಹಿರೋಗಳ ಮೇಲಿನ ದಾಳಿಯ ರಹಸ್ಯವೇನು?

ಸಿನಿಮಾದಲ್ಲಿ ಆದ ಲಾಭ ನಷ್ಟಕ್ಕೆ ನೆರವಾಗಿ ನಿರ್ಮಾಪಕರು ಮಾತ್ರ ಹೊಣೆ ಆಗಿರುತ್ತಿದ್ದಾರೆ. ಆದರೆ ನಟರು ಚಲನಚಿತ್ರದಲ್ಲಿ ಷೇರನ್ನು ಪಡೆದುಕೊಳ್ಳುತ್ತಿದ್ದಾರೆ. ಇವರಿಗೆ ಯಾವುದೇ ನಷ್ಟದ ಸಂಬಂಧ ವಿರುವುದಿಲ್ಲ. ಬಂದ ಲಾಭವನ್ನು ಬ್ಲಾಕ್ ಮೂಲಕ ವೈಟ್ ಮಾಡುತ್ತಿದ್ದಾರೆ. ಕೇವಲ ಆದಾಯ ತೆರಿಗೆ ವಂಚನೆ ಮಾತ್ರ ಅಲ್ಲ. ಚಿತ್ರದಲ್ಲಿ ಬಂದ ಲಾಭವನ್ನು ಗೌಪ್ಯವಾಗಿಟ್ಟು ಬ್ಲಾಕ್ ಮನಿಯನ್ನು ವೈಟ್ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ. ಈ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತೆರಿಗೆಯಲ್ಲಿ‌ ಗೋಲ್‌ಮಾಲ್‌ ಆರೋಪ;

ಕನ್ನಡ ಚಿತ್ರೋದ್ಯಮದಿಂದ ಪ್ರತಿ ವರ್ಷ ಮನರಂಜನಾ ತೆರಿಗೆ ಸಂದಾಯ ಮಾಡುತ್ತದೆ. ಈ ವರ್ಷವೂ ಕೂಡ ಸ್ಯಾಂಡಲ್​ವುಡ್​ ತೆರಿಗೆ ಸಂದಾಯ ಮಾಡಿದೆ. ಆದರೆ ಈ ಹಿಂದೆಗಿಂತಲೂ ಕನ್ನಡ ಸಿನಿಮಾ ರಂಗ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವುದರ ಜೊತೆಗೆ ಕನ್ನಡ ಚಿತ್ರಗಳ ನಿರ್ಮಾಣ ಸಂಖ್ಯೆ ಹಾಗೂ ಬಜೆಟ್ ಮಟ್ಟದಲ್ಲಿಯೂ ಹೆಚ್ಚಳಗೊಂಡಿದೆ. ಆದರೆ ತೆರಿಗೆ ಸಂದಾಯ ಪ್ರಮಾಣದಲ್ಲಿ ಮಾತ್ರ ಯಾವುದೇ ಹೆಚ್ಚಳ ಆಗಿಲ್ಲ. ಈ ಹಿನ್ನಲೆ IT ಅಧಿಕಾರಿಗಳು ದಾಳಿ ನಡೆಸಿ ಲೆಕ್ಕ ಪತ್ರಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.