ಇಂತಹ ಆಹಾರವನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂದು ಹೇಳುತ್ತಿದೆ ಹೊಸ ಅಧ್ಯಯನ..!!

0
1340

Kannada News | Health tips in kannada

ಬದಲಾಗುತ್ತಿರುವ ಜೀವನಶೈಲಿಯಿಂದ ಮನುಷ್ಯ ಸೇವಿಸುವ ಆಹಾರ ಸಹ ಬದಲಾಗಿದೆ. ಅನ್ನ, ರೊಟ್ಟಿ, ಚಪಾತಿ, ಮುದ್ದೆಯಂತಹ ಪೌಷ್ಟಿಕ ನೈಸರ್ಗಿಕ ಆಹಾರ ಸೇವಿಸುವ ಬದಲು ಪಿಜ್ಜಾ, ಬರ್ಗರ್, ಕೇಕ್, ಹಾಟ್ ಡಾಗ್ ಮತ್ತು ಸೌಸೇಜ್‌, ಸಂಸ್ಕರಿಸಿದ, ಶೀತಲೀಕೃತ ಆಹಾರಗಳ ಸೇವನೆ ಹೆಚ್ಚಾಗಿದೆ.

ಇತ್ತೀಚಿಗೆ ನಡೆದ ಅಧ್ಯಯನದ ಪ್ರಕಾರ ಇಂತಹ ಶೀತಲೀಕೃತ ಆಹಾರವನ್ನು ನಿತ್ಯ ಸೇವಿಸಿದರೆ ಕ್ಯಾನ್ಸೆರ್ ಬರುವುದು ಖಚಿತವಂತೆ. ಫ್ರಿಡ್ಜ್ ನಲ್ಲಿಟ್ಟ ಆಹಾರ ಅಥವಾ ಶೀತಲೀಕೃತ ಆಹಾರದಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆಯಂತೆ. ಅವುಗಳನ್ನು ಸೇವಿಸುವುದರಿಂದ ದೇಹದ ಸಾಮರ್ಥ್ಯ ಕಡಿಮೆಯಾಗುತ್ತದೆಯಂತೆ.

ಇನ್ನು ನೀವು ಇಂತಹ ಶೀತಲೀಕೃತ ಆಹಾರವನ್ನು ದಿನಾಲೂ ತಿಂದರೆ ದೇಹದ ಜೀವ ಕೋಶಗಳಿಗೂ ಕೂಡ ಹಾನಿಯಾಗುವಂತೆ ಮಾಡುತ್ತದೆ. ಇದರ ಪ್ರಥಮ ಹಂತವಾಗಿ ನೀವು ಸಣ್ಣ-ಪುಟ್ಟ ಕಾಯಿಲೆಗಳಾದ ಶೀತ, ಕೆಮ್ಮು ಅಥವಾ ಜ್ವರಯಿಂದ ಬಳಲುತ್ತೀರ ಹಾಗು ಈ ಸಾಮಾನ್ಯ ಕಾಯಿಲೆಗಳನ್ನು ನಿವಾರಿಸಿಕೊಳ್ಳಲು ಸಹ ದೇಹಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ.

ಇನ್ನು ಇದರ ಜೊತೆ-ಜೊತೆಗೆ ಕೆಲವು ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ ಅವು ಯಾವುವು ಎಂದು ನವ್ವು ನಿಮಗೆ ತಿಳಿಸುತ್ತೇವೆ.

ಹೃದಯಾಘಾತ:

ಈ ಆಹಾರಗಳಲ್ಲಿ ರಾಸಾಯನಿಕ ಕ್ರಿಯೆಯಿಂದ ಉತ್ಪಾದನೆಯಾಗುವ ಟ್ರಾನ್ಸ್-ಫ್ಯಾಟ್‌ನ ಪ್ರಮಾಣ ಹೆಚ್ಚಿರುವುದರಿಂದ ಹೃದಯ ಸಂಬಂಧಿ ರೋಗಗಳು ಬರುತ್ತವೆ ಮತ್ತು ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ಅಲ್ಲದೆ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕೂಡ ಇದು ಹೆಚ್ಚಿಸುತ್ತದೆ.

ತೀವ್ರ ರಕ್ತದೊತ್ತಡ:

ಶೀತಲೀಕೃತ ಆಹಾರದಲ್ಲಿ ಸಾಕಷ್ಟು ಪ್ರಿಸರ್ವೇಟಿವ್ ಅಥವಾ ಸಂರಕ್ಷಕಗಳನ್ನು ಹಾಕಿರುತ್ತಾರೆ, ಇದು ಆರೋಗ್ಯದ ಮೇಲೆ ತುಂಬಾ ಅಡ್ಡ ಪರಿಣಾಮ ಬೀರುತ್ತದೆ. ಇಂತಹ ಆಹಾರಗಳಲ್ಲಿ ಸಕ್ಕರೆ ಅಥವಾ ಉಪ್ಪಿನ ಸಾಂದ್ರತೆ ಅತಿ ಹೆಚ್ಚಿರುತ್ತದೆ, ಇದರಿಂದಲೇ ತೀವ್ರ ರಕ್ತದೊತ್ತಡ ಸಮಸ್ಯೆ ಎದುರಾಗುತ್ತದೆ.

ಕ್ಯಾನ್ಸರ್:

ಮಾಂಸ ಸೇರಿದಂತೆ ಹಲವು ಸಂಸ್ಕರಿತ ಹಾಗೂ ಶೀತಲೀಕೃತ ಆಹಾರಗಳು ಮೇದೋಜಿರಕ ಗ್ರಂಥಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಅಧ್ಯಯನದಿಂದ ದೃಢಪಟ್ಟಿದೆ. ಅಲ್ಲದೆ ಹೆಚ್ಚಿನ ಜನರು ಬಳಸುವ ಕಾರ್ನ್ ಸಿರಪ್ ನಲ್ಲಿ ಪ್ರಿಸೆರ್ವೇಟಿವ್‌ಗಳು ಕಾರ್ಸಿನೋಜೆನಿಕ್ ಅಂಶ ಹೆಚ್ಚಾಗಿರುತ್ತದೆ ಇದರಿಂದ ಕ್ಯಾನ್ಸರ್ ಬರುತ್ತದೆ.

ಒಟ್ಟಿನಲ್ಲಿ ನೈಸರ್ಗಿಕವಾಗಿ ದೊರೆಯುವ ಆಹಾರವನ್ನು ಬಳಸದೆ ಇಂತಹ ಸಂಸ್ಕರಿತ ಆಹಾರವನ್ನು ಸೇವಿಸಿದರೆ ಆಪಾಯ ತಪ್ಪಿದ್ದಲ್ಲ ಎಚ್ಚರಿಕೆ…!!

Also Read: ಹೃದ್ರೋಗ ತಡೆಗಟ್ಟಬೇಕು ಅಂದ್ಕೊಳ್ಳೋವ್ರು ಈ ಆರ್ಟಿಕಲ್ ಓದ್ಲೇ ಬೇಕು…

Watch: