ಏಷ್ಯಾದಲ್ಲೇ ಹೆಚ್ಚಾಗಿ ಆನೆಗಳಿರುವ ಜಾಗ ಹಾಗು 4 ನದಿಗಳು ಹರಿಯುವ ಮೈಸೂರಿನ ಹೆಗ್ಗಡದೇವನಕೋಟೆ.. ಅತಿ ಹೆಚ್ಚು ಅರಣ್ಯ ಸಂಪತ್ತಿರುವ ಈ ಪ್ರದೇಶಕ್ಕೆ ಒಮ್ಮೆ ಭೇಟಿ ನೀಡಲೇ ಬೇಕು.

0
1050

ಇದೊಂದು ಮ್ಯೆಸೂರು ಜಿಲ್ಲೆಯ ಹಿಂದುಳಿದ ತಾಲ್ಲೂಕು ಎಂದು ಬಿಂಬಿತವಾಗಿದ್ದು. ಅಪಾರ ನ್ಯೆಸರ್ಗಿಕ ಸಂಪತ್ತನ್ನು ಹೊಂದಿದೆ. ಈ ತಾಲ್ಲೂಕು ಇಂದು ಅಪಾರ ಅರಣ್ಯ ಸಂಪತ್ತನ್ನು ಹೊಂದಿದ್ದು ಕಾಡುಪ್ರಾಣಿಗಳಿಗೆ ಸುವ್ಯವಸ್ಥೆಯ ಸ್ಥಳವಾಗಿದೆ. ಇಲ್ಲಿ ನಾಲ್ಕು ನದಿಗಳು ಹರಿಯುತ್ತಿದ್ದು ಪ್ರಮುಖವಾಗಿ ಕಬಿನಿ ನದಿಯನ್ನು ಪ್ರಮುಖ ನದಿಯನ್ನಾಗಿ ಹಾಗೂ ಸುಂದರ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾರ್ಪಾಡಿಸಲಾಗಿದೆ. ಇಲ್ಲಿ ನಾಲ್ಕು ನದಿಗಳು ತುಂಬಿ ಹರಿಯುತ್ತಿವೆ..

ಇಲ್ಲಿ ಅಪಾರವಾಗಿ ಅರಣ್ಯ ಸಂಪತ್ತಿದ್ದು ಕಾಡುಕುರುಬ ಜೇನು ಕುರುಬ ಸೋಲಿಗ ಪಣಿಯ ಯರವ ಹಾಡಿಗಳಲ್ಲಿ ವಾಸಮಾಡುವುದರೊಂದಿಗೆ ಹುಲಿ ಜಿಂಕೆ ಕಾಡುನಾಯಿ ಕಾಡೆಮ್ಮೆ ಮುಂತಾದ ಪ್ರಮುಖ ಪ್ರಾಣಿಗಳ ವಾಸಸ್ತಾನ ವಾಗಿದೆ ಏಷ್ಯಾದಲ್ಲೇ ಹೆಚ್ಚಾಗಿ ಈ ಭಾಗದಲ್ಲಿ ಆನೆಗಳಿರುವುದನ್ನು ನಾವು ಕಾಣಬಹುದಾಗಿದೆ.

ಮೈಸೂರು ಒಡೆಯರ ಸಾಮಂತನಾದ ಹೆಗ್ಗಡದೇವನು ಇಲ್ಲಿ ಆಳ್ವಿಕೆ ನಡೆಸುತ್ತಿದ್ದನು ಈ ನಾಡಿಗೆ ಮೊದಲು ಪುನ್ನಾಟ ಎಂಬ ಹೆಸರಿತ್ತು ಈ ಪುನ್ನಾಟ ಪ್ರದೇಶವನ್ನು ಹೋಯ್ಸಳ ಹಾಗೂ ವಿಜಯನಗರದ ಅರಸರೂ ಕೂಡ ಆಳಿದ್ದಕ್ಕೆ ಇಂದಿಗೂ ಹಲವಾರು ಶಾಸನಗಳು ಇಲ್ಲಿ ಲಭ್ಯವಾಗಿವೆ. ಹೆಗ್ಗಡದೇವನು ಈ ನಾಡಿನಲ್ಲಿ ಮಣ್ಣಿನಿಂದ ಕೋಟೆಯನ್ನು ಕಟ್ಟಿದ್ದರಿಂದ ಇದಕ್ಕೆ ಅವನಹೆಸರಲ್ಲೇ ಹೆಗ್ಗಡದೇವನ ಕೋಟೆ ಎಂಬುದಾಗಿ ಕರೆಯಲಾಗಿದೆ..

ಬಿಡುವಿದ್ದಾಗ ಮೈಸೂರಿನ ಕಡೆ ಹೋದರೇ ಒಮ್ಮೆ ಭೇಟಿ ಕೋಡಿ..

ಶುಭವಾಗಲಿ ಶೇರ್ ಮಾಡಿ..