ಮತ್ತೆ tiktok, Hello ಆ್ಯಪ್‌ ನಿಷೇಧ? ಕೇಂದ್ರ ಸರ್ಕಾರದಿಂದ ನೋಟಿಸ್‌ ಜಾರಿ; ಎರಡು app -ಗಳಿಂದ ದೇಶದ್ರೋಹಿ ಚಟುವಟಿಕೆ ಶಂಕೆ..

0
94

ಎರಡು ಸಂಸ್ಥೆಗಳಿಗೆ 21 ಪ್ರಶ್ನೆಗಳನ್ನು ಕೇಳಿರುವ ಸರ್ಕಾರ.

Also read: ವಾಹನ ಸವಾರರಿಗೆ ಎಚ್ಚರ ಇನ್ಮುಂದೆ ಚಿಕ್ಕ ತಪ್ಪಿಗೂ ಬೀಳುತ್ತೆ ಸಾವಿರಾರು ರೂ. ದಂಡ; ಯಾವ್ಯಾವ ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ದಂಡ??

ಪ್ರತಿಯೊಬ್ಬರ ಮೊಬೈಲ್, ಮತ್ತು ಮನದಲ್ಲಿ ಹಚ್ಚೆ ಮೂಡಿಸಿರುವ Tiktok app ಮತ್ತೆ ನಿಷೇಧವಾಗುವ ಬಗ್ಗೆ ಮತ್ತೆ ಚರ್ಚೆ ನಡೆಯುತ್ತಿದ್ದು. tiktok, ಹಾಗೂ Hello ಆ್ಯಪ್‌ಗಳು ದೇಶದ್ರೋಹಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎನ್ನುವ ಹಿನ್ನೆಲೆಯಲ್ಲಿ ಮತ್ತೆ ಈ ಎರಡು app-ಗಳನ್ನು ಕೇಂದ್ರ ಸರ್ಕಾರ ಈ ಎರಡೂ ಸಂಸ್ಥೆಗಳಿಗೆ ನೋಟಿಸ್‌ ಜಾರಿಗೊಳಿಸಿದೆ. ಜತೆಗೆ 21 ಪ್ರಶ್ನೆಗಳಿಗೆ ಉತ್ತರಗಳನ್ನೂ ಬಯಸಿದೆ. ಒಂದು ವೇಳೆ ಸೂಕ್ತ ಉತ್ತರ ಬಾರದೇ ಇದ್ದಲ್ಲಿ ನಿಷೇಧ ಹೇರುವ ಎಚ್ಚರಿಕೆಯನ್ನೂ ನೀಡಿದೆ ಎಂದು ಮೂಲಗಳು ತಿಳಿಸಿವೆ.

Tiktok, Hello ಬ್ಯಾನ್?

Also read: ಇನ್ಮುಂದೆ ಯಾವುದೇ ತುರ್ತು ಸೇವೆಗೆ ಒಂದೇ ನಂಬರ್; 112ಕ್ಕೆ ಕಾಲ್ ಮಾಡಿ ಎಲ್ಲ ತರಹದ ತುರ್ತು ಸೇವೆ ಪಡೆಯಬಹುದು..

ಹೌದು ಜನಪ್ರಿಯ ವಿಡಿಯೋ ಸಾಮಾಜಿಕ ಜಾಲತಾಣ ಆಪ್‌ ಆಗಿ ಗುರುತಿಸಿಕೊಂಡಿದ್ದ ಚೀನಾ ಮೂಲದ ಟಿಕ್ ಟಾಪ್ ಮೊಬೈಲ್ ಆಪ್ ಅನ್ನು ಗೂಗಲ್ ಸಂಸ್ಥೆ ಬ್ಲಾಕ್ ಮಾಡಿತ್ತು, ಏಕೆಂದರೆ ಅಶ್ಲೀಲ, ಸ್ಥಳೀಯ ಸಂಸ್ಕೃತಿಗೆ ಧಕ್ಕೆಯಾಗುವ, ಮಕ್ಕಳ ಮೇಲಿನ ದೌರ್ಜನ್ಯದಂಥ ಸಂಗತಿಗಳು ಇರುವುದರಿಂದ ಟಿಕ್ ಟಾಕ್ ಆಪ್ ಅನ್ನು ನಿಷೆಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ನೀಡಿದ ದೂರಿನ ಮೇಲೆ ಟಿಕ್‌ ಟಾಕ್ ಅನ್ನು ನಿಷೇಧಿಸಲಾಗಿತ್ತು, ಇದಕ್ಕೆ ಮತ್ತೆ ಕೋರ್ಟ್ ಅನುಮತಿ ನೀಡದ ಬಳಿಕ app ಬಳಕೆಗೆ ಬಂದಿತ್ತು.
ಈಗ ಮತ್ತೆ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಜನಪ್ರಿಯ ಆ್ಯಪ್ ಗಳನ್ನು ನಿಷೇಧಿಸುವ ಗಂಭೀರ ಚಿಂತನೆಯಲ್ಲಿ ತೊಡಗಿದೆ. ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಎರಡೂ ಆ್ಯಪ್ ಗಳಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದು, ಈ ವರೆಗೂ ಈ ಸಂಸ್ಥೆಗಳಿಂದ ಇದಕ್ಕೆ ಉತ್ತರ ಬಂದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈ ಎರಡೂ ಆ್ಯಪ್ ನ ಆಡಳಿತ ಸಂಸ್ಥೆಯಗಳ ವಿರುದ್ಧ ತೀವ್ರ ಗರಂ ಆಗಿದೆ. ಟಿಕ್ ಟಾಕ್ ಮತ್ತು ಹೆಲೋ ಆಡಳಿತ ಮಂಡಳಿಗಳಿಗೆ ಕೇಂದ್ರ ಸರ್ಕಾರವು 21 ಪ್ರಶ್ನೆಗಳಿಗೆ
ಉತ್ತರ ಕೇಳಿ ನೋಟಿಸ್ ನೀಡಿದೆ. ಇದಕ್ಕೆ ಸೂಕ್ತ ಪ್ರತಿಕ್ರಿಯೆ ಬಾರದಿದ್ದರೆ ಇವುಗಳನ್ನು ನಿಷೇಧಿಸುವುದಾಗಿ ಎಚ್ಚರಿಕೆ ಕೂಡ ನೀಡಿದೆ ಎನ್ನಲಾಗಿದೆ.

Also read: ಹುಡುಗನ ಜೊತೆಗೆ ಹುಡುಗೀಯರು ಡೇಟಿಂಗ್ ಹೋಗೋದ್ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಡೇಟಿಂಗ್ ಸಿಕ್ರೆಟ್..

ಟಿಕ್‌ಟಾಕ್‌ ಹಾಗೂ ಹೆಲೋ ಆ್ಯಪ್‌ಗಳನ್ನು ದೇಶದ್ರೋಹಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಅಂಗಸಂಸ್ಥೆಯಾಗಿರುವ ಸ್ವದೇಶಿ ಜಾಗರಣ ಮಂಚ್‌ ಇತ್ತೀಚೆಗೆ ದೂರು ನೀಡಿತ್ತು. ಅಷ್ಟೇ ಅಲ್ಲದೆ ಸೋಷಿಯಲ್ ಮೀಡಿಯಾ ಸೈಟ್ ಗಳಲ್ಲಿ 11 ಸಾವಿರಕ್ಕೂ ಅಧಿಕ ತಿರುಚಿದ ರಾಜಕೀಯ ಜಾಹೀರಾತು ಪ್ರಸಾರದಿಂದ ಭಾರಿ ಮೊತ್ತದ ಹಣ ಪಾವತಿಯಾಗಿದೆ ಎಂಬ ಆರೋಪದ ಮೇಲೆ ತೆರಿಗೆ ಸಚಿವಾಲಯ ಹೆಲೊನಿಂದ ವಿವರಣೆ ಕೇಳಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೋಟಿಸ್‌ ಜಾರಿ ಮಾಡಿದೆ. ಜತೆಗೆ ದತ್ತಾಂಶ ವರ್ಗಾವಣೆ, ಸುಳ್ಳು ಸುದ್ದಿ, ಮತ್ತಿತರೆ ವಿಚಾರಗಳ ಸಂಬಂಧ 21 ಪ್ರಶ್ನೆಗಳನ್ನೂ ಕೇಳಿದೆ. ಇದರ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಎರಡೂ ಸಂಸ್ಥೆಗಳು, ತಾಂತ್ರಿಕ ಮೂಲಸೌಕರ್ಯ ಅಭಿವೃದ್ಧಿಗಾಗಿ ಮುಂದಿನ 3 ವರ್ಷಗಳಲ್ಲಿ 6700 ಕೋಟಿ ರು. ಹೂಡಿಕೆ ಮಾಡುವ ಯೋಜನೆ ಹೊಂದಿರುವುದಾಗಿ ಹೇಳಿಕೊಂಡಿವೆ.