ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡುತ್ತಿರುವುದು ದೇವೇಗೌಡರ ಮೇಲಿನ ಅನುಕಂಪದಿಂದ? ಅಥವಾ ಅನರ್ಹಗೊಳ್ಳುವ ಭೀತಿಯಿಂದ ಈ ಥರ ನಾಟಕ ಆಡ್ತಿದ್ದರಾ??

0
314

ರಾಜ್ಯದ ಮೈತ್ರಿ ಸರ್ಕಾರದಲ್ಲಿ ಲೋಕಸಭಾ ಚುನಾವಣೆ ಬರೋಬರಿ ಎರಡು ಸ್ಥಾನಗಳ ಗೆಲುವು ಸಾಧಿಸಿದ್ದಾರೆ ಅದರಲ್ಲಿ ಜೆಡಿಎಸ್ ನ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರು ಗೆಲುವು ಸಾಧಿಸಿದ್ದಾರೆ. ಆದರೆ ದೇವೇಗೌಡರು ಸೋಲು ತನಗೆ ನೋವು ತಂದಿದೆ ಆದ ಕಾರಣಕ್ಕೆ ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡಿ ಮತ್ತೆ ತಾತನನ್ನು ಸ್ಪರ್ಧೆಗೆ ಇಳಿಸಬೇಕು ಎನ್ನುವ ಬೆನ್ನೆಲೆಯಲ್ಲಿ ರಾಜೀನಾಮೆಗೆ ನೀಡಲು ಮುಂದಾಗಿದರು ಆದರೆ ಈಗ ರಾಜೀನಾಮೆ ಹಿಂದೆ ಹಲವು ಅನುಮಾನಗಳು ಮೂಡಿದ್ದು ತಾತನ ಮೇಲಿನ ಪ್ರೀತಿಯಿಂದ ರಾಜೀನಾಮೆ ಕೊಡುತ್ತಿಲ್ಲ ಇದು ದೊಡ್ಡ ಡ್ರಾಮಾ ಕಂಪನಿಯ ಡ್ರಾಮಾ ಎಂದು ಕಾಂಗ್ರೆಸ್ ವಕ್ತಾರ ವಕೀಲರಾದ ದೇವರಾಜ್- ಗೌಡ ಅವರು ಸುವರ್ಣ ಟಿವಿಯ ಸಂದರ್ಶನದಲ್ಲಿ ಹೇಳಿದ್ದಾರೆ.

Also read: ಮೈತ್ರಿಯಲ್ಲಿ ಹೊಸ ಬಾಂಬ್ ರಾಜೀನಾಮೆಗೆ ಪ್ರಜ್ವಲ್ ನಿರ್ಧಾರ; ಒಂದು ವೇಳೆ ಮತ್ತೆ ದೇವೇಗೌಡರು ಸ್ಪರ್ಧೆ ಮಾಡಿದರೆ ತುಮಕೂರಿನ ಪರಿಸ್ಥಿತಿ ಹಾಸನದಲ್ಲಿ ಬರುತ್ತಾ?

ಹೌದು ತಮ್ಮ ಆಸ್ತಿ ವಿವರವನ್ನು ಪ್ರಜ್ವಲ್ ರೇವಣ್ಣ ಮುಚ್ಚಿಟ್ಟು ಚುನಾವಣಾ ಆಯೋಗದ ದಾರಿ ತಪ್ಪಿಸಿದ್ದಾರೆ. ಎನ್ನುವ ಆರೋಪದಲ್ಲಿ ದೂರು ದಾಖಲಾಗಿದೆ. ಆ ಪ್ರಕರಣದ ವಿಚಾರಣೆ ನಡೆದು ಪ್ರಜ್ವಲ್ ಅನರ್ಹಗೊಳ್ಳುತ್ತಾರೆ ಎಂದು ಖಚಿತವಾದ ಹಿನ್ನೆಲೆಯಲ್ಲಿ ಈಗ ರಾಜೀನಾಮೆ ಡ್ರಾಮಾ ಮಾಡುತ್ತಿದ್ದಾರೆ. ಈ ಸಂಬಂಧ ಹಾಸನ ಡಿಸಿ ತನಿಖೆ ನಡೆಸಿ ಆಯೋಗಕ್ಕೆ ವಿಸ್ತೃತ ವಿವರ ಸಲ್ಲಿಸಿದರು, ಈ ದೂರಿನ ಹಿನ್ನೆಲೆಯಲ್ಲಿ ಪ್ರಜ್ವಲ್ ಅನರ್ಹಗೊಳ್ಳುವ ಭೀತಿ ಇದೆ’ ಇದನೆಲ್ಲ ಅರಿತೆ ಈಗ ರಾಜೀನಾಮೆ ನಾಟಕ ಆಡುತ್ತಿದ್ದಾರೆ. ಎನ್ನುವ ಆರೋಪವನ್ನು ವಕೀಲ ದೇವರಾಜ್- ಗೌಡ ಹೇಳಿಕೆ ನೀಡಿದ್ದಾರೆ.

ಪ್ರಜ್ವಲ್ ರಾಜೀನಾಮೆ ಡ್ರಾಮಾನಾ?

ಹಾಸನ ರಾಜಕೀಯದಲ್ಲಿ ಅನುಮಾನ ದಟ್ಟವಾಗಿದೆ. ಪ್ರಜ್ವಲ್ ರಾಜೀನಾಮೆ ನಿರ್ಧಾರದ ಹಿಂದೆ ದೇವೇಗೌಡರು ಮತ್ತು ಅವರ ತ್ಯಾಗ, ಹೋರಾಟಗಳು, ತುಮಕೂರಿನಲ್ಲಿ ಅವರ ಸೋಲಿನ ನೋವು ಮುಂತಾದ ಕಾರಣಗಳನ್ನು ನೀಡಿದರೂ, ರಾಜಕೀಯ ವಲಯದಲ್ಲಿ ಮುಖ್ಯವಾಗಿ ಚರ್ಚೆಗೆ ಒಳಗಾಗುತ್ತಿರುವುದು ಅನರ್ಹತೆಯ ಭೀತಿ. ತುಮಕೂರಿನಲ್ಲಿ ದೇವೇಗೌಡ ಅವರ ಸೋಲಿನಿಂದ ಪಕ್ಷ ಮತ್ತು ರಾಜ್ಯದ ಜನತೆಗೆ ಆಘಾತವಾಗಿದೆ. ಅವರ ಗೆಲುವು ಈ ರಾಜ್ಯಕ್ಕೆ ಅಗತ್ಯವಿತ್ತು. ರಾಷ್ಟ್ರ ರಾಜಕಾರಣದಲ್ಲಿ ಅವರಿಗೆ ಅಪಾರ ಸಂಪರ್ಕ, ಜ್ಞಾನವಿದೆ. ಅವರು ಸಂಸದರಾಗಿದ್ದರೆ ರಾಜ್ಯದ ಜನತೆಗೆ ಅನುಕೂಲ. ಹೀಗಾಗಿ ಅವರು ಮತ್ತೆ ಗೆಲ್ಲಬೇಕು. ಅದಕ್ಕಾಗಿ ಹಾಸನ ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಇದನ್ನು ಆರೋಪಿಸಿದ ದೇವರಾಜ್- ಗೌಡ ಅನರ್ಹದ ಭೀತಿಯಲ್ಲಿ ಇದೆಲ್ಲ ನಾಟಕವೆಂದು ಹೇಳಿದ್ದಾರೆ.

Also read: ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ; ವೈದ್ಯಕೀಯ ವೆಚ್ಚ ಮರುಪಾವತಿ ಮಿತಿ 3 ಲಕ್ಷ ರೂ. ಗೆ ಹೆಚ್ಚಳ ಮಾಡಿ ಹಲವು ಬದಲಾವಣೆ ತಂದ ಸರ್ಕಾರ..

ಅನರ್ಹತೆ ಖಚಿತ?

ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಕಾರ, ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಅನರ್ಹಗೊಂಡು ತಮ್ಮ ಸ್ಥಾನವನ್ನು ಕಳೆದುಕೊಳ್ಳುವುದು ಖಚಿತವಾಗಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸುಳ್ಳು ಆಸ್ತಿ ವಿವರ ಸಲ್ಲಿಸಿರುವುದು ಪ್ರಜ್ವಲ್‌ಗೆ ಸಂಕಷ್ಟ ತಂದೊಡ್ಡಿದೆ. ಈ ಪ್ರಕರಣ ತನಿಖೆಯ ಹಂತದಲ್ಲಿದೆ. ಆರೋಪ ಸಾಬೀತಾದರೆ, ಪ್ರಜ್ವಲ್ ಅನರ್ಹತೆ ಖಚಿತ. ಅಲ್ಲದೆ, ಆರು ವರ್ಷ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದೆ ಇರುವ ನಿರ್ಬಂಧಕ್ಕೆ ಒಳಗಾಗುತ್ತಾರೆ. ಈ ಭೀತಿಯ ಕಾರಣಕ್ಕಾಗಿಯೇ ಅವರು ತರಾತುರಿಯಲ್ಲಿ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಚುನಾವಣಾ ಆಯೋಗದಲ್ಲಿದೆ ಅಂತಿಮ ಪಂದ್ಯ;

Also read: ಪ್ರಧಾನಮಂತ್ರಿ ನ್ಯಾಷನಲ್‌ ಡಯಾಲಿಸಿಸ್‌ ಯೋಜನೆಯ ಅಡಿಯಲ್ಲಿ ಇನ್ಮುಂದೆ ಕಿಡ್ನಿ ರೋಗಿಗಳಿಗೆ ಮನೆಯಲ್ಲೇ ಡಯಾಲಿಸಿಸ್..

ಒಂದು ವೇಳೆ ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಸ್ವೀಕರಿಸಿದರೆ, ಆದಾಯ ತೆರಿಗೆ ಇಲಾಖೆಯ ತನಿಖೆಗೆ ಸೂಚನೆ ನೀಡಬಹುದು. ಇದರಂತೆ ಆದಾಯ ತೆರಿಗೆ ಇಲಾಖೆ ತನಿಖೆಗೆ ಮುಂದಾದರೆ, ದೇವೇಗೌಡರ ಕುಟುಂಬವನ್ನೇ ತನಿಖೆಗೆ ಒಳಪಡಿಸಬೇಕಾಗಬಹುದು. ಏಕೆಂದರೆ, ಎಚ್.ಡಿ. ದೇವೇಗೌಡ ಅವರು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಸಾಲ ನೀಡಿರುವುದಾಗಿ ನಾಮಪತ್ರದಲ್ಲಿ ಮಾಹಿತಿ ನೀಡಿದ್ದರು. ಈ ಬಗ್ಗೆ ಪ್ರಜ್ವಲ್ ರೇವಣ್ಣ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿಲ್ಲ. ಆದರೆ, ಅಜ್ಜಿ ಚನ್ನಮ್ಮ ದೇವೇಗೌಡ ಅವರಿಗೆ ಸಾಲ ನೀಡಿರುವುದಾಗಿ ಪ್ರಜ್ವಲ್ ದಾಖಲಿಸಿದ್ದಾರೆ. ಈ ಎಲ್ಲ ಮಾಹಿತಿಗಳನ್ನು ತನಿಖೆಗೆ ಒಳಪಡಿಸಿದರೆ ಕುಟುಂಬವೇ ಸಂಕಷ್ಟಕ್ಕೆ ಒಳಗಾಗಲಿದೆ. ಎನ್ನುವ ಆರೋಪಗಳು ಕೇಳಿಬರುತ್ತಿವೆ.